ವಂದಿಸಿದನೈ ವರತಪೋಧನವೃಂದ ಚಿತ್ತೈಸುವುದು ತಾನೇನೆಂದು ನುಡಿವೆನು ಕೌತುಕಾಮೃತರಸದ ಕಡುಗಡಲಹಿಂದೆ ಕೇಳಿದುದಲ್ಲ ಹೇಳ್ವುದುಮುಂದೆ ಹೊಸತಿದು ನಿಗಮಶತವಿದರೊಂದೊರೆಗೆ ನೆರೆ ಬಾರದೆಂದನು ಸೂತ ಕೈಮುಗಿದು ॥3॥