ಚರಣದ್ ಉಂಗುಟದಲ್ಲಿ ದೇವರು
ತುರುಗಿದರು+++(=ತುಂಬಿದರು)+++, ನೊಸಲಿನಲಿ+++(=ಹಣೆಯಲ್ಲಿ)+++ ಕಮಲಜ-
ನ್, ಉರದಲ್ ಅಗ್ಗದ ರುದ್ರ
ನ್ ಆಸ್ಯದೊಳ್ ಅಗ್ನಿ ವಾಯುಗಳು
ಬೆರಳಲ್ ಇಂದ್ರಾದಿಗಳು ನಯನಾಂ-
ಬು-ರುಹದಲಿ ರವಿ, ನಾಭಿಯಲ್
ಅಭವ+++(→ಶಿವ)+++
ವರ-ಭುಜಾಗ್ರದೊಳ್ ಅಖಿಳ ದಿಗು-ಪಾಲಕರು ರಂಜಿಸಿತು ॥58॥
ಇಲ್ಲಿ ಅಭವಶಬ್ದದ ವಿವಕ್ಷೆಯ್ ಏನು? ರುದ್ರನು ಬನ್ದ ಮೇಲೆ ಮತ್ತೆ ಶಿವನ್ ಏಕೆ? ಬೇರೆ ಯಾವುದಾರೂ ಯುಕ್ತತರ-ಪಾಠಾನ್ತರವ್ ಉಣ್ಟೇ?