ಆತ್ಮೀಯ ಕನ್ನಡ ಕುಟುಂಬ ಸದಸ್ಯರೆಲ್ಲರಿಗೂ ನಮಸ್ಕಾರ,
ಐಐಟಿ ಬಾಂಬೆ ಕನ್ನಡ ಸಂಘದ ವತಿಯಿಂದ ಇದೇ ತಿಂಗಳ ೨೯ನೇ ತಾರೀಖಿನಂದು ಪಿ.ಸಿ.ಸಕ್ಸೇನಾ ಆಡಿಟೋರಿಯಂನಲ್ಲಿ ಸಂಜೆ ೫:೩೦ಕ್ಕೆ ಸಾಂಸ್ಕ್ರತಿಕ ಸಂಜೆ ಕಾರ್ಯಕ್ರಮ ಏರ್ಪಡಿಸಲಾಗಿದೆ. ಕಾರ್ಯಕ್ರಮದ ಕೊನೆಯಲ್ಲಿ ಕರ್ನಾಟಕ ಶೈಲಿಯ ವಿಶೇಷ ಭೋಜನ ವ್ಯವಸ್ಥೆ ಮಾಡಲಾಗಿದೆ. ಅದಕ್ಕಾಗಿ ಪ್ರತೀ ಸದಸ್ಯರಿಗೂ ೨೫೦ ರೂಪಾಯಿ ತಗಲುತ್ತದೆ. ತಮಗೆ ಬೇಕಾಗುವ ಊಟದ ಚೀಟಿಗಳಿಗಾಗಿ ಈ ಕೆಳಗಿನ ಗೂಗಲ್ ಫಾರಂ ಅನ್ನು ತುಂಬಿ. ತಮಗೆ ಪರಿಚಯವಿರುವ ಇತರ ಐಐಟಿ ಬಾಂಬೆ ಕನ್ನಡಿಗರಿಗೂ ಇದರ ಬಗ್ಗೆ ತಿಳಿಸಿ.
ತಮಗೆಲ್ಲಾ ತಿಳಿದಿರುವಂತೆ ಐಐಟಿ ಬಾಂಬೆ ಕನ್ನಡ ಸಂಘದ ವತಿಯಿಂದ ಪ್ರತೀ ವರ್ಷವೂ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮದ ಜೊತೆಗೆ ಸ್ವಾಗತ ಸಮಾರಂಭ, ಬೀಳ್ಕೊಡುಗೆ ಸಮಾರಂಭ, ಕನ್ನಡ ರಾಜ್ಯೋತ್ಸವ ಹೀಗೆ ಹಲವಾರು ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತದೆ. ಪ್ರತೀ ವರ್ಷ ಈ ಎಲ್ಲಾ ಕಾರ್ಯಕ್ರಮಗಳನ್ನು ನಡೆಸಲು ಕನ್ನಡ ಸಂಘದ ಸದಸ್ಯರು ವಾರ್ಷಿಕ ಸದಸ್ಯತ್ವದ ರೂಪದಲ್ಲಿ ಹಣಕಾಸಿನ ನೆರವನ್ನು ನೀಡಿರುತ್ತಾರೆ.ಹಾಗಾಗಿ ಈ ವರ್ಷದ ಕಾರ್ಯಕ್ರಮಗಳ ನಿರ್ವಹಣೆಗಾಗಿ ಸಂಘದ ಸದಸ್ಯರು ತಮಗಾಗುವ ಧನ ಸಹಾಯವನ್ನು ನೀಡಿ ಸಹಕರಿಸಬೇಕಾಗಿ ವಿನಂತಿ. ತಾವು ನೀಡಲಿಚ್ಛಿಸುವ ಹಣಕಾಸಿನ ನೆರವನ್ನು ಮೇಲಿನ ಗೂಗಲ್ ಫಾರಂನಲ್ಲಿ ತುಂಬುವ ಮೂಲಕ ತಿಳಿಸಿ.
ಧನ್ಯವಾದಗಳೊಂದಿಗೆ,
ಐಐಟಿ ಬಾಂಬೆ ಕನ್ನಡ ಸಂಘದ ವತಿಯಿಂದ,
ಪೂರ್ಣಚಂದ್ರ ಸತ್ಯಂಪೇಟೆ.