[IITB Kannada Sangha] ಐ. ಐ. ಟಿ. ಬಾಂಬೆ ಪೂರ್ವ ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಸಂಜೆ ಆಮಂತ್ರಣ

3 views
Skip to first unread message

NIKHIL BHARADWAJ N

unread,
Mar 9, 2018, 7:15:59 AM3/9/18
to kannada-geleyara-b...@googlegroups.com
ಆತ್ಮೀಯ ಕನ್ನಡಿಗರೇ,

ಐ. ಐ. ಟಿ. ಬಾಂಬೆ ಕನ್ನಡ ಸಂಘವು 2018 ನೇ ಸಾಲಿನ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮವನ್ನು ಮಾರ್ಚ್ ತಿಂಗಳ 23 ರಂದು ಆಯೋಜಿಸುತ್ತಿದೆ. ಕನ್ನಡ ಸಂಘದ ವತಿಯಿಂದ ಐ. ಐ. ಟಿ. ಯ ಪೂರ್ವ ವಿದ್ಯಾರ್ಥಿಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲು ಅತ್ಯಂತ ಸಂತಸ ವ್ಯಕ್ತಪಡಿಸುತ್ತೇನೆ. ಕಾರ್ಯಕ್ರಮದ ವಿವರಗಳು ಕೆಳಕಂಡಂತಿದೆ:

ದಿನಾಂಕ: ಮಾರ್ಚ್ 23, 2018 (March 23, 2018),
ಸಮಯ: ಸಂಜೆ ೫. ೩೦ ರಿಂದ ೮ ಗಂಟೆ (5.30 PM to 8 PM)
ಸ್ಥಳ: LT PCSA, ಐ ಐ ಟಿ ಬಾಂಬೆ.

ಪ್ರತಿವರ್ಷದಂತೆ ಕಾರ್ಯಕ್ರಮವು ನಾಟಕ, ಹಾಡು ಇಥ್ಯಾದಿ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಕನ್ನಡಿಗರ ಮನರಂಜಿಸಲಿದೆ. ಕಾರ್ಯಕ್ರಮದ ನಂತರ ಕರ್ನಾಟಕ ಶೈಲಿಯ ಭೋಜನವನ್ನು ಏರ್ಪಡಿಸಲಾಗಿದೆ. ತಾವುಗಳು ಕುಟುಂಬ ಸಮೇತರಾಗಿ ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ನಮ್ಮ ಪ್ರಾರ್ಥನೆ.

ಸಂಘದ ಉದ್ಧಾರಕ್ಕಾಗಿ ಶ್ರಮಿಸಿದ ನಿಮಗೆ, ಕಾರ್ಯಕ್ರಮಕ್ಕೆ ಇರುವ ಹಣದ ಅವಶ್ಯಕತೆ ತಿಳಿದಿರುತ್ತದೆ.  ಹಣ ಪಾವತಿಮಾಡಲು ಅನುಕೂಲವಾಗಲೆಂದು ಐ. ಐ. ಟಿ. ಬಾಂಬೆ ಕನ್ನಡ ಸಂಘ ಬ್ಯಾಂಕ್ ಖಾತೆಯನ್ನು ತೆರೆದಿದ್ದು ಅದರ ಮಾಹಿತಿ ಈ ಕೆಳಗಿನಂತಿದೆ. ದಯವಿಟ್ಟು ನಿಮ್ಮ ಕೈಲಾದಷ್ಟು ಧನಸಹಾಯ ಮಾಡಿ ಸಂಘಕ್ಕೆ ಅನಕೂಲ ಮಾಡಿಕೋಡಬೇಕಾಗಿ ವಿನಂತಿ.

ಖಾತೆಯ ಹೆಸರು (Account Name) : ಐ. ಐ. ಟಿ. ಬಾಂಬೆ ಕನ್ನಡ ಸಂಘ (IIT Bombay Kannada Sangha)
ಖಾತೆ ಸಂಖ್ಯೆ (Account Number) ೨೭೨೪೧೦೧೧೧೦೫೨೪ (2724101110524)
ಐ ಎಫ್ ಎಸ್ ಸಿ ಕೋಡ್ ಸಂಖ್ಯೆ (IFSC Code Number) : CNRB0002724

ಪೂರ್ವ ವಿಧ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದಲ್ಲಿ, ಮುಂಚಿತವಾಗಿ ಈ ಮಿಂಚಂಚೆಗೆ ಪ್ರತ್ಯುತ್ತರ ನೀಡಬೇಕಾಗಿ ವಿನಂತಿ. ಹಾಗು ಊಟದ ಚೀಟಿಗಳಿಗೆ ಕೂಡ ಈ ಮಿಂಚಂಚೆಗೆ ಪ್ರತ್ಯುತ್ತರ ನೀಡಬಹುದು.

ಧನ್ಯವಾದಗಳು,
ನಿಖಿಲ್ ಭಾರದ್ವಾಜ್ (ಮೊ ಸಂಖ್ಯೆ: 7506112310)
(ಕನ್ನಡ ಸಂಘದ ವತಿಯಿಂದ)

Reply all
Reply to author
Forward
0 new messages