ಸಾಂಸ್ಕೃತಿಕ ಸಂಜೆ ಕಾರ್ಯಕ್ರಮ ಭಾಗವಹಿಸುವಿಕೆ

1 view
Skip to first unread message

Poornachandra Satyampet

unread,
Feb 28, 2019, 11:40:01 AM2/28/19
to kannada-geleyara-b...@googlegroups.com, Gururajan Mogadalai, rampr...@gmail.com, Devaraj Adiga, Mohan Gowda, Phalguna P, NIKHIL BHARADWAJ N, Kavya Alse, Ravi Sankannavar, Kumar Rao, Keshav Melnad, Sachin Ajith, Vasudev Aital, Rakesh K K, pras...@iitb.ac.in, Saketh Sharma, sanjeev irny, Gandosi Mahaveer L., sowmya s, Shetty Rakshith, Bhaskar, Rakesh Rao, Rtnivedita Tigadi, RAKESH A, Shambhulingayya .N.D, kamalakshi rani, Ranjith Chiplunkar, Varun Bhatt, Prajwal K.a, Saikalash Shetty, Niranjan Sarpangala, Abhishek G.S., Vadiraj Hemadri, bs_sh...@yahoo.co.in, Neha Innanje, Shruti K, Kishan K, pjg...@gmail.com, Shyam Prasad, Nagabhushan Biliangadi, shashibhushan biliangadi, Pramod Kuntikkana, Paike Chandralekha, Bharath Shekar, sharanm...@gmail.com, Manjesh Hanawal, KARTHIK M Bhat, maheshpati...@gmail.com, i11...@iitb.ac.in
ಕನ್ನಡದ ಎಲ್ಲ‌ ಮನಸ್ಸುಗಳಿಗೂ ನಮಸ್ಕಾರ,
ತಮಗೆಲ್ಲಾ ತಿಳಿದಿರುವಂತೆ ಐಐಟಿ ಬಾಂಬೆ ಕನ್ನಡ ಸಂಘದ ವತಿಯಿಂದ ಪ್ರತೀ ವರ್ಷ ಮಾರ್ಚ ತಿಂಗಳಲ್ಲಿ "ಕನ್ನಡ ಸಾಂಸ್ಕೃತಿಕ ಸಂಜೆ" ಕಾರ್ಯಕ್ರಮ ಏರ್ಪಡಿಸಲಾಗುತ್ತದೆ. ಕನ್ನಡ ಭಾಷೆ, ಕಲೆ, ಸಂಸ್ಕೃತಿ, ಸಾಹಿತ್ಯದ ಕುರಿತು ಮಾಹಿತಿಯನ್ನು ವಿನಿಮಯ ಮಾಡುವುದರ ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ನಮ್ಮ ಕನ್ನಡ ಕುಟುಂಬದ ಒಂದಷ್ಟು ಸಾಧಕರ ಬಗ್ಗೆ ತಿಳಿಸಿಕೊಡುವ ಪ್ರಯತ್ನ ಮಾಡಲಾಗುತ್ತದೆ. ಇದೆಲ್ಲದರ ಜೊತೆಗೆ ನಮ್ಮ ಐಐಟಿ ಬಾಂಬೆ ಕನ್ನಡ ಸಂಘದ ಸದಸ್ಯರೆಲ್ಲರೂ ಸೇರಿ ಒಂದಷ್ಟು ಮನರಂಜನಾ ಚಟುವಟಿಕೆಗಳನ್ನು ನಡೆಸಿಕೊಡುತ್ತಾರೆ. ಕಾರ್ಯಕ್ರಮದ ಕೊನೆಯಲ್ಲಿ ಕರ್ನಾಟಕದ ಶೈಲಿಯ ವಿಶೇಷ ಭೋಜನ ವ್ಯವಸ್ಥೆ ಕೂಡಾ ಮಾಡಲಾಗಿರುತ್ತದೆ.
ಈ ವರ್ಷವೂ ಕೂಡಾ ಮಾರ್ಚ ೨೯ನೇ ತಾರೀಖಿನಂದು " ಕನ್ನಡ ಸಾಂಸ್ಕೃತಿಕ ಸಂಜೆ" ಕಾರ್ಯಕ್ರಮ ಏರ್ಪಡಿಸಲು ನಿರ್ಧರಿಸಲಾಗಿದೆ. ತಮಗೆ ಅಥವಾ ತಮಗೆ ಪರಿಚಯವಿರುವ ಯಾರಿಗಾದರೂ ನಾಟಕ, ಸಂಗೀತ, ನೃತ್ಯ ಅಥವಾ ಇನ್ನಿತರ ಚಟುವಟಿಕೆಯಲ್ಲಿ ಭಾಗವಹಿಸಲು ಆಸಕ್ತಿ ಇದ್ದರೆ ದಯವಿಟ್ಟು ತಿಳಿಸಿ. ನಿಮ್ಮ ಭಾಗವಹಿಸುವಿಕೆಯ ಕುರಿತು ನೀವು ಇದೇ ಮೇಲ್ ಐಡಿಗೆ ಪ್ರತ್ಯುತ್ತರ ನೀಡಬಹುದು.
ಕಾರ್ಯಕ್ರಮದ ಸ್ಥಳ, ಸಮಯ ಮತ್ತು ಚಟುವಟಿಕೆಗಳ ಬಗ್ಗೆ ತಮಗೆಲ್ಲ ಮತ್ತೊಮ್ಮೆ ತಿಳಿಸುತ್ತೇನೆ. ಕಾರ್ಯಕ್ರಮ ಯಶಸ್ವಿಯಾಗಲು ತಮ್ಮೆಲ್ಲರ ಸಹಕಾರ ಅತ್ಯಗತ್ಯ. ದಯವಿಟ್ಟು ಸಹಕರಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿ.
ಧನ್ಯವಾದಗಳೊಂದಿಗೆ,
ಐಐಟಿ ಬಾಂಬೆ ಕನ್ನಡ ಸಂಘದ ವತಿಯಿಂದ,
ಪೂರ್ಣಚಂದ್ರ ಸತ್ಯಂಪೇಟೆ.
ದೂರವಾಣಿ:9538565699
Reply all
Reply to author
Forward
0 new messages