ಸಾಂಸ್ಕೃತಿಕ ಸಂಜೆ ಕಾರ್ಯಕ್ರಮ ಭಾಗವಹಿಸುವಿಕೆ_30-03-2020

0 views
Skip to first unread message

Poornachandra Satyampet

unread,
Feb 27, 2020, 7:51:02 AM2/27/20
to kannada-geleyara-b...@googlegroups.com, aksu...@che.iitb.ac.in, dnm...@iitb.ac.in, Manjesh Hanawal, nkn...@aero.iitb.ac.in, pjg...@gmail.com, kiranko...@iitb.ac.in, n...@iitb.ac.in, Paike J Bhat, Petety V Balaji, ve...@che.iitb.ac.in, mah...@che.iitb.ac.in, ysm...@iitb.ac.in, Ravi Gudi, nor...@che.iitb.ac.in, Maravanji S. Balakrishna, umesh....@iitb.ac.in, baku...@iitb.ac.in, gmo...@iitb.ac.in, jpun...@iitb.ac.in, ksasi...@iitb.ac.in, pava...@iitb.ac.in, b...@ee.iitb.ac.in, pra...@ee.iitb.ac.in, vmg...@ee.iitb.ac.in, Madhu N. Belur, b...@ee.iitb.ac.in, D Manjunath, k...@ee.iitb.ac.in, ram...@hss.iitb.ac.in, bh...@hss.iitb.ac.in, ra...@iitb.ac.in, Arun Mascarenhas / अरुण मैस्करेन्हास, vkav...@iitb.ac.in, ma...@math.iitb.ac.in, s.kar...@iitb.ac.in, Sreedhara Sheshadri, svpr...@iitb.ac.in, se...@me.iitb.ac.in, n...@iitb.ac.in, pras...@iitb.ac.in, Gururajan Mogadalai, satish...@iitb.ac.in, Nagamani Balila, Kumar Rao, Niranjan T T, ban...@sc.iitb.ac.in
ಕನ್ನಡದ ಎಲ್ಲ‌ ಮನಸ್ಸುಗಳಿಗೂ ನಮಸ್ಕಾರ,
ತಮಗೆಲ್ಲಾ ತಿಳಿದಿರುವಂತೆ ಐಐಟಿ ಬಾಂಬೆ ಕನ್ನಡ ಸಂಘದ ವತಿಯಿಂದ ಪ್ರತೀ ವರ್ಷ ಮಾರ್ಚ ತಿಂಗಳಲ್ಲಿ "ಕನ್ನಡ ಸಾಂಸ್ಕೃತಿಕ ಸಂಜೆ" ಕಾರ್ಯಕ್ರಮ ಏರ್ಪಡಿಸಲಾಗುತ್ತದೆ. ಕನ್ನಡ ಭಾಷೆ, ಕಲೆ, ಸಂಸ್ಕೃತಿ, ಸಾಹಿತ್ಯದ ಕುರಿತು ಮಾಹಿತಿಯನ್ನು ವಿನಿಮಯ ಮಾಡುವುದರ ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ನಮ್ಮ ಕನ್ನಡ ಕುಟುಂಬದ ಒಂದಷ್ಟು ಸಾಧಕರ ಬಗ್ಗೆ ತಿಳಿಸಿಕೊಡುವ ಪ್ರಯತ್ನ ಮಾಡಲಾಗುತ್ತದೆ. ಇದೆಲ್ಲದರ ಜೊತೆಗೆ ನಮ್ಮ ಐಐಟಿ ಬಾಂಬೆ ಕನ್ನಡ ಸಂಘದ ಸದಸ್ಯರೆಲ್ಲರೂ ಸೇರಿ ಒಂದಷ್ಟು ಮನರಂಜನಾ ಚಟುವಟಿಕೆಗಳನ್ನು ನಡೆಸಿಕೊಡುತ್ತಾರೆ. ಕಾರ್ಯಕ್ರಮದ ಕೊನೆಯಲ್ಲಿ ಕರ್ನಾಟಕದ ಶೈಲಿಯ ವಿಶೇಷ ಭೋಜನ ವ್ಯವಸ್ಥೆ ಕೂಡಾ ಮಾಡಲಾಗಿರುತ್ತದೆ.
ಈ ವರ್ಷವೂ ಕೂಡಾ ಮಾರ್ಚ 30ನೇ ತಾರೀಖಿನಂದು " ಕನ್ನಡ ಸಾಂಸ್ಕೃತಿಕ ಸಂಜೆ" ಕಾರ್ಯಕ್ರಮ ಏರ್ಪಡಿಸಲು ನಿರ್ಧರಿಸಲಾಗಿದೆ. ತಮಗೆ ಅಥವಾ ತಮಗೆ ಪರಿಚಯವಿರುವ ಯಾರಿಗಾದರೂ ನಾಟಕ, ಸಂಗೀತ, ನೃತ್ಯ ಅಥವಾ ಇನ್ನಿತರ ಚಟುವಟಿಕೆಯಲ್ಲಿ ಭಾಗವಹಿಸಲು ಆಸಕ್ತಿ ಇದ್ದರೆ ದಯವಿಟ್ಟು ತಿಳಿಸಿ. ನಿಮ್ಮ ಭಾಗವಹಿಸುವಿಕೆಯ ಕುರಿತು ನೀವು ಇದೇ ಮೇಲ್ ಐಡಿಗೆ ಪ್ರತ್ಯುತ್ತರ ನೀಡಬಹುದು.
ಕಾರ್ಯಕ್ರಮದ ಸ್ಥಳ, ಸಮಯ ಮತ್ತು ಚಟುವಟಿಕೆಗಳ ಬಗ್ಗೆ ತಮಗೆಲ್ಲ ಮತ್ತೊಮ್ಮೆ ತಿಳಿಸುತ್ತೇನೆ. ಕಾರ್ಯಕ್ರಮ ಯಶಸ್ವಿಯಾಗಲು ತಮ್ಮೆಲ್ಲರ ಸಹಕಾರ ಅತ್ಯಗತ್ಯ. ದಯವಿಟ್ಟು ಸಹಕರಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿ.
ಧನ್ಯವಾದಗಳೊಂದಿಗೆ,
ಐಐಟಿ ಬಾಂಬೆ ಕನ್ನಡ ಸಂಘದ ವತಿಯಿಂದ,
ಪೂರ್ಣಚಂದ್ರ ಸತ್ಯಂಪೇಟೆ.
ದೂರವಾಣಿ:9538565699

--
Regards,
Poornachandra.B.Satyampet,
PhD scholar,
MEMS Department,
IIT Bombay,

Reply all
Reply to author
Forward
0 new messages