ಸಾಂಸ್ಕೃತಿಕ ಸಂಜೆಗೆ ಪೂರ್ವ ವಿದ್ಯಾರ್ಥಿಗಳಿಗೆ ಆಮಂತ್ರಣ

29 views
Skip to first unread message

Santosh Arali

unread,
Feb 28, 2015, 1:35:44 PM2/28/15
to kannada-geleyara-b...@googlegroups.com
ಆತ್ಮೀಯ ಪೂರ್ವ ವಿದ್ಯಾರ್ಥಿ  ಮಿತ್ರರೇ,

ತಮಗೆಲ್ಲ ಸಾಂಸ್ಕೃತಿಕ ಸಂಜೆ - ೨೦೧೫ ಕ್ಕೆ ಐ. ಐ. ಟಿ. ಬಾಂಬೆ ಕನ್ನಡ ಸಂಘದ ಪರವಾಗಿ ಹೃದಯಪೂರ್ವಕವಾಗಿ ಸ್ವಾಗತಿಸುತ್ತೇನೆ.

ಮಾರ್ಚ ೧೫, ೨೦೧೫ ರ ಸಾಯಂಕಾಲ ಐ. ಐ. ಟಿ. ಬಾಂಬೆ ಪರಿಸರದ ಕನ್ನಡ ಕುಲ ಬಾಂಧವರು ಈ ಸಾಂಸ್ಕೃತಿಕ ಹಬ್ಬವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಿದ್ದಾರೆ. ಸಂಘದ ಸರ್ವೋತೋಮುಖ ಬೆಳವಣೆಗೆಯಲ್ಲಿ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಕಾರಣೀಭೂತರಾದ ನಿಮ್ಮೆಲ್ಲರ ಉಪಸ್ಥಿತಿ ಆ ಸಂಜೆಯ ಖುಷಿಯನ್ನು ಸಹಸ್ರಪಟ್ಟು ಹೆಚ್ಚಿಸುತ್ತದೆ. 

ಒಂದು ಸುಂದರ ಸಮಾರಂಭ ಮಾಡಲು ಹಣದ ಅವಶ್ಯಕತೆ ಎಷ್ಟು ಎಂಬುದು ಸಂಘದ ಬೆಳವಣಿಗೆಯಲ್ಲಿ ಪಾತ್ರವಹಿಸಿದ ನಿಮೆಗೆಲ್ಲ ಗೊತ್ತಿದ್ದೇ. ಹಣ ಪಾವತಿಮಾಡಲು ಅನುಕೂಲವಾಗಲೆಂದು ಐ. ಐ. ಟಿ. ಬಾಂಬೆ ಕನ್ನಡ ಸಂಘ ಬ್ಯಾಂಕ್ ಖಾತೆಯನ್ನು ತೆರೆದಿದ್ದು ಅದರ ಮಾಹಿತಿ ಈ ಕೆಳಗಿನಂತಿದೆ. ದಯವಿಟ್ಟು ನಿಮ್ಮ ಕೈಲಾದಷ್ಟು ಧನಸಹಾಯ ಮಾಡಿ ಸಂಘಕ್ಕೆ ಅನಕೂಲ ಮಾಡಿಕೋಡಬೇಕಾಗಿ ವಿನಂತಿ. 

Account Number: 2724101110524
        IFSC Code: CNRB0002724


ವಿ. ಸೂ. : ೧) ಪೂರ್ವ ವಿದ್ಯಾರ್ಥಿಗಳು ಯಾರಾದರೂ ಕಾರ್ಯಕ್ರಮ ಕೊಡುವವರಿದ್ದರೆ ಮುಂಚಿತವಾಗಿ ನನಗೆ ತಿಳಿಸಿ. 
             ೨) ಊಟದ ಚೀಟಿಗಾಗಿ ನನ್ನನ್ನು ಸಂಪರ್ಕಿಸಿ. 


ನಿಮ್ಮೆಲ್ಲರ ಆಗಮನದ ನಿರೀಕ್ಷೆಯಲ್ಲಿ,


ಐ. ಐ. ಟಿ. ಬಾಂಬೆ ಕನ್ನಡ ಸಂಘದ ಪರವಾಗಿ,

ಸಂತೋಷ ಅರಳಿ 
ಪೂರ್ವ ವಿದ್ಯಾರ್ಥಿಗಳ ಸಮನ್ವಯಕ
ಐ. ಐ. ಟಿ. ಬಾಂಬೆ ಕನ್ನಡ ಸಂಘ
ಮೋ. ಸಂ: ೦೯೮೩೩೮೬೩೯೯೫  (09833863995)

Santosh Arali

unread,
Mar 7, 2015, 3:53:37 PM3/7/15
to kannada-geleyara-b...@googlegroups.com
ಆತ್ಮಿಯರೇ ಸಾಂಸ್ಕೃತಿಕ ಸಂಜೆಗೆ ಕೇವಲ ಏಳು (೭) ದಿನಗಳು ಬಾಕಿ ಇದ್ದು ಆಗಬೇಕಾದ ಕಾರ್ಯಗಳಿಗೆ ಹಣದ ಅವಶ್ಯಕತೆ ಇದೆ. ದಯವಿಟ್ಟು ನಿಮ್ಮ ದೇಣಿಗೆಯನ್ನ ಆದಷ್ಟು ಬೇಗ ಕಳಿಸಬೇಕಾಗಿ ಕಳಕಳಿಯ ವಿನಂತಿ.

ಧನ್ಯವಾದಗಳು.
Reply all
Reply to author
Forward
0 new messages