ಆತ್ಮೀಯ ಕನ್ನಡದ ಮನಸ್ಸುಗಳಿಗೆಲ್ಲಾ ನಮಸ್ಕಾರಗಳು.
ಕನ್ನಡ ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಯ ಅಭಿವ್ಯಕ್ತಿಗೆ ಒಂದು ಪರಿಪೂರ್ಣ ವೇದಿಕೆಯನ್ನಾಗಿಸುವ ಸಲುವಾಗಿ ಐಐಟಿ ಬಾಂಬೆ ಕನ್ನಡ ಸಂಘದ ವತಿಯಿಂದ “ಅಲೆ”ಎನ್ನುವ ವಾರ್ಷಿಕ ಪತ್ರಿಕೆಯನ್ನು ಹೊರತರಲಾಗುತ್ತದೆ. ಅಲೆಯು ಕನ್ನಡಿಗರ ಲೇಖನಿಗಳು, ಚಿತ್ರಕಲೆಗಳು ಮತ್ತು ಛಾಯಾಚಿತ್ರಗಳು ಹಾಳೆಗಳ ಮೇಲೆ ಮೂಡುವ ಒಂದು ಪುಟ್ಟ ಸಾಗರ.
ಪ್ರತಿ ವರ್ಷದಂತೆ ಈ ವರ್ಷವೂ ಸಹ ಐ.ಐ.ಟಿ ಬಾಂಬೆ ಕನ್ನಡ ಸಂಘ ನಿಮ್ಮ "ಅಲೆ" ಪತ್ರಿಕೆಯನ್ನು ಹೊರತರಲಿದೆ. ತಾವು ಬರೆದಿರುವ ಲೇಖನಗಳು, ಕವಿತೆಗಳು, ಚಿತ್ರಗಳು ಅಥವಾ ಛಾಯಾಚಿತ್ರಗಳು ಇದ್ದಲ್ಲಿ ಅವುಗಳನ್ನು ನಮಗೆ ದಿನಾಂಕ 10-03-2018ರ ಒಳಗಾಗಿ ಕಳಿಸಿಕೊಡಿ. ನಿಮ್ಮ ಪರಿಚಯದವರು ಯಾರಾದರುಬರಹಗಾರರಾದಲ್ಲಿ ಅವರ ಬಹರಗಳನ್ನು ನಮ್ಮ ವಾರ್ಷಿಕದಲ್ಲಿ ಅಚ್ಚೋತ್ತಲೂ ಪ್ರೋತ್ಸಾಹಿಸಿ. ಅತ್ಯುತ್ತಮ ಲೇಖನಗಳು ಮತ್ತು ಚಿತ್ರಕಲೆಗಳಿಗೆ ದಿನಾಂಕ 23-03-2018ರಂದು ನಡೆಯುವ "ಸಾಂಸ್ಕೃತಿಕ ಸಂಜೆ" ಕಾರ್ಯಕ್ರಮದಲ್ಲಿ ವಿಶೇಷವಾದ ಬಹುಮಾನಗಳನ್ನು ನೀಡಲಾಗುವುದು. ಅಲೆ ಪತ್ರಿಕೆ ಸಹಸಂಪಾದಕ
ನಿಮ್ಮ ಲೇಖನಗಳನ್ನು ನಿಮ್ಮ ಸಂಪೂರ್ಣ ವಿವರಗಳೊಂದಿಗೆ ಈ ಕೆಳಕಂಡ ಯಾವುದಾದರೊಂದು e-mail ವಿಳಾಸಗಳಿಗೆ ಮಾರ್ಚ 10 ರ ಒಳಗೆ ಕಳುಹಿಸಿ.
ಹೋದ ವರ್ಷ ಹೊರತರಲಾದ ಅಲೆ ಪತ್ರಿಕೆಯ ಪ್ರತಿಯನ್ನು ಇಲ್ಲಿ ಲಗತ್ತಿಸಲಾಗಿದೆ.
ಧನ್ಯವಾದಗಳೊಂದಿಗೆ, ಪೂರ್ಣಚಂದ್ರ ಸತ್ಯಂಪೇಟೆ
--
You received this message because you are subscribed to the Google Groups IIT Bombay Kannada Sangha. To post to this group, send email to kannada-geleyara-balaga-in-iit-b...@googlegroups.com. To unsubscribe from this group, send email to kannada-geleyara-balaga-in-iit-bombay+unsubscribe@googlegroups.com. For more options, visit this group at https://groups.google.com/d/forum/kannada-geleyara-balaga-in-iit-bombay?hl=und
---
You received this message because you are subscribed to the Google Groups "ಐಐಟಿ ಬಾಂಬೆ ಕನ್ನಡ ಸಂಘ" group.
To unsubscribe from this group and stop receiving emails from it, send an email to kannada-geleyara-balaga-in-iit-bombay+unsubscribe@googlegroups.com.
For more options, visit https://groups.google.com/d/optout.