ವರ್ಷ ಐದು ಹರ್ಷ ಹದಿನೈದು

8 views
Skip to first unread message

ಕೆ.ಎಂ.ವಿಶ್ವನಾಥ ವಿಶ್ವ

unread,
Jun 10, 2016, 2:42:19 AM6/10/16
to kalike-...@googlegroups.com, Kalike Staff, D Shivakumar, Bhagirath Gop, Girish
ಎಲ್ಲರಿಗೂ ನಮಸ್ಕಾರಗಳು
ದಿನಾಂಕ 01.06.2016 ರಂದು ನಾನು ಈ ಅಭಿವೃದ್ಧಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದು 7 ವರ್ಷ ಮುಗಿಸಿದೆ. ಕಲಿಕೆ ಟಾಟಾ ಟ್ರಸ್ಟ್  5 ವರ್ಷ ಮುಗಿಸಿ 6ನೇಯ ವರ್ಷಕ್ಕೆ ಕಾಲಿಟ್ಟೆ ಎಂದು ತಿಳಿಸಲು ಹರ್ಷವೆನಸುತ್ತದೆ.  ಈ ಕ್ಷೇತ್ರಕ್ಕೆ ಕಾಲಿಡುವ ಕನಸು ಕಂಡಿದವನಲ್ಲಾ ನಾನು ಆದರೆ ನನ್ನೊಳಗಿನ ಯಾವುದೊ ಶಕ್ತಿ ನನಗೆ ಈ ಮಟ್ಟಕ್ಕೆ ಕರೆತಂದಿದ್ದು ಸಶಕ್ತನಾಗಿ ಬೆಳೆಯಲು ಸಾಧ್ಯವಾಯಿತು. 
ಈ ಅಭಿವೃದ್ಧಿ ಕ್ಷೇತ್ರದಲ್ಲಿ ಸಹಕರಿಸಿದವರನ್ನು ನೆನೆಯುವುದು ನನ್ನ ವಯಕ್ತಿಕ ಧರ್ಮವೆಂದು ಭಾವಿಸಿ ಈ ದಿಸೆಯಲ್ಲಿ ನನ್ನೊಳಗೆ ಶಕ್ತಿ ತುಂಬಿದ “ಅವ್ವ” ನ ಪ್ರೀತಿಗೆ ನಾನು ಚಿರ ಋಣಿಯಾಗಿರುವೆ. ನನ್ನ ಕುಟುಂಬಕ್ಕೆ ಅನೇಕ ಧನ್ಯವಾದಗಳು ಅರ್ಪಿಸುತ್ತೇನೆ.
ಈ ಕ್ಷೇತ್ರಕ್ಕೆ ಮೊದಲಬಾರಿಗೆ ಭೇಟಿ ಕೊಟ್ಟಾಗ ಕೈಹಿಡಿದು ನಡೆಸಿದ್ದು ನನ್ನ ಅಭಿವೃದ್ಧಿ ಕ್ಷೇತ್ರದ ಗುರುಗಳಾದ ಶ್ರೀ ಡಿ.ಆನಂದ ರಾಜ್ ಮಾರ್ಗದರ್ಶಿ ಸಂಸ್ಥೆ ನನಗೆ ಅವರು ಕಲಿಸದ ವಿಷಯಗಳಿಲ್ಲಾ. ಅಭಿವೃದ್ಧಿ ಕ್ಷೇತ್ರದ ಅ.ಆ.ಇ.ಈ ಯಿಂದ ಇಂದಿನ ಬೆಳವಣಿಗೆ ವರೆಗೆ ಕರೆತಂದವರು ಅವರೆ ಎಂಬ ಹೆಮ್ಮೆ ನನಗಿದೆ. 
ಕಲಿಕೆ ಟಾಟಾ ಟ್ರಸ್ಟ್ ಗೆ ಕೆಲಸಕ್ಕೆ ಸೇರಿದಾಗ ಸಹಕಾರ ಬೆಂಬಲ ತರಬೇತಿ ನೀಡಿದ್ದು ಶ್ರೀ ರಮೇಶ ಗೊಂಗಡಿ. ಮಾಜಿ ಯೋಜನಾಧಿಕಾರಿಗಳು ಕಲಿಕೆ ಹಾಗೂ ಶ್ರೀ ಡಿ.ಶಿವಕುಮಾರ ಕಾರ್ಯನಿರ್ವಾಹಕ ನಿರ್ದೇಶಕರು ಕಲಿಕೆ ಯಾದಗಿರಿ ಹಾಗೂ ಸಮಸ್ತ ಸಿಬ್ಬಂದಿ ವರ್ಗ ಕಲಿಕೆ ಯಾದಗಿರಿ ಹಿರಿಯರಾದ ಮೌನೇಶ, ಈರಣ್ಣಾ, ಸಂತೋಷ ಇವರೆಲ್ಲರ ನಿರಂತರವಾದ ಬೆಂಬಲ ನನ್ನನು ಕಲಿಕೆ ಸಂಸ್ಥೆಯಲ್ಲಿ 5 ವರ್ಷ ಮುಗಿಸಲು ಸಾಧ್ಯವಾಗಿದೆ ಅದಕ್ಕಾಗಿ ಅವರೆಲ್ಲರಿಗೂ ನನ್ನ ಕೃತಜ್ಞತೆಗಳು ಸಲ್ಲುತ್ತವೆ.  ಪ್ರಸ್ತುತವಾಗಿ ಶ್ರೀ ಭಗಿರತ ಸರ್ ಹಾಗೂ ಶ್ರೀ ಗಿರೀಷ ಸರ್ ಅವರಿಗೂ ಧನ್ಯವಾದಗಳು ಹೇಳಬಯಸುತ್ತೇನೆ. 
ಅಭಿವೃದ್ಧಿ ಕ್ಷೇತ್ರದ ಜೊತೆ ಜೊತೆಗೆ ಯುವ ಬರಹಗಾರನಾಗಿ, ಅಂಕಣಕಾರನಾಗಿ ಬೆಳೆದಿರುವ ಸಂತೋಷವಿದೆ. ಪ್ರವೃತ್ತಿಯಲ್ಲಿ ಬರವಣಿಗೆಯನ್ನು ಮೆಚ್ಚಿಕೊಂಡು ಜೀವನದ ಜೋಕಾಲಿಯಲಿ ತುಂಬಾ ಆನಂದದಾಯಕ ಬದುಕು ನಡೆಸುತ್ತಿರುವೆ. ಈ ಬದುಕಿನ ದಾರಿಯಲ್ಲಿ ಸಹಕರಿಸಿದ ಎಲ್ಲಾ ಜೀವಗಳನ್ನು ಕೈಮುಗಿದು ನೆನೆಯುತ್ತೇನೆ. ಮುಂದಿನ ಬದುಕಿನಲ್ಲಿಯೂ ನಿಮ್ಮ ಬೆಂಬಲ ನಿರಿಕ್ಷಿಸುತ್ತೇನೆ.

ಧನ್ಯವಾದಗಳೊಂದಿಗೆ
ಕೆ.ಎಂ.ವಿಶ್ವನಾಥ ಮರತೂರ. 



--
***************
with regards 
*************
Mr. Vishwanath M.K
Program Coordinator Education 
Kalike
An Associate Organization of
Tata Trust  Sri Laxmi Nivas, Plot No. 14 & 15,
Behind Balaji Kalyan Mantap,
Near Vanakeri Layout,
Yadgir- 585 201
T: 8473 250106

Mob: 9686714046 Email: vishwa...@gmail.com
Reply all
Reply to author
Forward
0 new messages