ಗದಗ ಜಿಲ್ಲಾಧಿಕಾರಿ ಮನೋಜ್ ಜೈನ್ ಸರ್ ರವರನ್ನು ಭೇಟಿ ನೀಡಿದ ಕ್ಷಣ

11 views
Skip to first unread message

mareshappa

unread,
Feb 21, 2017, 8:05:17 AM2/21/17
to rb...@svym.org.in, m...@svym.org.in, emma...@svym.org.in, dshiv...@tatatrusts.org, bg...@tatatrusts.org, Girish, Basavaraju R, Sham N Kashyap, rajendr...@graam.org.in, kalike-...@googlegroups.com, premavi...@svym.org.in, eshwa...@gmail.com, pv.y...@gmail.com, mallapp...@gmail.com, kulka...@gmail.com, ssma...@gmail.com, sbre...@gmail.com
ಆತ್ಮೀಯರೇ,

ನಮಸ್ಕಾರಗಳು,
ಇದೊಂದು ನನ್ನ ಅಳಿಲು ಸೇವೆ ನಿಮಗೆ ತಿಳಿಸಲು ಸಂತೋಷವೆನಿಸುತ್ತದೆ.

ಗದಗ ಜಿಲ್ಲಾಧಿಕಾರಿಗಳಾದ ಶ್ರೀ ಮನೋಜ್ ಜೈನ್ ಸರ್ ರವರನ್ನು ವಿದ್ಯಾರ್ಥಿ ಈಶ್ವರಾಜ ( VSP Student Yadgir ) ಮತ್ತು ನಾನು (ಮರೇಶಪ್ಪ ಬಾಗಲಿ, ಶಾಲಾ ವ್ಯವಸ್ಥಾಪಕರು, ಪ್ರೇಮವಿದ್ಯಾ ಯೋಜನೆ - ಯಾದಗಿರಿ ) ಸೇರಿ ಶುಕ್ರವಾರ ದಿನಾಂಕ:10-2-2017ರಂದು ಗದಗಗೆ ತೆರಳಿ ಅವರನ್ನು ಭೇಟಿ ಮಾಡಿ, ಕಳೆದ 6 ತಿಂಗಳ ಹಿಂದೆ ಬಡ ವಿದ್ಯಾರ್ಥಿ ಈಶ್ವರಾಜನಿಗೆ B.E ವ್ಯಾಸಂಗ ಮಾಡಲು ಪ್ರವೇಶ ಪಡೆಯಬೇಕಾದರೆ ಮನೋಜ್ ಜೈನ್ ಸರ್ ರವರು ಯಾದಗಿರಿಯಲ್ಲಿ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ಹಿಸುವಾಗ ವಿದ್ಯಾರ್ಥಿಯ ಕುಟುಂಬದ ಪರಿಸ್ಥಿತಿಯನ್ನು ಅವರಿಗೆ ವಿವರಿಸಿ ಹೇಳಿದೆನು ಆಗ ಅವರು ಅದನ್ನು ತಿಳಿದುಕೊಂಡು ಧನ ಸಹಾಯ ಮಾಡಿದ್ದರು. ಇವರ ಸಹಾಯದ ನಂತರ ಅನೇಕ ಜನರು ಸಹಾಯ ಮಾಡಿದರು. ಅನೇಕ ಜನ ಧಾನಿಗಳಿಗೆ ವಿಷಯ ತಲುಪಿಸಿದವರು ಯಾದಗಿರಿಯ ಮಾಧ್ಯಮ ಮಿತ್ರರು, ತಮ್ಮ ಪತ್ರಿಕೆಯಲ್ಲಿ ಮತ್ತು ಟಿ.ವಿ ಮಾಧ್ಯಮದಲ್ಲಿ ವಿಷಯ ಪ್ರಕಟಿಸಿ ನೆರವಿಗೆ ಕಾರಣರಾದರು. ಇಂದು ಅವನ ಭವ್ಯ ಭವಿಷ್ಯವೇ ಬದಲಾಗಿದೆ. ಪ್ರಸ್ತುತ ಆ ವಿದ್ಯಾರ್ಥಿ ಕಾರವಾರದ ಸರಕಾರಿ ಇಂಜಿನಿಯರಿಂಗ್ ಕಾಲೇಜ್ ನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದಾನೆ. ಮೊನ್ನೆ ದಿನ ಜಿಲ್ಲಾಧಿಕಾರಿಯವರನ್ನು ಭೇಟಿ ನೀಡಿದಾಗ ತುಂಬಾ ಉತ್ಸಾಹಕರಾಗಿ ವಿದ್ಯಾರ್ಥಿಯ ಶೈಕ್ಷಣಿಕ ಪ್ರಗತಿಯ ಕುರಿತು ಚರ್ಚಿಸಿ ಕೆಲವು ಸಲಹೆಗಳನ್ನು ನೀಡಿದ ಅವರ ಕಾರ್ಯ ಶ್ಲಾಘನೀಯ. ಮನೋಜ್ ಜೈನ್ ಸರ್ ರವರು ವಿದ್ಯಾರ್ಥಿಗೆ ನೆನಪಿನ ಕಾಣಿಕೆ ನೀಡಿ ಶುಭ ಹಾರೈಸಿದರು. ಅವರಿಗೆ ದೇವರು ಸದಾಕಾಲವೂ ಒಳಿತನ್ನು ಮಾಡಲಿ ಎಂದು ಹಾರೈಸುತ್ತೇನೆ.

                                                   
    Mareshappa ಅವರ ಫೋಟೋ.      Mareshappa ಅವರ ಫೋಟೋ.
-- 
Mr.Mareshappa
School Manager
Premavidya Program
Swami Vivekananda Youth Movement
Yadgir
Reply all
Reply to author
Forward
0 new messages