ಬಡ ವಿದ್ಯಾರ್ಥಿಯ ಕನಸು ನನಸಾದ ಕ್ಷಣ

8 views
Skip to first unread message

mareshappa

unread,
Jul 4, 2016, 9:31:16 AM7/4/16
to rb...@svym.org.in, emma...@svym.org.in, m...@svym.org.in, dshiv...@tatatrusts.org, shivakumar D, bg...@tatatrusts.org, Girish, Basavaraju R, Ravishankar Shankar, Sham N Kashyap, rajendr...@graam.org.in, premavi...@svym.org.in, Kalike Staff, kalike-...@googlegroups.com, shivakuma...@gmail.com, sharanu nadagouda, Ramanagouda Biradar, amasidda...@gmail.com, ma...@cfbtes.com, mahesh....@cfbtes.com, sharabayy...@cfbtes.com, isreal....@cfbtes.com, nepolian...@cfbtes.com, netra.p...@cfbtes.com, radhika....@cfbtes.com, rangu.p...@cfbtes.com, sham.p...@cfbtes.com, shanta....@cfbtes.com, shilpa....@cfbtes.com, sharava...@svym.org.in, chandri...@graam.org.in, Anjinayya Baglikar
ಆತ್ಮೀಯ ಸರ್ ರವರೇ,
ಮತ್ತು ಆತ್ಮೀಯ ನನ್ನ ಸಹೋದ್ಯೋಗಿ ಸ್ನೇಹಿತರೇ,

ಸಂತೋಷದ ವಿಷಯ ತಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ವತಿಯಿಂದ 2 ವರ್ಷಗಳ ಕಾಲ ಯಾದಗಿರಿಯಲ್ಲಿ ನಡೆದ ವಿವೇಕ ಸ್ಕಾಲರ್ ಕಾರ್ಯಕ್ರಮದಡಿ ಈಶ್ವರಾಜ ಎಂಬ ವಿದ್ಯಾರ್ಥಿ ಕೋಚಿಂಗ್ ತೆಗೆದುಕೊಂಡಿರುತ್ತಾನೆ. ಪ್ರಸ್ತುತ ಅವನಿಗೆ ಮೆಕಾನಿಕಲ್ ಇಂಜಿನಿಯಯರಿಂಗ್  ಸೀಟ್ ಸರಕಾರಿ ಕೋಟಾದಡಿ ದೊರಕಿರುತ್ತದೆ. ಆದರೆ ಮನೆಯಲ್ಲಿನ ಆರ್ಥಿಕ ಪರಿಸ್ಥಿತಿಯಿಂದ ಮುಂದಿನ ವ್ಯಾಸಂಗ ಮಾಡಲು ಆಗುತ್ತಿಲ್ಲ ಎಂಬ ಸುದ್ದಿ ತಿಳಿದು ದಿನಾಂಕ : 3-7-2016 ರಂದು ನಾನು ಅವರ ಮನೆಗೆ ತೆರಳಿ (ಚಟ್ನಳ್ಳಿ ಗ್ರಾಮ ) ಅವರೊಂದಿಗೆ ಚರ್ಚಿಸಿದಾಗ ಅವರ ಮನೆಯವರೆಲ್ಲರೂ ತಮ್ಮ ಅಳಲನ್ನು ತೋಡಿಕೊಂಡಾಗ ನನ್ನ ಮನಸ್ಸಿಗೆ ನೋವಾಯಿತು.ಅವರ ಆರ್ಥಿಕ ಸಮಸ್ಯೆ ಹೇಳತೊಡಗಿದಾಗ  ಪ್ರಯತ್ನ ಮಾಡೋಣ ಎಂದು ಹೇಳುತ್ತಾ ನಾಳೆ ದಿನ ಯಾದಗಿರಿಗೆ ಬನ್ನಿ ಎಂದು ತಿಳಿಸಿದೆ.
ದಿನಾಂಕ: 04-7-2016 ರಂದು ಈಶ್ವರಾಜ ಮತ್ತು ಅವರ ತಾಯಿ ಯಾದಗಿರಿಗೆ ಬಂದರು. ಇದಕ್ಕೆ ಮುಂಚಿತವಾಗಿ ನಾನು ವಿಜಯವಾಣಿ ವರದಿಗಾರರಾದ ಲಕ್ಷ್ಮೀಕಾಂತ ಕುಲಕರ್ಣಿ ಯವರೊಂದಿಗೆ ಮಾತನಾಡಿ, ಪತ್ರಿಕಾ ಮಾಧ್ಯಮ ಮತ್ತು ವಿದ್ಯುನ್ಮಾನ ಮಾಧ್ಯಮದವರಿಗೆ ಕರೆಮಾಡಿ ಈ ವಿಷಯ ಕುರಿತು ಹೇಳಿದಾಗ ಪ್ರಯತ್ನ ಮಾಡೋಣ ಎನ್ನುತ್ತಾ, ತಾಯಿ ಮತ್ತು ಮಗನೊಂದಿಗೆ ಸಂದರ್ಶನ ಮಾಡಿ ಸುದ್ದಿ ತೆಗೆದುಕೊಂಡಿರುತ್ತಾರೆ. ಆಗ ಜಯ ಕರ್ನಾಟಕ ಸಂಘದವರು ಅಲ್ಲಿಗೆ ಬಂದು ನಾವು ನಮ್ಮ ಸಂಘದ ವತಿಯಿಂದ ಧನ ಸಹಾಯ ಮಾಡುವುದಾಗಿ ಹೇಳಿ ಸುರಪುರ ತಾಲೂಕಿನ ಚಂದ್ರಶೇಖರ ಎನ್ನುವವರು ರೂ.5000-00 ನೀಡಿದರು ಮತ್ತು ಪರಶುರಾಮ ಎನ್ನುವವರು ರೂ.3000-00 ಮತ್ತು ತಾಲೂಕ ಘಟಕದ ವತಿಯಿಂದ ರೂ.2000-00 ಧನ ಸಹಾಯ ಮಾಡಿರುತ್ತಾರೆ. ಮತ್ತು ನಾಳೆ ದಿನ ಹೆಚ್ಚಿನ ಹಣ ಸಂಗ್ರಹಿಸಿ ಬ್ಯಾಂಕ್ ಖಾತೆಗೆ ಜಮಾ ಮಾಡುವುದಾಗಿ ಹೇಳಿದರು.
ಈ ವಿಷಯ ಕುರಿತು ಪಬ್ಲಿಕ್ ಟಿ.ವಿ. ವರದಿಗಾರರಾದ ಆನಂದ ಸೌದಿ ಯವರೊಂದಿಗೆ ನಾನು ಮಾತನಾಡಿದಾಗ ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡೋಣ ನಾನು ಸಹ ಅವರೊಂದಿಗೆ ಅವರ ಕಛೇರಿಯಲ್ಲಿದ್ದೇನೆ ಬನ್ನಿ ಎಂದರು. ಆಗ ನಾನು ಆ ವಿಧ್ಯಾರ್ಥಿಯನ್ನು ಮಾನ್ಯ ಜಿಲ್ಲಾಧಿಕಾರಿಗಳ ಕಛೇರಿಗೆ ಕರೆದುಕೊಂಡು ಹೋದೆನು. ಅವರೊಂದಿಗೆ ನನ್ನ ಪರಿಚಯ ಮಾಡಿಕೊಂಡು ಆ ವಿದ್ಯಾರ್ಥಿಯ ಆರ್ಥಿಕ ಪರಿಸ್ಥಿತಿ ಕುರಿತು ಹೇಳಿದಾಗ ಮಾನ್ಯ ಜಿಲ್ಲಾಧಿಕಾರಿಗಳಾದ ಶ್ರೀ ಮನೋಜ್ ಜೈನ್ ಸರ್  ರವರು ಮಾತನಾಡಿ ಫೀ ಕಟ್ಟಲು ಎಷ್ಟು ಹಣ ಬೇಕು ಎಂದಾಗ ರೂ.18000-00 ಬೇಕುಸರ್ ಮತ್ತು ದಿನಾಂಕ: 05-7-2016 ರಂದು ಕೊನೆಯ ದಿನಾಂಕ ಆಗಿರುತ್ತದೆ ಎಂದು ಹೇಳಿದಾಗ ಅವರು ಹಿಂದೆ ಮುಂದೆ ಆಲೋಚಿಸದೆ ಮದ್ಯಾಹ್ನ 3-00 ಗಂಟೆಗೆ ನಮ್ಮ ಮನೆಗೆ ಬನ್ನಿ ಹಣ ನೀಡುತ್ತೇನೆ ಎಂದು ಹೇಳಿದರು. ಈಶ್ವರಾಜ ಮತ್ತು ಅವರ ತಾಯಿಯವರನ್ನು ಜೈನ್ ಸರ್ ರವರ ಮನೆಗೆ ಕರೆದುಕೊಂಡು ಹೋದಾಗ ಫೀ ತುಂಬಲು ರೂ.18000-00 ಮತ್ತು ಅವನ ಪ್ರಯಾಣ ಖರ್ಚಿಗೆ ರೂ.1000-00 ಹಣವನ್ನು ನೀಡಿ ಮಾನವಿಯತೆ ಮೆರೆಯುವುದರೊಂದಿಗೆ ನೀನು ಚನ್ನಾಗಿ ಓದಿ ಒಳ್ಳೆಯ ಇಂಜಿನಿಯರ್ ಆಗಿ ಮುಂದಿನ ದಿನ ನನ್ನನ್ನು ಕಾಣಬೇಕು ಎಂಬ ಮಾತು ಮೃದುವಾಗಿ  ಹೇಳಿದಾಗ ಅವರ ಅಮ್ಮನ ಕಣ್ಣಲ್ಲಿ ಆನಂದ ಭಾಷ್ಪ ತುಂಬಿತ್ತು.

ಇಂತಿ ತಮ್ಮ ನೆಚ್ಚಿನ ಉದ್ಯೋಗಿ

ಮರೇಶಪ್ಪ ಬಾಗಲಿ
ಶಾಲಾ ವ್ಯವಸ್ಥಾಪಕರು
ಪ್ರೇಮವಿದ್ಯಾ ಯೋಜನೆ
ಕಲಿಕೆ-ಟಾಟಾ ಟ್ರಸ್ಟ್ಸ್ ಮತ್ತು
ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ಯಾದಗಿರಿ.
ಹಾಗೂ
ಕೋರ್ ಕಮಿಟಿ ಅಧ್ಯಕ್ಷರು
ಕಲಿಕೆ - ಟಾಟಾ ಟ್ರಸ್ಟ್ಸ್  ಯಾದಗಿರಿ.
ದೂ.ಸಂ.+91 87926 92623



-- 
Mr.Mareshappa
School Manager
Premavidya Program
Swami Vivekananda Youth Movement
Yadgir

ಕೆ.ಎಂ.ವಿಶ್ವನಾಥ ವಿಶ್ವ

unread,
Jul 5, 2016, 12:24:55 AM7/5/16
to mareshappa, rb...@svym.org.in, Seetharam M R, M A Balasubramanya, D Shivakumar, shivakumar D, Bhagirath Gop, Girish, Basavaraju R, Ravishankar Shankar, Sham N Kashyap, rajendr...@graam.org.in, premavi...@svym.org.in, Kalike Staff, kalike-...@googlegroups.com, shivakuma...@gmail.com, sharanu nadagouda, Ramanagouda Biradar, amasidda...@gmail.com, Madhumati Singe, mahesh....@cfbtes.com, sharabayy...@cfbtes.com, isreal....@cfbtes.com, nepolian...@cfbtes.com, netra.p...@cfbtes.com, radhika....@cfbtes.com, rangu.p...@cfbtes.com, sham.p...@cfbtes.com, shanta....@cfbtes.com, shilpa....@cfbtes.com, sharava...@svym.org.in, chandri...@graam.org.in, Anjinayya Baglikar
ಮಾನ್ಯ ಮರೇಶಪ್ಪ ಅವರೆ ನಿಮ್ಮ ಕಾರ್ಯ ಅಭಿನಂದನಾರ್ಹವಾಗಿದೆ. ಈ ಮಗುವಿನ ಭವಿಷ್ಯ ಉಜ್ವಲವಾಗಲಿಯೆಂಬ ಆಶೆಯ ನಮ್ಮದು 
ಸಾಧ್ಯವಾದರೆ ನಮ್ಮ ಸಂಸ್ಥೆಯು ಕೂಡ ಸಹಕಾರ ಮಾಡಬಹುದು.

ಜುಲೈ 4, 2016 05:01 ಅಪರಾಹ್ನ ರಂದು, mareshappa <mares...@svym.org.in> ಬರೆದಿದ್ದಾರೆ:



--
***************
with regards 
*************
"In life you never get a second chance to create a First Impression"
Mr. Vishwanath M.K
Program Coordinator Education 
Kalike
An Associate Organization of
Tata Trust  Sri Laxmi Nivas, Plot No. 14 & 15,
Behind Balaji Kalyan Mantap,
Near Vanakeri Layout,
Yadgir- 585 201
T: 8473 250106

Mob: 9686714046 Email: vishwa...@gmail.com
Reply all
Reply to author
Forward
0 new messages