by ವಿಜಯವಾಣಿ ನ್ಯೂಸ್ · May 7, 2016
CINIVANI 01
|ಟಿ.ಜಿ. ಶ್ರೀನಿಧಿ
ಅಂತರ್ಜಾಲ ಬಳಸುವವರಿಗೆಲ್ಲ ಜಾಲತಾಣಗಳು (ವೆಬ್ಸೈಟ್) ಗೊತ್ತು. ನಿರ್ದಿಷ್ಟ
ಜಾಲತಾಣಗಳನ್ನು ಗುರುತಿಸಲು ಬಳಸುವ ವಿಳಾಸವಿದೆಯಲ್ಲ – ವಿಜಯವಾಣಿ ಡಾಟ್ ನೆಟ್,
ಇಜ್ಞಾನ ಡಾಟ್ ಕಾಮ್ ಇತ್ಯಾದಿ – ಅದನ್ನು ಡೊಮೈನ್ ನೇಮ್ ಎಂದು ಕರೆಯುತ್ತಾರೆ
(
http://vijayavani.net/?p=1771121) ಎನ್ನುವಂತಹ ರೂಪದ ಪೂರ್ಣವಿಳಾಸಕ್ಕೆ
ಯೂನಿಫಾಮ್ರ್ ರಿಸೋರ್ಸ್ ಲೊಕೇಟರ್ ಅಥವಾ ಯುಆರ್ಎಲ್ ಎಂದು ಹೆಸರು; ಡೊಮೈನ್ ನೇಮ್
ಎನ್ನುವುದು ಯುಆರ್ಎಲ್ನ ಒಂದು ಭಾಗ).
ಜಾಲತಾಣದಲ್ಲಿರುವ ಮಾಹಿತಿ ಯಾವ ಭಾಷೆಯದೇ ಆದರೂ ಅದರ ವಿಳಾಸ ಮಾತ್ರ ಇಂಗ್ಲಿಷಿನಲ್ಲೇ
ಇರುವುದನ್ನು ನಾವು ನೋಡುತ್ತೇವಲ್ಲ, ಈ ಪರಿಸ್ಥಿತಿ ಇದೀಗ ಬದಲಾಗುತ್ತಿದೆ.
ಜಾಲತಾಣದಲ್ಲಿರುವ ಮಾಹಿತಿಯಂತೆ ಅದರ ವಿಳಾಸದಲ್ಲೂ ನಮ್ಮ ಆಯ್ಕೆಯ ಭಾಷೆಯನ್ನು ಬಳಸಲು
ಅನುವುಮಾಡಿಕೊಡುವ ‘ಇಂಟರ್ನ್ಯಾಷನಲೈಸ್ಡ್ ಡೊಮೈನ್ ನೇಮ್ಗಳು (ಐಡಿಎನ್) ಇದೀಗ
ಬಳಕೆಗೆ ಬರುತ್ತಿವೆ.
ದೇವನಾಗರಿ, ಬಂಗಾಳಿ, ಪಂಜಾಬಿ, ತಮಿಳು, ತೆಲುಗು ಸೇರಿದಂತೆ ಹಲವು ಭಾರತೀಯ
ಲಿಪಿಗಳಲ್ಲಿ ಡೊಮೈನ್ ನೇಮ್ಳನ್ನು ರೂಪಿಸಿಕೊಳ್ಳುವುದು ಈಗಾಗಲೇ ಸಾಧ್ಯವಾಗಿದೆ.
ಜಾಲತಾಣದ ಹೆಸರು ಸ್ಥಳೀಯ ಲಿಪಿಯಲ್ಲಿರುವುದಷ್ಟೇ ಅಲ್ಲ; ಡಾಟ್ ಕಾಮ್ ಡಾಟ್ ನೆಟ್ಗಳ
ಜಾಗದಲ್ಲಿ ಜಾಲತಾಣದ ವಿಶೇಷಣವನ್ನು (ಟಾಪ್ಲೆವೆಲ್ ಡೊಮೈನ್ ಅಥವಾ ಟಿಎಲ್ಡಿ) ಕೂಡ
ಅದೇ ಲಿಪಿಯಲ್ಲಿ ‘ಡಾಟ್ ಭಾರತ’ ಎಂದು ಬರೆಯಬಹುದು. ಈ ಸೌಲಭ್ಯವಿರುವ ಭಾರತೀಯ ಭಾಷೆಗಳ
ಸಾಲಿಗೆ ಕನ್ನಡವೂ ಇಷ್ಟರಲ್ಲೇ ಸೇರಲಿದೆ ಎನ್ನುವುದು ವಿಶೇಷ.
thanks
Mahesh