ರತನ್ ಟಾಟಾ ಜೀ ರವರ ಜ್ಯೋತಿಷ್ಯ

6 views
Skip to first unread message

mareshappa

unread,
Jul 28, 2016, 7:59:29 AM7/28/16
to dshiv...@tatatrusts.org, bg...@tatatrusts.org, Girish, Kalike Staff, kalike-...@googlegroups.com, ma...@cfbtes.com, Ramanagouda Biradar, isreal....@cfbtes.com, shanta....@cfbtes.com, netra.p...@cfbtes.com, sham.p...@cfbtes.com, radhika....@cfbtes.com, shilpa....@cfbtes.com, rangu.p...@cfbtes.com, sharabayy...@cfbtes.com, nepolian...@cfbtes.com, mahesh....@cfbtes.com, sharava...@svym.org.in, prahalad, basavaraj, veera...@magicbusindia.org, shivakuma...@gmail.com, sharanu nadagouda

ಆತ್ಮೀಯರೇ,

ತಮೆಗಲ್ಲರಿಗೂ ಸಂಜೆಯ ನಮಸ್ಕಾರಗಳು....

                                        ರತನ್ ಟಾಟಾ ರವರ ಜ್ಯೋತಿಷ್ಯ

ಶನಿ


ಕೇತು


ಕುಜ

ರತನ್ ಟಾಟಾ

28-12-1937 – 6:30 (ಬೆಳಿಗ್ಗೆ)

ವಿಶಾಖಾ ನಕ್ಷತ್ರ

1ನೇ ಪಾದ, ತುಲಾ ರಾಶಿ


ಗುರು

ಲಗ್ನ

ಲಗ್ನ ರವಿ ಬುಧ ಶುಕ್ರ

ರಾಹು

ಚಂದ್ರ



    ನಮ್ಮ ಭಾರತೀಯ ಜ್ಯೋತಿಷ್ಯದಲ್ಲಿ ಯೋಗ ಮತ್ತು ದಶಾಕಾಲ ಇದು ಅತ್ಯಂತ ವಿಶಿಷ್ಟವಾಗಿದ್ದು ಪಾಶ್ಬಾತ್ಯ ಜ್ಯೋತಿಷ್ಯದಲ್ಲಿ ಇವೆರಡೂ ಇಲ್ಲ. ಅವರು ಚಲಿತ ಮುಖೇನ ಗ್ರಹಗಳ ಪರಸ್ಪರ ಯತಿ, ಕೋಣ, ಕೇಂದ್ರ ಇರುವ ಗ್ರಹಗಳ ಮೇಲೆ ಫಲ ನಿರ್ಧರಿಸುತ್ತಾರೆ. ಪಾಶ್ಬಾತ್ಯ ಜ್ಯೋತಿಷ್ಯರಾದ ಅಲೆನ್ ಲಿಯೋ ಹಾಗೂ ಇತರರು ತಮ್ಮ ಪುಸ್ತಕದಲ್ಲಿ ಹಿಂದೂ ಪದ್ಧತಿಯ ಯೋಗ ದಶಾಕಾಲವನ್ನು ಸಹ ಬರೆದಿರುತ್ತಾರೆ. ಭಾರತೀಯ ಜ್ಯೋತಿಷ್ಯದ ಬಗ್ಗೆ ವಿದೇಶದಲ್ಲಿ ಅಪಾರವಾದ ಗೌರವವಿದೆ.
    ನಮ್ಮಲ್ಲಿ ನೂರಾರು ಯೋಗಗಳು ಇದ್ದು ಅದಕ್ಕೆ ಪೂರಕವಾದ ದಶಾಕಾಲವಿದ್ದರೆ ಯೋಗಕ್ಕೆ ಅನುಗುಣವಾಗಿ ಆರ್ಥಿಕ, ರಾಜಕೀಯ ಮುಂತಾದ ಯಶಸ್ಸು ಗಳಿಸುವರು. ಜಾತಕಚಂದ್ರಿಕೆ ಒಂದು ಸಣ್ಣ ಪುಸ್ತಕವಾದರೂ ಅದು ಪ್ರಾಚೀನ ಜ್ಯೋತಿಷ್ಯದ ಕೆಲವು ಬಹಳ ಮುಖ್ಯವಾದ ಭಾಗಗಳನ್ನು ಆಯ್ದು ರಚಿಸಿರುವ ಒಂದು ಗ್ರಂಥ. ಜಾತಕರಿಗೆ ಯೋಗವಿದ್ದರೆ ಯಶಸ್ಸು ಗಳಿಸಬಹುದು.  ಆದರೆ ಕೆಲವು ಯೋಗಗಳು ಯಶಸ್ಸಿನ ಜೊತೆಗೆ ಧರ್ಮ, ದೇಶಪ್ರೇಮ, ಮಾನವೀಯತೆ ಇತ್ಯಾದಿಯಾಗಿ ಸಮಾಜಕ್ಕೆ ದೊಡ್ಡ ಕೊಡುಗೆಯನ್ನು ನೀಡಿ ಭಾಗ್ಯವಂತರೂ ಆಗುವರು. ಕೇಂದ್ರಾಧಿಪತಿಗಳು ಮತ್ತು ತ್ರಿಕೋಣಧಿಪತಿಗಳ ಸಂಬಂಧದಿಂದ ಕೇಂದ್ರತ್ರಿಕೋಣಧಿಪತ್ಯ ಯೋಗ ಉಂಟಾಗುವುದು. ಕೇಂದ್ರತ್ರಿಕೋಣಧಿಪತ್ಯಗಳ ಸಂಬಂಧ ಎಂಟು ಬಗೆ ಇದೆ. ಅದರಲ್ಲಿ ನವಮಾತ್ರಿಕೋಣಾ ಮತ್ತು ದಶಮಕೇಂದ್ರಾಧಿಪತಿ ಇವೆರಡರ ಸಂಬಂಧ ಉಂಟಾಗತಕ್ಕ  ಧರ್ಮಕರ್ಮಾಧಿಪತ್ಯಾ ಯೋಗಕ್ಕೆ ಬಹಳ ಪ್ರಾಮುಖ್ಯತೆ ಇದೆ.
    ಕೇಂದ್ರದ ಮಂತ್ರಿಗಳು ಟಾಟಾ ಕಂಪನಿಯನ್ನು ರಾಷ್ಟ್ರೀಕರಣಗೊಳಿಸಬೇಕೆಂಬ ಸಲಹೆಯನ್ನು ಟಾಟಾ ಆಡಳಿತ ಮಂಡಳಿ  ವಿರೋಧಿಸುವ ಮೊದಲೇ ಕಾರ್ಮಿಕರ ಸಂಘ ವಿರೋಧ ಮಾಡಿದರು. ಜಹಾಂಗೀರ ರತನಜೀ ದಾದಾಭಾಯಿ ಟಾಟಾರವರಿಗೆ ಕಾರ್ಮಿಕರೊಡನೆ ಇದ್ದ ಭಾಂಧವ್ಯ ತಿಳಿಯುತ್ತದೆ. ಆವರೆಗೆ ಇದ್ದ ನವಮಾ  ದಶಮಾಧಿಪತಿಗಳ ಪರಸ್ಪರ ದೃಷ್ಟಿಯೇ ಕಾರಣವಾಗಿತ್ತು. ರತನ್ ಟಾಟಾ ರವರು ಧನುರ್ ಲಗ್ನದಲ್ಲಿ ಜನಿಸಿದ್ದರು. ಧನುರ್ ಲಗ್ನಕ್ಕೆ ನವಮಾ ಭಾಗ್ಯಾಧಿಪತಿ ರಾಜಗ್ರಹ ರವಿ ಮತ್ತು ದಶಮಾ ಕರ್ಮಾಧಿಪತಿಯಾದ ಬುಧ ಲಗ್ನದಲ್ಲಿದ್ದು ಧರ್ಮಾ ಕರ್ಮಾಧಿಪತ್ಯ ಯೋಗವಿದೆ. ಈ ಯೋಗದಿಂದ ಕಂಪನಿಯನ್ನು ಮುನ್ನೆಡಿಸಿ ಅನೇಕ ಉತ್ತಮವಾದ ಕಾರ್ಯಗಳನ್ನು ಮಾಡಿ ಪರೋಪಕಾರವನ್ನು ಮಾಡಿದರು.
    ಮುಂಬಯಿ ದಾಳಿಯಲ್ಲಿ ತಮ್ಮ ಕಾರ್ಮಿಕರಿಗೆ ಅಲ್ಲದೇ ಹೋಟೆಲ್ ಸುತ್ತ-ಮುತ್ತ ನೊಂದ ಅಂಗಡಿ ಮತ್ತು ರಸ್ತೆ ಬದಿಯ ವ್ಯಾಪಾರಿಗಳಿಗೂ ಪರಿಪೂರ್ಣ ಆರ್ಥಿಕ ಸಹಾಯ ಮಾಡಿದರು. ನವಾಂಶದಲ್ಲಿ ಕುಜ, ಬುಧ ಉಚ್ಚಾಂಶ ಗುರು, ಶುಕ್ರರು ಸ್ವನವಾಂಶದಲ್ಲಿ ಬಲಯುತರಾಗಿರುವುದರಿಂದ ಈಗ ರವಿಮಹಾದಶೆ ಪ್ರಾರಂಭವಾಗಿದ್ದು ಕಂಪನಿಯಿಂದ ನಿವೃತ್ತಿಯಾಗಿದ್ದರೂ ಸಹ ಮಾರ್ಗದರ್ಶಕರಾಗಿದ್ದು ಟಾಟಾ ಟ್ರಸ್ಟ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದು ಇನ್ನೂ ಅನೇಕ ಉತ್ತಮ ಕೆಲಸ ಮಾಡುತ್ತಿದ್ದಾರೆ. ಆರೋಗ್ಯದಲ್ಲಿ ಸ್ವಲ್ಪ ಸಮಸ್ಯೆ ಉಂಟಾಗುವ ಸಾಧ್ಯತೆ ಇದ್ದರೂ ಸಹ ದಶಾಕಾಲ ಚನ್ನಾಗಿದೆ. ಯಾರಿಗೆ ಆಗಲಿ ಧರ್ಮಾಕರ್ಮಾಧಿಪತ್ಯ ಯೋಗವಿದ್ದರೆ ತನ್ನ ಒಬ್ಬರಿಗೆ ಅಲ್ಲದೇ ಪರರ ಹಿತವನ್ನು ಬಯಸಿ ದೊಡ್ಡ ಕೊಡುಗೆಯನ್ನು ಕೊಟ್ಟು ಕೀರ್ತಿ ಗಳಿಸುವರು.

ಸಂಗ್ರಹ - ಮರೇಶಪ್ಪ  ಕಲಿಕೆ - ಟಾಟಾ ಟ್ರಸ್ಟ್ ಯಾದಗಿರಿ.


-- 
Mr.Mareshappa
School Manager
Premavidya Program
Swami Vivekananda Youth Movement
Yadgir
Reply all
Reply to author
Forward
0 new messages