ಇವನೊಬ್ಬ ಉತ್ಸಾಹಕ್ಕೆ ಸ್ಫೂರ್ತಿ
ಇವನು ಜೀವನವನ್ನು ಕೈಗೆ ಹೇಗೆ ತೆಗೆದುಕೊಂಡು ನಡೆಸಬೇಕು ಎನ್ನುವುದಕ್ಕೆ ಉದಾಹರಣೆ
ಪರಿಸ್ಥಿತಿ ಹೇಗೆ ಇದ್ದರೂ ತಾಳ್ಮೆಯಿಂದ, ಹೆದರದೆ ನುಗ್ಗಬಹುದು ಎಂದು ಅರಿವು ಮೂಡಿಸುವ ಗೆಳೆಯ
ಬರೆದದ್ದು ಬರೆಯಬೇಕಾದ್ದು ಬೇಕಾದಷ್ಟಿದ್ದರೂ ಬರೆಯುವ ಕೈಗಳೇ ಕೆಲವೊಮ್ಮೆ ಸಾಕಪ್ಪ ಎನ್ನಿಸುತ್ತದೆ
ಕಲ್ಮಶವಿಲ್ಲದ, ಸ್ಫಟಿಕದ ಗುಣ ಇರುವಂಥಹ ಈ ಗೆಳೆಯ ನಮ್ಮ ಗುಂಪಿಗೆ ಸಿಕ್ಕ ವರವೇ ಸರಿ
ಹುಟ್ಟು ಹಬ್ಬದ ದಿನ ನೀ ಯಾರ ಕೈಗೂ ಸಿಗುವುದಿಲ್ಲ.. ನಮ್ಮ ಶುಭಾಶಯಗಳು ನಿನಗಾಗಿ ಸದಾ ಹಿಂಬಾಲಿಸುತ್ತಲೇ ಇರುತ್ತದೆ
ಹುಟ್ಟು ಹಬ್ಬದ ಶುಭಾಶಯಗಳು ಗೆಳೆಯ ಜೆ ಎಂ..