ಹೋಳಿ ಅಲ್ಲವೇನು
ಹೂವಿಗೊಂದು ಬಣ್ಣ , ಎಲೆಗೂ ಒಂದು ಬಣ್ಣ
ಕೂಡಿ ಬದುಕುವ ಬಾಳಲ್ಲಿ
ಸಂಭಂದಗಳದು ಹತ್ತು ಹಲವು ಬಣ್ಣ
ಕಳೆವ ಘಳಿಗೆಯಲ್ಲ ಹೊಳಿಯಲ್ಲವೇನು ?
ಬೆಳ್ಳಿ ಬೆಳಕ ಕಿರಣ , ನೋಡೆ ಬಿಳಿಯ ಬಣ್ಣ
ಮಳೆಯ ಹನಿಗೆ ಚದುರಿದೋಡೇ , ನೋಡು ಏಳು ಬಣ್ಣ
ಹಲವು ಭಾವನೆಗಳ ಹೊಮ್ಮಿಸುವ ಮನಸ್ಸಿನಲ್ಲಿ
ದಿನವೂ ಹೊಳಿಯಲ್ಲವೇನು ?
ಆಕಾಶ ನೀಲಿ ಬಣ್ಣ, ರವಿಯು ಚೆಲ್ಲಿ ಕೆಂಪು ಬಣ್ಣ
ತೇಲಿ ನಡೆವ ಮೋಡಗಳದು ಚಿತ್ರ
ವಿಚಿತ್ರ ಬಣ್ಣ
ಕನಸ ರಂಗು ಚೆಲ್ಲಿ, ಹಸನು ಬದುಕ ಚಿತ್ರ ಬರೆದು
ನಡೆದು ಸಾಗಿಹೆವವು ನಾವು ಇದು ಹೊಳಿಯಲ್ಲವೇನು?
ಕಮಲ ಕೆಂಪು ಬಣ್ಣ , ಕೆಳಗೆ ಕೆಸರು ಕೊಚ್ಚೆಬಣ್ಣ
ನೋವು ನಲಿವ ಪಯಣವಿದು ಹೊಳಿಯಲ್ಲವೇನು ?
ಗಾಳಿಗಾವ ಬಣ್ಣ ? ಹರಿವ ನೀರಿಗಾವ ಬಣ್ಣ?
ಕಾಣದೇನೆ ಜೀವನಾಡಿ ಇದು ಹೊಳಿಯಲ್ಲವೇನು ?
ಶ್ರೀನಿವಾಸ
ಮಹೇಂದ್ರಕರ್
http://www.srinivasapoems.blogspot.com/