ದೇವಪಡೆ

1–30 of 134

ನಿಮಗೆ 
ಸುಸ್ವಾಗತ, 
ಬನ್ನೀ ಎಲ್ಲರೂ ಬೆಳೆಯೋಣ ಎಲ್ಲರನ್ನೂ ಬೆಳೆಸೋಣ
 !!! 

 ನಮ್ಮದೊಂದು ಪುಟ್ಟ ಕನಸು......
 ತಂಡದಲ್ಲಿ ಒಗ್ಗಟ್ಟು, ಒಗ್ಗಟ್ಟಿನಲ್ಲಿ ಆತ್ಮ ಬಲ, ಆತ್ಮ ಬಲದಿಂದ ಸಾಧನೆ, ಕನ್ನಡ ಭಾಷಾಭಿಮಾನ, ದೇಶಾಭಿಮಾನ, ಸಾಮಾಜಿಕ ಕಳಕಳಿ. ನಮ್ಮಿಂದ ಏನಾದರು ಸಮಾಜದಲ್ಲಿ ಒಂದು ಸಣ್ಣ ಮಾರ್ಪಾಡು ಆಗಬಹುದೇ ಎಂದು ಸದಾ ಚಿಂತಿಸುವ ತಂಡ. ಭಾವನೆ, ಪರಿಕಲ್ಪನೆ, ಊಹೆಗಳು,ಚರ್ಚೆಗಳು ಬರೀ ವಾರಾಂತ್ಯಕ್ಕೆ  ಸೀಮಿತವಾಗದೆ ಕಾರ್ಯ ರೂಪಕ್ಕೆ ತರಬೇಕು ಎಂದು ತುಡಿಯುವ ಮನಗಳು. ಯೋಜನೆಗಳು ಬರಿ ಬ್ಲಾಗುಗಳಲ್ಲಿ  , ಮಿಂಚೆಗಳಲ್ಲಿ ಸೀಮಿತವಾಗದೆ  ಅದರಿಂದ  ಹೊರಬಂದು ಸಫಲತೆ ಪಡೆಯಬೇಕು ಎಂದು ಕಾಯುತ್ತಿರುವ ಬಲಿಷ್ಠ ಆಕಾಂಕ್ಷೆ ಯುಳ್ಳವರು. 

ಒಂದು ಒಳ್ಳೆಯ ಸಮಾಜ  ಕಟ್ಟಬೇಕಾದರೆ, ಸಮಾಜದಲ್ಲಿನ ಎಲ್ಲ ಸಜೀವ ಮತ್ತು ನಿರ್ಜೀವಿಗಳ ಪಾತ್ರ ಮತ್ತು ಕೊಡುಗೆ ಅತ್ಯಮೂಲ್ಯ, ಒಳ್ಳೆಯ ಸಮಾಜದ ಕಟ್ಟುವುದರ ಹಿಂದೆ ಒಂದು ಒಳ್ಳೆಯ ಕನಸಿರಬೇಕು. ದೂರದೃಷ್ಟಿ  ಇಲ್ಲದ  ಕನಸುಹೂವಾಗಿ, ಕಾಯಾಗಿ, ಹಣ್ಣಾಗುವುದರೊಳಗೆ  ಮುರಿದು ಬೀಳುತ್ತದೆ. 

"ಕನಸನ್ನು ನನಸಾಗಿಸುವುದೇ ನಮ್ಮ ತಂಡದ ಮುಖ್ಯ ಉದ್ದೇಶ ಮತ್ತು ಗುರಿ". 

ಬನ್ನಿ  ಎಲ್ಲರೂ ಒಂದು ಸುಂದರ ಸಮಾಜದ ಒಂದು ಸುಂದರ ಕನಸು ಕಾಣೋಣ. 

- ದೇವಪಡೆ