
Larva

ನಮ್ಮನೆಯ ಕಾಂಪೋಸ್ಟ್ ಡಬ್ಬದಲ್ಲಿ ಕಾಣಿಸಿದ ಕರಿನೊಣದ ಲಾರ್ವಾ ಮತ್ತು ನೊಣದ ಚಿತ್ರ. ಅಂತರ್ಜಾಲದಲ್ಲಿ ಕಾಂಪೋಸ್ಟ್ ತಯಾರಿಕೆಯಲ್ಲಿ ಇದರ ಬಗ್ಗೆ ಮಾಹಿತಿಯಿದೆ. ಆಲ್ಲದೇ ಇದರ ಲಾರ್ವಾ, ಲಾರ್ವಾದ ಹೊರಕವಚ ಕೋಳಿ, ಮೀನುಗಳಿಗೆ ಆಹಾರವಾಗಿ ಉಪಯೋಗಿಸಬಹುದಾಗಿದೆ. ಈ ನೊಣ ಲಾರ್ವಾದಿಂದ ಹೊರಬಂದ ನಾಲ್ಕೈದು ದಿನಗಳಲ್ಲೆಲ್ಲಾ ಕೂಡಿ, ಮೊಟ್ಟೆಯಿಟ್ಟು ಸಾಯುತ್ತದೆ. ಇದಕ್ಕೆ ಆಹಾರ ಸೇವಿಸಲು ಬಾಯಿಯಂತಹ ರಚನೆ ಇಲ್ಲವಾದ್ದರಿಂದ ಮನೆನೊಣದಂತೆ ಮನೆಯೊಳಗೆಲ್ಲಾ ಬರುವುದಿಲ್ಲ. ಮನೆನೊಣವನ್ನು ನಿಯಂತ್ರಿಸುತ್ತದೆ ಕೂಡಾ. ಅಲ್ಲದೇ ಕಾಲಿನಲ್ಲಿ ಕೂದಲಿನಂತಹ ರಚನೆಯಿಲ್ಲದ್ದರಿಂದ ಕಾಯಿಲೆ ಹರಡುವುದೂ ಇಲ್ಲ. ವಿದೇಶದಲ್ಲಿ ಈ ನೊಣವನ್ನು ಆಹಾರವಾಗಿಯೂ ಉಪಯೋಗಿಸುತ್ತಾರೆ. ಇದರ ಬಳಕೆಯ ಬಗ್ಗೆ ನಮ್ಮಲ್ಲಿ ಏನಾದರೂ ಪ್ರಯೋಗ ನಡೆದಿದೆಯೇ ಅಥವಾ ಯಾರಲ್ಲಾದರೂ ಹೆಚ್ಚಿನ ಮಾಹಿತಿ ಇದೆಯೇ?
ಕನ್ನಡದಲ್ಲಿ ಇದಕ್ಕೆ ಏನೆಂದು ಹೆಸರಿಡಬಹುದು?
--
Regards,
PaLa