Subject: ವಾರದ ಲೇಖನ: ಕನ್ನಡ ಇಂಡಿಯಾ ವಾಟರ್ ಪೋರ್ಟಲ್
T
> ಆತ್ಮೀಯರೇ,
>
> ೧. ಪರಿಸರ ಪ್ರಿಯ “ಮ್ಯಾಂಗ್ರೋವ” ಸಸ್ಯ (ಕಾಂಡ್ಲಾ) ಸಕಲ ರೀತಿಯಲ್ಲೂ ಹೊಸ ನಿರೀಕ್ಷೆ ಮೂಡಿಸಿದೆ. ಮ್ಯಾಂಗ್ರೋವ ಸಸ್ಯ ವಿಶೇಷ ವರ್ಗಕ್ಕೆ ಸೇರಿದ ಸಸ್ಯ ಸಂಕುಲ. ಆದ್ರೆ, ಈ ಕಾಂಡ್ಲಾ ಮೊದಲಿನಿಂದಲೂ ಮಾನವನ ದುರ್ಬಳಕೆ, ತಿರಸ್ಕಾರಕ್ಕೆ ಒಳಗಾದ ಸಸ್ಯ...........
>
>
> ಉಡುಪಿಯ ಕೆ.ಶಶಿಧರ ಹೆಮ್ಮಣ್ಣರವರ "ಕಡಲ ತಡಿಯ ಕವಚ ಕಾಂಡ್ಲಾ" ಎಂಬ ಲೇಖನದ ಮುಂದಿನ ಭಾಗವನ್ನು ಓದಲು ನೀವು ಕ್ಲಿಕ್ ಮಾಡಬೇಕಾದುದು ಇಲ್ಲಿ
>
>
> ೨. ಪೋರ್ಟಲ್ ನ "ಸುದ್ದಿಮನೆ"ಯಲ್ಲಿ ಅಪ್ ಲೋಡ್ ಮಾಡಲಾದ ಲೇಖನಗಳು:
> ಕೆರೆಗಳ ನಕಾಶೆ: ರಕ್ಷಣೆಗೆ ಅರ್ಥಪೂರ್ಣ ದೀವಿಗೆ -ರಕ್ಷಣೆಗೆ ಅರ್ಥಪೂರ್ಣ ದೀವಿಗೆ: ಪ್ರಜಾವಾಣಿಯಲ್ಲಿ ಪ್ರಕಟವಾದ ಸುಮಲತಾ ಎನ್.ರವರ ಬೆಂಗಳೂರಿನ ಕೆರೆಗಳ ರಕ್ಷೆಣೆಗೆಂದು ರೂಪಿಸಿದ ಕರೆ ನಕಾಶೆ ಬಿಡಿಸುವ ಯೋಜನೆ. ಈ ಲೇಖನವನ್ನು ಸಂಪೂರ್ಣವಾಗಿ ಓದಲು, ಇಲ್ಲಿ ಕ್ಲಿಕ್ ಮಾಡಿ
>
> ಅಂಕಸಮುದ್ರದ ಬಕಧ್ಯಾನ: ಕನ್ನಡ ಪ್ರಭಾದಲ್ಲಿ ಪ್ರಕಟವಾದ ಹುಳ್ಳಿ ಪ್ರಕಾಶ್ ರವರ ಲೇಖನ. ಇದು ಹಗರಿಬೊಮ್ಮನಹಳ್ಳಿಯ ಅಂಕಸಮುದ್ರ ಕೆರೆಯಲ್ಲೀಗ ಬಣ್ಣದ ಕೊಕ್ಕರೆಗಳ ಮೀನುಶಿಕಾರಿ ನಡೆದಿರುವು ಬಗೆಗೆ ಇದೆ. ಜೊತೆಗೆ ಛಾಯಾಗ್ರಾಹಕರ ಫೋಟೋಶಿಕಾರಿಯೂ ಇದೆ. ಇದನ್ನು ಕುರಿತಾಗಿ ತಿಳಿಯಬೇಕೆ? ಇಲ್ಲಿ ಕ್ಲಿಕ್ ಮಾಡಿ
>
> ಭಾರತ ಕ್ಲೀನ್ ಮಾಡುವ ವಿದೇಶಿಗರು: ಕನ್ನಡ ಪ್ರಭಾದಲ್ಲಿ ಪ್ರಕಟವಾದ ಶಂಕರ ಅಜ್ಜಂಪುರರವರ ಲೇಖನ. ಇದು, ಐರ್ಲ್ಯಾಂಡ್ ನ ೭೦ ವರ್ಷಗಳ ನಿವೃತ್ತ ಉಪಾಧ್ಯಾಯ ಕ್ಯಾರನ್ ರಾನ್ಸ್ಲೇ ಕುರಿತಾದುದು. ಭಾರತದ ಪ್ರವಾಸದಲ್ಲಿದ್ದಾಗ ರಾಜಾಸ್ಥಾನದ ಗುಲಾಬ್ ಸಾರ್ಗ ಎಂಬ ಸರೋವರ ಅವರ ಮನ ಸೆಳೆಯಿತು. ರಾಜಾಸ್ಥಾನ ಮತ್ತು ಜೋಧ್ ಪುರಗಳಿಗೆ ಇರುವ ಐತಿಹಾಸಿಕತೆಯ ಸುಂದರ ಮೆರುಗಿನ ಹಿನ್ನಲೆಯಲ್ಲಿ ನಗರ, ನಗರ ಮಧ್ಯದಲ್ಲಿರುವ ಈ ಸರೋವರ ಒಂದು ಕಪ್ಪು ಚುಕ್ಕೆಯಂತಿತ್ತು. ಅವರು ಸರೋವರ ಸ್ವಚ್ಛಗೊಳಿಸಿದ ಪರಿ ಹೀಗಿದೆ. ಪೂರ್ಣ ಲೇಖನವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
>
> ಲಕ್ಷ್ಮೀಪುರವನ್ನು ಇನ್ನೂ ಕಾಡುತ್ತಿದೆ ಬೆಂಕಿ!: ಪ್ರಜಾವಾಣಿಯಲ್ಲಿ ಪ್ರಕಟವಾದ ಲೇಖನ. ಬೆಂಕಿ ಕಾಣಿಸಿಕೊಂಡಿದ್ದ ಲಕ್ಷ್ಮೀಪುರ ತ್ಯಾಜ್ಯ ಘಟಕದಲ್ಲೀಗ ಸುರಿವ ಮಳೆಯಲ್ಲೂ ನೀರು ಕೊತ ಕೊತ ಕುದಿಯುತ್ತಿದೆ. ಇಲ್ಲಿ ಏನಾಗುತ್ತಿದೆ? ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.
>
>
>
> ಧನ್ಯವಾದಗಳೊಂದಿಗೆ,
>
> ಕನ್ನಡ ಇಂಡಿಯಾ ವಾಟರ್ ಪೋರ್ಟಲ್ ತಂಡ,
>
> ಕಮ್ಯುನಿಕೇಷನ್ ಫಾರ್ ಡೆವಲಪ್ಮೆಂಟ್ ಆಂಡ್ ಲರ್ನಿಂಗ್,
>
> ಕೋರಮಂಗಲ ೬ನೆಯ ಬ್ಲಾಕ್, ಬೆಂಗಳೂರು – ೫೬೦ ೦೯೫.
>
>
>
> ಅಂತರ್ಜಾಲ ತಾಣ: http://kannada.indiawaterportal.org/
>
> ಮಿಂಚಂಚೆ: kan...@indiawaterportal.org
>
>
>
>