Not For Publication

34 views
Skip to first unread message

Srinivas Rg

unread,
Jul 31, 2026, 10:37:55 AM (4 days ago) Jul 31
to भारतीयविद्वत्परिषत्
ಭಾರತೀಯ ವಿದ್ವತ್ ಪರಿಷತ್ತಿನ ಆದರಣೀಯ ವ್ಯವಸ್ಥಾಪಕರಿಗೆ ನಮಸ್ಕಾರಗಳು.
ತಮ್ಮಿಂದ ಭಾರತೀಯ ಸಂಸ್ಕೃತಿಗೆ ಸಂದಿರುವ, ಮುಂದೆ ಸಲ್ಲಲಿರುವ ಅಪಾರವಾದ ಸೇವೆಗಾಗಿ ತಮ್ಮನ್ನು ವಿನಯದಿಂದ ಅಭಿನಂದಿಸುತ್ತೇನೆ.
ಭಾರತೀಯ ವಿದ್ವತ್ ಪರಿಷತ್ತಿನ ಉತ್ತರೋತ್ತರ ಅಭಿವೃದ್ಧಿಗಾಗಿ ಭಗವಂತನಲ್ಲಿ ಪ್ರಾರ್ಥನೆ ಮಾಡುತ್ತೇನೆ.

ಉಭಯಕುಶಲೋಪರಿ ಸಾಂಪ್ರತ,

ಇದೇ ಭಾರತೀಯ ವಿದ್ವತ್ ಪರಿಷತ್ತಿನ ವೇದಿಕೆಯಲ್ಲಿ ಸದ್ಗುರು ಶ್ರೀ ಜಗ್ಗಿ ವಾಸುದೇವ ಮಹಾಸ್ವಾಮಿಗಳ ನಿಂದನೆ ನಡೆದಿರುವುದನ್ನು ಗಮನಿಸಿರುತ್ತೇನೆ.
ಪರಬ್ರಹ್ಮವಸ್ತುವನ್ನು ಅನುಭವದಿಂದ ತಿಳಿಯದ ಬಾಲಬುದ್ಧಿಯ ಪಂಡಿತರ ಜಲ್ಪ ವಿತಂಡವಾದಗಳಿಗೆ ತಮ್ಮ ಈ ವೇದಿಕೆಯು ಆಶ್ರಯ ಕೊಡತಕ್ಕದ್ದಲ್ಲ.
ಅದು ನಿಮಗೆ ಶೋಭಿಸಲಾರದು.

ನನ್ನ ಅಧಿಕಾರದ ಬಗ್ಗೆ ಇಷ್ಟು ಹೇಳಬಹುದು. ಜಗದ್ಗುರು ಕೃಪಾಲು ಮಹಾರಾಜರ ಶಿಷ್ಯರೊಬ್ಬರು ತೊಂಭತ್ತೈದನೆಯ ಇಸವಿಯ ಸಮಯದಲ್ಲಿ
ನನ್ನ ಮೇಲೆ ಕೃಪೆಮಾಡಿ ಎರಡೂವರೆ ವರ್ಷಗಳ ಕಾಲ ಪರವಸ್ತುವಿನ ಅನುಭವವು ನಿರಂತರವಾಗಿ ಸಿಕ್ಕುವಂತೆ ಅನುಗ್ರಹಿಸಿದರು.
ಮೂಕಾಸ್ವಾದನವತ್, ಆ ವಿಷಯವನ್ನು ಬೇರೆಯವರಿಗೆ ಸಿದ್ಧಪಡಿಸಿ ತೋರಿಸಲಾರೆ. ಇದುವರೆವಿಗೂ ಆ ಅಗತ್ಯ ಬರಲಿಲ್ಲ.
ಈಗ ಅಗತ್ಯ ಬಂದಿದ್ದರೂ ಕೂಡ ಮಾಡಲಾರೆ.

ಸದ್ಗುರುಗಳೊಂದಿಗೆ ನಡೆದ  ಹತ್ತು ವರ್ಷಗಳ ಒಡನಾಟದ ಆಧಾರದ ಮೇಲೆ, ಭಗವತ್ಕೃಪೆಯಿಂದ ನನಗೆ ಪ್ರಾಪ್ತವಾಗಿರುವ ಅಧಿಕಾರದ ಬಲದಿಂದ
ನಾನು ಹೇಳಬೇಕಾಗಿರುವುದೆಂದರೆ ಸದ್ಗುರುಗಳು ಪ್ರಮಾಣ. ಈ ಮಾತನ್ನು ಅನುಭವ ಇರುವವರು ಪರೀಕ್ಷೆ ಮಾಡಲಿ, ಬೇಡ ಅಂದವರು ಯಾರು.
ಅನುಭವ ಇಲ್ಲದೆ ಇದ್ದರೆ ಹೋಗಲಿ, ಪ್ರಾಮಾಣಿಕತೆ ಇರುವವರು ಪರೀಕ್ಷೆ ಮಾಡಲಿ. ಯಾಕೆಂದರೆ ಪ್ರಾಮಾಣಿಕತೆಯೊಂದರ ಬಲದಿಂದ ನನಗೆ
ಪರವಸ್ತುವು ಸಿಕ್ಕಿತು. ಸದ್ಗುರುಗಳನ್ನು ಪರೀಕ್ಷೆ ಮಾಡಲು ಪ್ರಾಮಾಣಿಕತೆ ಒಂದು ಬಿಟ್ಟು ಬೇರೆ ಅರ್ಹತೆಯ ಅಗತ್ಯವಿಲ್ಲ.

ಹೇಗೇ ಇರಲಿ, ಇನ್ನು ಮುಂದೆ ನಿಮ್ಮ ವೇದಿಕೆಯಲ್ಲಿ ಸದ್ಗುರುಗಳ ನಿಂದನೆಯು ನಡೆದಿದ್ದೇ ಆದಲ್ಲಿ ಇದುವರೆಗೆ ನಾನು ಮಾಡಿದಂತೆ
ಸೌಮ್ಯವಾದ ಭಾಷೆಯಲ್ಲಿ ಸತ್ಯದ ಆಧಾರದ ಮೇಲೆ ಉತ್ತರ ಕೊಡುವುದನ್ನು ಬಿಟ್ಟು ಉಗ್ರವಾದ ಭಾಷೆಯಲ್ಲಿ ತರ್ಕದ ಆಧಾರದ ಮೇಲೆ
ಉತ್ತರ ಕೊಡುತ್ತೇನೆ. ಯಾಕೆಂದರೆ, ಸದ್ಗುರುಗಳ ನಿಂದಕರಲ್ಲಿ ಇರುವುದು ತರ್ಕನಿಷ್ಠೆಯೇ ಹೊರತು ಸತ್ಯನಿಷ್ಠೆಯಲ್ಲ.

ಪರೀಕ್ಷೆ ಎಂದಿಗೂ ತಪ್ಪಲ್ಲ, ಆದರೆ ಅಧಿಕಾರಿಗಳಲ್ಲದೇ ಇರುವವರು ಏನು ತಾನೆ ಪರೀಕ್ಷೆ ಮಾಡಿಯಾರು?
ಅಧಿಕಾರ ಮತ್ತು ಪ್ರಾಮಾಣಿಕತೆ ಇರುವವರು ಮಾಡುವ ಪರೀಕ್ಷೆ ಜಗತ್ಕಲ್ಯಾಣದಲ್ಲಿ ಪರ್ಯವಸಾನವಾದೀತೇ ಹೊರತು
ಸಮಸ್ಯೆ ಆಗಲಾರದು. ಅಧಿಕಾರ ಇಲ್ಲದವರು ಪರೀಕ್ಷೆಯನ್ನೂ ಮಾಡಿ ಫಲಿತಾಂಶವನ್ನೂ ಪ್ರಕಟಿಸುವುದಕ್ಕೆ ತಮ್ಮ ವೇದಿಕೆಯಲ್ಲಿ
ತಾವು ಅವಕಾಶ ಕೊಡಬಾರದು.

ಸತ್ಯವು ತಾನಾಗಿಯೇ ಜಯಿಸುವ ಸಾಮರ್ಥ್ಯವನ್ನೂ ಹೊಂದಿದೆ. ಆದರೂ ನಾನು ಪೇಚಾಡಿಕೊಳ್ಳದೆ ಇರಲಾರೆ.

ಒಟ್ಟಿನಲ್ಲಿ ನನ್ನ ಶಪಥಕ್ಕೆ ಒಳಪಟ್ಟು ಭಾರತೀಯ ವಿದ್ವತ್ ಪರಿಷತ್ತಿನ ಹಿತವನ್ನು ಕೋರುತ್ತೇನೆ.

ನಮಸ್ಕಾರಗಳು.
ಶ್ರೀನಿವಾಸ
Reply all
Reply to author
Forward
0 new messages