ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲದಿಂದ (ಕಮುಶೈಸಂ-KOER) ಈ ವಾರ ನಿಮಗಾಗಿ - ಪ್ರಕಲ್ಪ ಯೋಜನೆಯ ಯಶೋಗಾಥೆಗಳು

3 views
Skip to first unread message

ITfC Rakesh

unread,
Mar 2, 2018, 10:54:33 PM3/2/18
to mathssciencestf, kannadastf, htfkarnataka, karnataka_teachereducators, englishstf, hindistf, bengalurus...@googlegroups.com, hpsmaths...@googlegroups.com, socialsciencestf

ಪ್ರೀತಿಯ ಬಂಧುಗಳೇ,

ಬಿ ಬಿ ಎಮ್‌ ಪಿ ಹಿರಿಯ ಪ್ರಾಥಮಿಕ ಶಾಲೆಗಳ ಮುಖ್ಯ ಶಿಕ್ಷಕರಿಗೆ 'ಶಾಲಾ ಅಭಿವೃದ್ಧಿ ಮತ್ತು ನಾಯಕತ್ವ' ವಿಷಯವಾಗಿ ಮುಖ್ಯ ಶಿಕ್ಷಕರ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ಇದರಲ್ಲಿ ಭಾಗವಹಿಸಿದ್ದ ಶಾಲೆಯ ಮುಖ್ಯಸ್ಥರು ಅನೇಕ ಹೊಸ ವಿಷಯಗಳನ್ನು ತಿಳಿದುಕೊಳ್ಳುವುದರ ಜೊತೆ ಅನೇಕ ಸಮಸ್ಯೆಗಳಿಗೆ ಪರಿಹಾರಗಳನ್ನು ಸಹ ಇತರ ಸಹೋದ್ಯೋಗಿ ಮಿತ್ರ ಜೊತೆ ಚರ್ಚಿಸಿ ಕಂಡುಕೊಂಡರು. ಇದರ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ

ಪ್ರತಿಯೊಬ್ಬರಿಗೂ ತಮ್ಮ ಶಾಲಾ ಅಭಿವೃದ್ಧಿಗೆ ಸಂಬಂಧಿಸಿದ ಪ್ರಕಲ್ಪವನ್ನು ತಯಾರಿಸಿ ಪ್ರಸ್ತುತ ಪಡಿಸುವಂತೆ ಕಾರ್ಯವನ್ನು ನಿಯೋಜಿಸಲಾಗಿತ್ತು. ಅದರಲ್ಲಿ ತಮ್ಮ ತಮ್ಮ ಶಾಲೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಪ್ರಕಲ್ಪವನ್ನು ತಯಾರಿಸಿ ಕಾರ್ಯಾಗಾರದಲ್ಲಿ ಪ್ರಸ್ತುತಪಡಿಸಿದರು. ಈ ಪ್ರಸ್ತುತಿಯಿಂದ ಅನೇಕ ಚರ್ಚೆಗಳು, ಹೊಸ ವಿಷಯಗಳು, ಶಾಲಾ ಸುಧಾರಣೆಯ ಸಾಧ್ಯತೆಗಳು, ಸಮಸ್ಯೆಗಳಿಗೆ ಪರಿಹಾರೋಪಾಯಗಳು ಮುಂತಾದ ಅಂಶಗಳು ಬಿಂಬಿತವಾದವು.

ಈ ಪ್ರಕಲ್ಪಗಳಲ್ಲಿ ಬಿಬಿಎಮ್‌ಪಿ ಹಿರಿಯ ಪ್ರಾಥಮಿಕ ಶಾಲೆ, ನೀಲಸಂದ್ರ, ಬೆಂಗಳೂರು.ಯು ' ಬಿಸಿ ಊಟದ ವ್ಯವಸ್ಥಿತ ಅನುಷ್ಠಾನ'. ಎಂಬ ಪ್ರಕಲ್ಪವನ್ನು ಆಯ್ಕೆಮಾಡಿಕೊಂಡಿದ್ದರು. ಇದರ ಯಶೋಗಾಥೆಯನ್ನು ತಮ್ಮೆಲ್ಲರ ಜೊತೆ ಹೊಂಚಿಕೊಳ್ಳಲಾಗುತ್ತಿದ್ದು ಸಂಪನ್ಮೂಲ ವೀಕ್ಷಣೆಯ ನಂತರ ದಯಮಾಡಿ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳುವಂತೆ ಕೋರಲಾಗಿದೆ.

ಬಿಬಿಎಮ್‌ಪಿ ಹಿರಿಯ ಪ್ರಾಥಮಿಕ ಶಾಲೆ, ನೀಲಸಂದ್ರ, ಬೆಂಗಳೂರು.ಈ ಶಾಲೆಯ ಪ್ರಸ್ತುತಿಯ ಜಾರುಕಗಳು ಮತ್ತು ವೀಡಿಯೋವನ್ನು ವೀಕ್ಷಿಸಲು ಈ ಮೇಲಿನ ನೀಲಿ ಬಣ್ಣದ ಕೊಂಡಿಯನ್ನು ಕ್ಲಿಕ್ಕಿಸಿರಿ.

ಧನ್ಯವಾದಗಳೊಂದಿಗೆ

ಐಟಿಎಫ್‌ಸಿ ಶಿಕ್ಷಣ ತಂಡ

ಬೆಂಗಳೂರು

ITfC Rakesh

unread,
Mar 2, 2018, 11:13:07 PM3/2/18
to bengalurus...@googlegroups.com, englishstf, hpsmaths...@googlegroups.com, htfkarnataka, kannadastf, mathssciencestf, socialsciencestf, hindistf
--
Rakesh B
IT for Change

Reply all
Reply to author
Forward
0 new messages