ಚಿಂತನೆಯನ್ನು ಕಲಿಸುವ ಕುರಿತು ಶಿಕ್ಷಕರಿಗೆ ಅಭ್ಯಾಸಕ್ರಮ

1 view
Skip to first unread message

itfc.ed...@gmail.com

unread,
Dec 9, 2021, 4:36:42 AM12/9/21
to Alpha - Maths Teachers Group (Bengaluru South 3 Block)
"ಚಿಂತನೆಯನ್ನು ಕಲಿಸುವುದು" ಇತ್ತಚೆಗೆ ಶಿಕ್ಷಣದ ಒಂದು ಪ್ರಮುಖ ಗುರಿಯಾಗಿದೆ. ಬೋಧನೆಯ ಈ ಅಂಶವನ್ನು ಎನ್.ಇ.ಪಿ (NEP)ಯಲ್ಲಿ ಒತ್ತಿಹೇಳಲಾಗಿದೆ ಮತ್ತು ಭಾರತದಲ್ಲಿನ ಅನೇಕ ಹೊಸ ವಿಶ್ವವಿದ್ಯಾಲಯಗಳು ತಮ್ಮ ವಿದ್ಯಾರ್ಥಿಗಳಿಗೆ ವಿಮರ್ಶಾತ್ಮಕ ಚಿಂತನೆಯ ಅಂಶಗಳನ್ನು ಕಡ್ಡಾಯವಾಗಿ ಕಲಿಸುತ್ತವೆ. ಆದರೆ ಚಿಂತನೆಯನ್ನು ಕಲಿಸುವುದು ಎಂದರೇನು?
ಈ ಕಿರು ಅಭ್ಯಾಸಕ್ರಮದಲ್ಲಿ, ಚಿಂತನೆಯನ್ನು ಕಲಿಸುವ ಕೆಲವು ಪ್ರಾಯೋಗಿಕ ವಿಧಾನಗಳನ್ನು ನಾವು ಅನ್ವೇಷಿಸುತ್ತೇವೆ. ಮೊದಲಿಗೆ ಚಿಂತನೆಯ ಸ್ವರೂಪ, ವಿಭಿನ್ನ ರೀತಿಯ ಚಿಂತನೆಗಳು, ಚಿಂತನೆ ಮತ್ತು ಭಾಷೆಯ ನಡುವಿನ ಸಂಬಂಧ ಮತ್ತು ಇತರ ಸಂಬಂಧಿತ ವಿಷಯಗಳನ್ನು ಅರ್ಥಮಾಡಿಕೊಳ್ಳುವುದರ ಮೂಲಕ ನಾವು ಪ್ರಾರಂಭಿಸುತ್ತೇವೆ. ನಾವು ವಿಭಿನ್ನ ರೀತಿಯ ಚಿಂತನೆ ಮಾಡುವುದನ್ನು ಕಲಿಸುವ ಹಲವು ವಿಧಾನಗಳನ್ನು ನೋಡುತ್ತೇವೆ. ಈ ಚರ್ಚೆಗಳಲ್ಲಿ ಸುಂದರ್ ಸರುಕ್ಕೈ ಅವರು ಬರೆದು ಹಲವು ಭಾಷೆಗಳಿಗೆ ಅನುವಾದಗೊಂಡಿರುವ 'ಮಕ್ಕಳಿಗಾಗಿ ತತ್ತ್ವಚಿಂತನೆ' ಪುಸ್ತಕವನ್ನು ಬಳಸುತ್ತೇವೆ.
ಅಭ್ಯಾಸಕ್ರಮವು ಒಂದುವರೆ ಗಂಟೆಯ ನಾಲ್ಕು ಅವಧಿಗಳಲ್ಲಿ ನಡೆಯುತ್ತದೆ  ಪ್ರತಿ ಅಧಿವೇಶನದಲ್ಲಿ ನಾವು ಚರ್ಚಿಸುವ ವಿಚಾರಗಳನ್ನು ಕಾರ್ಯಗತಗೊಳಿಸುವುದಕ್ಕೆ ಸಂಬಂಧಪಟ್ಟ ಕೆಲವು ಪ್ರಾಯೋಗಿಕ ಅಂಶಗಳನ್ನು ಕುರಿತು ಭಾಗವಹಿಸುವವರು ಒಟ್ಟಾಗಿ ಚಿಂತನೆ ಹಾಗೂ ಚರ್ಚೆ ಮಾಡಲು ಚಟುವಟಿಕೆಗಳು ಇರುತ್ತದೆ

ನೋಂದಣಿ ಕುರಿತು ಹೆಚ್ಚಿನ ಮಾಹಿತಿಗಾಗಿ ಲಗತ್ತಿಸಲಾದ ಪೋಸ್ಟರ್ ಅನ್ನು ಅನುಸರಿಸಿ
ಗುರು
ಚಿಂತನೆಯನ್ನು_ಕಲಿಸುವ_ಕುರಿತು_ಶಿಕ್ಷಕರಿಗೆ_ಅಭ್ಯಾಸಕ್ರಮ_Dec 09.pdf
Reply all
Reply to author
Forward
0 new messages