ವಿಜ್ಞಾನ ಪಠ್ಯಪುಸ್ತದಲ್ಲಿನ ತಿಳಿಯದ ಕನ್ನಡ ಪದಗಳ ಬಗ್ಗೆ

4 views
Skip to first unread message

Ashok

unread,
Apr 22, 2016, 7:05:30 AM4/22/16
to mathssc...@googlegroups.com, bengalurus...@googlegroups.com, kanna...@googlegroups.com, socialsc...@googlegroups.com, htfkar...@googlegroups.com, engli...@googlegroups.com, karnataka_tea...@googlegroups.com, ko...@karnatakaeducation.org.in
ಆತ್ಮೀಯಾ ವಿಜ್ಞಾನ ಶಿಕ್ಷಕರೆ,

2014-15ನೇ ಸಾಲಿನ ಕರ್ನಾಟಕ ರಾಜ್ಯದ -  5, 8,ಮತ್ತು 10 ನೇ ತರಗತಿಯ ವಿಜ್ಞಾನ ಪಠ್ಯಪುಸ್ತಕಗಳಲ್ಲಿರುವ ಕೆಲವು ಪಾರಿಭಾಷಿಕ ಪದಗಳನ್ನು ವಿಮರ್ಶಿಸಿ ಸುಮಾರು 827 ಪದಗಳನ್ನು  ಪ್ರಶಾಂತ ಸೊರಟೂರ ರವರ ತಂಡ ಪಟ್ಟಿ ಮಾಡಲಾಗಿದೆ  . ಇದರಲ್ಲಿ ಕೇವಲ 275 ಮಾತ್ರ ತಿಳಿದ ಕನ್ನಡ ಭಾಷೆಯ ಪದಗಳಾಗಿವೆ. ಇನ್ನು ಉಳಿದಿರುವ 552 ಪದಗಳು ತಿಳಿಯದ ಪದಗಳಾಗಿವೆ.

ಮಕ್ಕಳಿಗೆ - ಸಂಸ್ಕೃತ ಪದ, ಇಂಗ್ಲೀಷ್ ಪದ ಮತ್ತು ಕನ್ನಡದ ಭಾಷೆಯ ಗೊತ್ತಿಲ್ಲದೆ ಇರುವ ಪದಗಳನ್ನು ವಿಜ್ಞಾನ ಪಠ್ಯಪುಸ್ತಕದಲ್ಲಿ ಇರುವದರಿಂದ ಇದರ ಬದಲಾಗಿ ಕನ್ನಡದ ಶಬ್ದಗಳನ್ನು (ಆಡುನುಡಿಯ ಪದ) ಬಳಸಿಕೊಂಡು ಆವರಣದಲ್ಲಿ ಇಂಗ್ಲೀಷ್ ಪದಗಳನ್ನು ಸೇರಿಸುವದರ ಮೂಲಕ ಮಕ್ಕಳಿಗೆ ವಿಜ್ಞಾನ ವಿಷಯದಲ್ಲಿ ಹೆಚ್ಚಿನ ಅರಿವು ಮೂಡಿಸುವಲ್ಲಿ ಸಹಕಾರಿಯಾಗಿರುತ್ತದೆ .

ಮುಖ್ಯವಾಗಿ ಗಮನಿಸಬೇಕಾದ ಅಂಶಗಳು ಈ ಕೆಳಗಿನಂತಿವೆ .
ಪಾಠದ ಸಂಖ್ಯೆ -
ಪಾಠದ ಹೆಸರು -
ಪಾಠಗಳಲ್ಲಿ ಬಳಸಿರುವ ಪದಗಳು -
ಇಂಗ್ಲೀಷ್ ಪದಗಳು -
ಬಳಸಬಹುದಾದ ಸಾಟಿ ಪದಗಳು .
    ಮೇಲಿನ ಎಲ್ಲ ಅಂಶಗಳ ಸಂಪೂರ್ಣವಾದ ವಿವರ ನೋಡಲು ಈ ಕೆಳಗಿನ ಲಿಂಕನ್ನು ಉಪಯೋಗಿಸಿಕೊಂಡು ನೋಡಬಹುದಾಗಿದೆ .
ಒಟ್ಟು  67 ಪುಟಗಳ ವಿವರಣೆ ಮತ್ತು 827 ಶಬ್ದಗಳನ್ನು ಕೋಯರ್ ಪುಟದಲ್ಲಿ ನೋಡಬಹುದು .

http://karnatakaeducation.org.in/KOER/en/index.php/Science:_Pedagogy

ಕನ್ನಡ ಮಾಧ್ಯಮದಲ್ಲಿ ವಿಜ್ಞಾನ ಪಠ್ಯಪುಸ್ತಕಗಳಲ್ಲಿನ ಪದಗಳ ಬಳಕೆಯ ಒಂದು ನೋಟ  ಎಂಬ ಪುಟವನ್ನು ನೋಡಬಹುದು .

ದಯಮಾಡಿ ಎಲ್ಲ ಶಿಕ್ಷಕರು ಸಂಪೂರ್ಣವಾಗಿ ಓದಿ ಅನಿಸಿಕೆ/ಅಭಿಪ್ರಾಯ ಗಳನ್ನು ಮುಕ್ತವಾಗಿ ಹಂಚಿಕೊಳ್ಳಬೇಕಾಗಿ ವಿನಂತಿಸಿಕೊಳ್ಳುತ್ತೇನೆ .

ಧನ್ಯವಾದಗಳು
ಅಶೋಕ
ಐ.ಟಿ.ಫಾರ್ ಚೇಂಜ್
ಬೆಂಗಳೂರು.
Reply all
Reply to author
Forward
0 new messages