Subject: ಶಿವಮೊಗ್ಗ ಜಿಲ್ಲೆಯ ಅಕ್ಟೋಬರ್ 2015 ಮಾಹೆಯ ಎಮ್.ಸಿ.ಟಿ.ಎಸ್ ನಲ್ಲಿನ ಚೈಲ್ಡ್ ಇಮ್ಯೂನೈಸೇಷನ್ ವರ್ಕ್ ಪ್ಲಾನ್ ಗಳನ್ನು ಅಪ್ ಡೇಟ್ ಮಾಡುವ ಕುರಿತು
ಆತ್ಮಿಯರೇ, ತಾಯಿ ಮರಣ ದರ ಹಾಗೂ ಶಿಶು ಮರಣ ದರವನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಗರ್ಭಿಣಿ ಮಹಿಳೆ ಮತ್ತು ಶಿಶುವಿನ ನೊಂದಣಿ ಮತ್ತು ಸದರಿಯವರಿಗೆ ನೀಡುವ ಸೇವಾ ವಿವರಗಳನ್ನು ಎಮ್.ಸಿ.ಟಿ.ಎಸ್ ತಂತ್ರಾಂಶದಲ್ಲಿ ದಾಖಲಿಸುತ್ತಿರುವುದು ತಮಗಾಗಲೇ ತಿಳಿದಿರುವ ವಿಷಯ.
ಎಮ್.ಸಿ.ಟಿ.ಎಸ್ ತಂತ್ರಾಂಶದಿಂದ ರಾಜ್ಯದಲ್ಲಿನ ಎಲ್ಲಾ ತಾಯಿ ಮತ್ತು ಶಿಶುವಿನ ನೊಂದಣಿಯಾದಲ್ಲಿ ಗಂಡಾಂತರ / ತೊಡಕಿನ ಗರ್ಭಾವಸ್ಥೆ ಗುರುತಿಸಲು, ಕುಟುಂಬ ಕಲ್ಯಾಣ ಯೋಜನೆ, ಜನನ ಪ್ರಮಾಣ ಪತ್ರ ವಿತರಿಸಲು, ಜಿಲ್ಲಾವಾರು / ತಾಲ್ಲೂಕುವಾರು ಯೋಜನೆಗಳನ್ನು ರೂಪಿಸಲು, ಔಷಧ / ಮಾತ್ರೆಗಳ ಬೇಡಿಕೆ ತಿಳಿಯಲು, ಆರೋಗ್ಯ ಸಂಸ್ಥೆಗಳ ಬೇಡಿಕೆಗನುಗುಣವಾಗಿ ಸಂಪನ್ಮೂಲಗಳನ್ನು ಒದಗಿಸಲು ಹಾಗೂ ಇತರೆ ವಿವಿಧ ಇಲಾಖೆಗಳಿಗೆ ಅನುಕೂಲಕರವಾಗಲಿದೆ.
ಎಮ್.ಸಿ.ಟಿ.ಎಸ್ ತಂತ್ರಾಂಶದಲ್ಲಿ ಈಗಾಗಲೇ ಹಲವಾರು ವಿದಧ ವರದಿ ಹಾಗೂ ವರ್ಕ್ ಪ್ಲಾನ್ ಗಳಿದ್ದು, ಸದರಿ ವರದಿ ಹಾಗೂ ವರ್ಕ್ ಪ್ಲಾನ್ ಗಳನ್ನು ಡೌನ್ ಲೋಡ್ ಮಾಡಿಕೊಂಡು ಬಳಸುವ ಬಗ್ಗೆ ತರಬೇತಿ ನೀಡಲಾಗಿರುತ್ತದೆ. ಆದಾಗ್ಯೂ ಸಹ ಪ್ರಾಥಮಿಕ ಆರೋಗ್ಯ ಕೇಂದ್ರದ ಮಾಸಿಕ ಸಭೆಗಳಲ್ಲಿ ಎಮ್.ಸಿ.ಟಿ.ಎಸ್ ಅನ್ನು ಪರಿಶೀಲಿಸದಿರುವುದು ವಿಷಾದನೀಯವಾಗಿರುತ್ತದೆ. ಇನ್ನು ಮುಂದೆ ಖಡ್ಡಾಯವಾಗಿ ಮಾಸಿಕ ಸಭೆಗಳಲ್ಲಿ ಎಮ್.ಸಿ.ಟಿ.ಎಸ್ ಪ್ರಗತಿಯನ್ನು ಪರಿಶೀಲಿಸಲು ತಿಳಿಸಲಾಗಿದೆ.
ಈಗಾಗಲೇ ಜಿಲ್ಲೆಗಳಿಗೆ ಪ್ರತಿ ಮಾಹೆ ರಾಜ್ಯ ಜನಸಂಖ್ಯಾತಜ್ಞರ ವಿಭಾಗದಿಂದ ಗರ್ಭಿಣಿ ಮಹಿಳೆ ಮತ್ತು ಶಿಶುವಿಗೆ ನೀಡಬೇಕಾದ ಸೇವಾ ವಿವರಗಳ ವರ್ಕ್ ಪ್ಲಾನ್ ಗಳನ್ನು ಡೌನ್ ಲೋಡ್ ಮಾಡಿಕೊಂಡು ಕಳುಹಿಸಲಾಗುತ್ತಿದ್ದಾಗ್ಯೂ ಸಹ ಗರ್ಭಿಣಿ ಮಹಿಳೆ ಮತ್ತು ಶಿಶುವಿನ ನೊಂದಣಿ ಕುಂಠಿತವಾಗಿರುವುದು ಹಾಗೂ ಫಲಾನುಭವಿಗಳಿಗೆ ನೀಡಿರುವ ಸೇವಾ ವಿವರಗಳ ಮಾಹಿತಿಯನ್ನು ಅಪ್ ಡೇಟ್ ಮಾಡದಿರುವುದು ಕಂಡುಬಂದಿರುತ್ತದೆ.
ಈ ಸಂಬಂಧ, ತಮ್ಮ ಜಿಲ್ಲೆಯ ಎಲ್ಲಾ ತಾಲ್ಲೂಕಿನ ಅಕ್ಟೋಬರ್ 2015 ರ ಮಾಹೆಯ ಎ.ಎನ್.ಸಿ,ಡೆಲಿವರಿ,ಚೈಲ್ಡ್ ಇಮ್ಯೂನೈಸೇಷನ್ ವರ್ಕ್ ಪ್ಲಾನ್ ಗಳನ್ನು ಈ ಇ-ಮೇಲ್ ನೊಂದಿಗೆ ಲಗತ್ತಿಸಿದ್ದು, ಜರೂರು ಸೇವಾ ವಿವರಗಳನ್ನು ಅಪ್ ಡೇಟ್ ಮಾಡಲು ತಿಳಿಸಲಾಗಿದೆ.
ಪ್ರತಿ ಮಾಹೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವರ್ಕ್ ಪ್ಲಾನ್ ಗಳನ್ನು ಮುದ್ರಿಸಿ ಸಂಬಂಧಿಸಿದ ಕ್ಷೇತ್ರ ಕಾರ್ಯಕರ್ತರಿಗೆ (ಕಿ.ಮ.ಆ.ಸ) ನೀಡುವುದು ಹಾಗೂ ಸಂಬಂಧಿಸಿದ ಕ್ಷೇತ್ರ ಕಾರ್ಯಕರ್ತರು ತಮ್ಮಲ್ಲಿನ ಫಲಾನುಭವಿಗಳಿಗೆ ನೀಡಿದ ಸೇವಾ ವಿವರಗಳನ್ನು ಅಪ್ ಡೇಟ್ ಮಾಡುವುದು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು / ತಾಲ್ಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಲಗತ್ತಿಸಿರುವ ನಮೂನೆಯನ್ನು ಪರಿಶೀಲಿಸಿ ಸೇವಾ ವಿವರಗಳನ್ನು ಅಪ್ ಡೇಟ್ ಮಾಡದಿರುವವರ ವಿರುದ್ಧ ಕ್ರಮ ಕೈಗೊಳ್ಳಲು ಹಾಗೂ ಕ್ರಮ ತೆಗೆದುಕೊಂಡ ಬಗ್ಗೆ ಈ ವಿಭಾಗಕ್ಕೆ ಮಾಹಿತಿ ತಿಳಿಸಲು ಸೂಚಿಸಲಾಗಿದೆ.
--
--
With Warm Regards,B. Vinutha Rani,
Demographer,
Health and Family Welfare Services.
Anand Rao Circle, Bangalore - 560 009.
Mob : 9449843357,080- 22389612 / 22341578
HMIS / MCTS teamKarnataka