You do not have permission to delete messages in this group
Copy link
Report message
Show original message
Either email addresses are anonymous for this group or you need the view member email addresses permission to view the original message
to bava-sa...@googlegroups.com
ಸ್ನೇಹಿತರೆ , ನಾಗರಹಾವು ಕಾದಂಬರಿಯ ನಾಯಕ ರಾಮಾಚಾರಿಯ ವ್ಯಕ್ತಿತ್ವ ನಿಜಕ್ಕೂ ವರ್ಣರಂಜಿತ. ಬಾಲ್ಯದಲ್ಲಿ ತನ್ನ ತುಂಟತನ ಮತ್ತು ಪುಂಡಾಟಗಳಿಂದ ಓದುಗರ ಮನಸ್ಸನ್ನು ಅಪಹರಿಸುವ ಈ ಪಾತ್ರ ಮುಂದೆ ಯವ್ವುನದಲ್ಲಿ ತನ್ನ ಬಾಲ್ಯದ ಸಂಗಾತಿ ಅಲಮೇಲುವಿನ ಪ್ರೇಮದಲ್ಲಿ ಸಿಲುಕಿ ಅವಳನ್ನು ಪಡೆಯಲಾರದೆ ನಿರಾಶಾದಾಯಕನಾಗಿ ಮುಂದೆ ಕಾಲೇಜಿನ ಸಹಪಾಟಿ ಮಾರ್ಗರೆಟ್ಟಿನ ಹಿಂದೆ ಬೀಳುವ ಪ್ರಸಂಗ ಬಹಳ ದಯನೀಯ. ನಾವು ಸಿನಿಮಾದಲ್ಲಿ ನೋಡುವ ರಾಮಾಚಾರಿಯ ಚಿತ್ರ ಕಾದಂಬರಿಯ ನಾಯಕನಿಗಿಂತ ಬಹಳ ಬೇರೆಯಾಗಿದೆ. ಕಾದಂಬರಿಯ ರಾಮಾಚಾರಿ ಮೆಳ್ಳುಗಣ್ಣಿನ , ಜುಟ್ಟು ಕೂದಲ ಯುವಕ . ಅಷ್ತ್ತೋದು ಆಕರ್ಷಕವಲ್ಲ . ನನಗಂತು ಆತನ ವ್ಯಕ್ತಿತ್ವದ ಪರಿಚಯ ಓದಿದಾಗ ಬಹಳ ಆಶ್ಚರ್ಯವೇ ಆಯಿತು. ಇಬ್ಬರು ಸುಂದರ ಯುವತಿಯರು ಈ ವ್ಯಕ್ತಿಗೆ ಮರುಳದದ್ದು ಸ್ವಲ್ಪ ಹಾಸ್ಯದ ವಿಷಯವೇ ಸರಿ. ಸಿನಿಮಾದಲ್ಲಿ ನಿರ್ದೇಶಕ ದಿ. ಪುಟ್ಟಣ್ಣ ಕಣಗಾಲ್ ಅವರು ಚಿತ್ರಿಸಿದ ನಾಯಕ ಸ್ವಲ್ಪ ಮೇಲೆoದೇ ನನ್ನ ಭಾವನೆ. ಈ ಪತ್ರದ ಬಗ್ಗೆ ನಮ್ಮ ಚರ್ಚೆಯನ್ನು ನನ್ನ ಮುoದಿನ ಮೇಲ್ನಲ್ಲಿ ಮುಂದುವರೆಸೋಣ.
ಉಮಾ.