kannada nechhina kAdambari karta Dr.S.L.Bhairappa.

17 views
Skip to first unread message

uma

unread,
Dec 9, 2011, 7:19:51 AM12/9/11
to Bhava Sammilana -ಭಾವ ಸಮ್ಮಿಳನ
ಆತ್ಮೀಯ ಮಿತ್ರರೇ ,
ನಮ್ಮೆಲ್ಲರ ಮೆಚ್ಚಿನ ಕನ್ನಡ ಲೇಖಕ ಡಾ.ಎಸ.ಎಲ್.ಭೈರಪ್ಪನವರ ಆತ್ಮಕಥೆ " ಭಿತ್ತಿ "
ಪುಸ್ತಕವನ್ನು ಕಳೆದ ವಾರವಷ್ಟೆ ಓದಿ ಮುಗಿಸಿದೆ. ನಾನು ಈ ಲೇಖಕರ ಬಗ್ಗೆ ನನ್ನ
ಪ್ರಾಥಮಿಕ ಶಾಲಾ ದಿನಗಳಿಂದಲೇ ಕೇಳಿದ ನೆನಪು. ನನ್ನ ತಾಯಿಯವರು ಆ ದಿನಗಳಲ್ಲಿ
ಕನ್ನಡಪ್ರಭ ವೃತ್ತ ಪತ್ರಿಕೆಯಲ್ಲಿ ದೈನಿಕ ಧಾರಾವಾಹಿಯಾಗಿ ಬರುತ್ತಿದ್ದ " ಗೃಹಭಂಗ "
ಕಾದಂಬರಿಯನ್ನು ಬಿಡದೆ ಓದುತ್ತಿದ್ದರಲ್ಲದೆ ನಮ್ಮ ನೆರೆಯ ಮನೆಯ ತಮ್ಮ ಗೆಳತಿಯರೊಂದಿಗೆ
ಅದರ ಬಗ್ಗೆ ದಿನವು ಮಾತನಾಡುತ್ತಿದ್ದುದು ಚೆನ್ನಾಗಿ ನೆನಪು. ನಾನು ಪ್ರುವುಢ ಶಾಲೆಗೆ
ಬಂದನಂತರ ಈ ಕಾದಂಬರಿಯನ್ನು ಓದುವ ಅವಕಾಶ ಲಭಿಸಿತು. ಆದರು ಅವರ ಕನ್ನಡ ಭಾಷೆ ನಮಗೆ
ಸ್ವಲ್ಪ ಕಥಿಣವೇ ಎನಿಸುತಿತ್ತು. ಅಂದಿನಿಂದ ಇಂದಿನವರೆಗೂ ಅವರ ಎಲ್ಲಾ ಕಾದಂಬರಿಗಳನ್ನು
ಓದಿ ಅರ್ಥ ಮಾಡಿಕೊಳ್ಳುವ ಯತ್ನ ಮಾಡಿದ್ದೇನೆ. ಮುಂದೆ ಅವರ ಕಾದಂಬರಿಯನ್ನು ಆಧಾರಿಸಿ
ಚಿತ್ರಿಸಿದ ವಂಶವೃಕ್ಷ, ತಬ್ಬಲಿಯು ನೀನಾದೆ ಮಗನೆ, ಮತದಾನ ಹೀಗೆ ಹಲವಾರು ಕನ್ನಡ ಚಲನ
ಚಿತ್ರಗಳನ್ನು ಮೆಚ್ಚಿದ್ದೇನೆ. ಕನ್ನಡ ಕಾದಂಬರಿ ಪ್ರಪಂಚದಲ್ಲಿ ಅವರ ಪುಸ್ತಕಗಳು
ಕಂಡಷ್ಟು ಮರು ಮುದ್ರಣಗಳನ್ನು ಪ್ರಾಯಶಃ ಇನ್ನಾವ ಪುಸ್ತಕಗಳು ಕಂಡಿಲ್ಲ. ಅವರ
ಪ್ರತಿಯೊಂದು ಕಾದಂಬರಿಗಳ ಕಥಾವಸ್ತುಗಳು ಸೃಷ್ಟಿಸಿರುವಷ್ಟು ವಿವಾದವನ್ನು ಇನ್ನಾವ
ಲೇಖಕರು ಸೃಷ್ಟಿಸಿಲ್ಲ. ಒಟ್ಟಿನಲ್ಲಿ ಅವರ ಪ್ರತಿಯೊಂದು ಕಾದಂಬರಿಗೂ ತನ್ನದೇ ಆದ
ವೈಷಿತ್ಟತೆ ಇದೆ. ಇನ್ನೊಂದು ಕುತೂಹಲಕಾರಿಯಾದ ಅಂಶವೆಂದರೆ ಅವರ ಕಾದಂಬರಿಯ ಕಥಾ
ವಸ್ತುಗಳಿಗೆ ಹಲವದರಲ್ಲಿ ನೇರವಾಗಿ ಅವರ ಜೀವನದೊಂದಿಗೆ ಸಂಭಂಧವಿದೆ. ಉದಾಹರಣೆಗೆ "
ಗೃಹ ಭಂಗ " ಕಾದಂಬರಿಯ ಕಥಾ ವಸ್ತು ಅವರ ಬಾಲ್ಯದ ದುರಂತ ಚಿತ್ರಣವೇ ಆಗಿದೆ. ತಮ್ಮ
ತಾಯಿ, ತಮ್ಮ , ಅಣ್ಣ ಮತ್ತು ತಮ್ಮಂದಿರನ್ನು ಪ್ಲೇಗ್ ಮಾರಿಗೆ ಕಳೆದುಕೊಂಡ ಈ ಪುಸ್ತಕ
ಓದುಗರ ಕಣ್ಣುಗಳನ್ನು ತೇವವಾಗಿಸುವುದರಲ್ಲಿ ಯಾವ ಸಂದೇಹವು ಇಲ್ಲ. ಈ ಲೇಖಕನ ಬಗ್ಗೆ
ನಮ್ಮ ಈ ಭಾವ ಸಂಗಮದ ಇತರ ಮಿತ್ರರು ಮುಂದುವರೆಸಿರಿ ಎಂಬ ಸಲಹೆಯೊಂದಿಗೆ ಈ ನಾಲ್ಕು
ಸಾಲುಗಳನ್ನು ಮುಗಿಸುತ್ತೇನೆ.
ತಮ್ಮ ವಿಶ್ವಾಸಿ.
ಉಮಾ ವೆಂಕಟೇಶ್.
--
uma.v

anand nadgir

unread,
Dec 9, 2011, 7:46:42 AM12/9/11
to bava-sa...@googlegroups.com
hello,
 agree with the opinions of Uma.We all miss a great writter.
Anand
 

From: uma <venkat...@gmail.com>
To: Bhava Sammilana -ಭಾವ ಸಮ್ಮಿಳನ <bava-sa...@googlegroups.com>
Sent: Friday, 9 December 2011, 12:19
Subject: kannada nechhina kAdambari karta Dr.S.L.Bhairappa.

Rajaram

unread,
Dec 9, 2011, 10:37:37 AM12/9/11
to Bhava Sammilana -ಭಾವ ಸಮ್ಮಿಳನ

Please watch the following Yuo tube news item and other information
about SL Bhayrappa's recent prestigious award "Saraswathi Samman".

http://www.youtube.com/watch?feature=endscreen&NR=1&v=TqPYBRzKphQ

Rajaram Cavale.

Uma Venkatesh

unread,
Dec 9, 2011, 12:15:35 PM12/9/11
to bava-sa...@googlegroups.com
ಬಹಳ ಧನ್ಯವಾದಗಳು ಡಾ.ರಾಜಾರಾಮ್. ಈ ಮಹಾನ್ ಲೇಖಕರ ಸಂದರ್ಶನ ತುಂಬಾ ಚೆನ್ನಾಗಿ ಮೂಡಿ ಬಂದಿದೆ.
ಉಮಾ.

2011/12/9 Rajaram <cava...@gmail.com>



--
uma.v

Anu Anand

unread,
Dec 12, 2011, 5:45:18 AM12/12/11
to Bhava Sammilana -ಭಾವ ಸಮ್ಮಿಳನ
ಉಮ, ಭೈರಪ್ಪ ನವರ ಬಗ್ಗೆ ಬರೆದಾಗ ನನಗೂ ನಾನು ಓದಿರುವ ಕೆಲವು ಕೃತಿಗಳ ಬಗ್ಗೆ ನನ್ನ
ಅನಿಸಿಕೆಗಳನ್ನ ಹಂಚಿಕೊಳ್ಳಬೇಕೆಂಬ ಹಂಬಲದಿಂದ ಈ ಲೇಖನವನ್ನ post ಮಾಡುತ್ತಿದ್ದೇನೆ.
ಬರೆಯುವ ಹುಮ್ಮಸ್ಸಿನಲ್ಲಿ ಲೇಖನ ಸ್ವಲ್ಪ ದೊಡ್ಡದೇ ಆಗಿದೆ! ಕ್ಷಮೆಯಿರಲಿ...

ನಾನು ಓದಿದ ಮೊದಲ ಕಾದಂಬರಿ - ವಂಶವೃಕ್ಷ. ನನಗೆ ಬಹಳ ಮೆಚ್ಚಿಗೆಯಾದ ಪಾತ್ರ
ಶ್ರೋತ್ರಿಗಳದ್ದು. ಹಿಂದೂ ಸಂಪ್ರದಾಯ, ಸಂಸ್ಕೃತಿಯಲ್ಲಿ ಅಗಾಧವಾದ ನಂಬಿಕೆ ಇದ್ದ
ಅವರಿಗೆ ತಮ್ಮ ಜನ್ಮರಹಸ್ಯ ತಿಳಿದಾಗ ಆಗುವ ಮಾನಸಿಕ ಅಘಾತವನ್ನ ಭೈರಪ್ಪ ನವರು ಬಹಳ
ಸೊಗಸಾಗಿ ಚಿತ್ರಿಸಿದ್ದಾರೆ. ವಿಧವಾವಿವಾಹವನ್ನು ಕೇಳರಿಯದ ಕಾಲದಲ್ಲಿ ಕಾತ್ಯಾಯಿನಿ
ದಿಟ್ಟಹೆಜ್ಜೆಯಿಟ್ಟು ಮರು ಮದುವೆಯಾದರೂ ತಪ್ಪು ಮಾಡಿರುವೆನೆಂಬ ಭಾವನೆಯಿಂದ
ಕಡೆಯವರೆಗೂ ದು:ಖವನ್ನನುಭವಿಸುತ್ತಾಳೆ.
ಅವರ "ಧರ್ಮಶ್ರೀ" ಯಲ್ಲಿ ಕಥಾನಾಯಕ ಪ್ರೀತಿಗಾಗಿ ಮತಾಂತರ ಹೊಂದಿ, ತನ್ನ ಮೂಲ
ಸಂಪ್ರದಾಯಗಳನ್ನ ಬಿಡಲಾಗದೆ, ಮತಾಂತರ ಹೊಂದಿದ ಮತವನ್ನ ಪೂರ್ತಿಯಾಗಿ
ಒಪ್ಪಿಕೊಳ್ಳಲಾಗದೆ ತೊಳಲಾಡುವುದು ಬಹಳ ಮನೋಜ್ಞವಾಗಿದೆ. ಅವನ ಮನದಲ್ಲಾಗುವ ಕಳವಳ,
ತುಮುಲ ಬಹಳ ಸಹಜವಾಗಿದೆ.
ಹಸುವಿಗೆ ಹಿಂದೂಧರ್ಮದಲ್ಲಿ ವಿಶೇಷ ಸ್ಥಾನವಿದೆ. ಅವಳನ್ನ ಮಾತೆಯಂತೆ, ದೇವರಂತೆ
ಪೂಜಿಸುತ್ತೇವೆ. ಅಂಥಾ ತಾಯಿಯ ಹಾಲನ್ನ ಮತ್ತು ದೇಹವನ್ನ ವ್ಯಾಪಾರಕ್ಕಾಗಿ ಬಳಸಿದಾಗ
ಆಗುವ ಧರ್ಮಸಂಕಟವನ್ನ ಭೈರಪ್ಪನವರು "ತಬ್ಬಲಿಯು ನೀನಾದೆ ಮಗನೆ" ಯಲ್ಲಿ ಬಹಳ ಚೆನ್ನಾಗಿ
ಬರೆದಿದ್ದಾರೆ.
ಈ ಮೇಲಿನ ಕಾದಂಬರಿಗಳನ್ನು ಓದಿದಾಗ ಭೈರಪ್ಪನವರು ಹಿಂದೂಧರ್ಮವನ್ನ
ಟೀಕೆಮಾಡುತ್ತಿದ್ದಾರೆ ಎಂಬುದು ಕೆಲವರ ಅಭಿಪ್ರಾಯ. ಆದರೆ ಅವರು ಕಾದಂಬರಿಗಳಲ್ಲಿ ಬರುವ
ಪಾತ್ರಗಳ ನೈಜ ಮನೋಭಾವವನ್ನಷ್ಟೇ ಚಿತ್ರಿಸಿದ್ದಾರೆ. ಓದುಗ ಆ ಆ ಕಾದಂಬರಿಯ
ಚೌಕಟ್ಟಿನಲ್ಲಿ, ಆ ಆ ಪಾತ್ರಗಳ ಪರಿಧಿಯಲ್ಲಿ ವಿಮರ್ಶಿಸಬೇಕೇ ವಿನಹ ಅದನ್ನ
generalise ಮಾಡಬಾದದೆಂಬುದು ನನ್ನ ಅಭಿಪ್ರಾಯ.
ಇನ್ನು ಅವರ "ಪರ್ವ" ವಂತೂ ಒಂದು ಬೃಹತ್ ಮತ್ತು ಮಹಾನ್ ಕೃತಿ ಎಂದರೆ ತಪ್ಪಾಗಲಾರದು!
ಭಾರತ ದೇಶದಲ್ಲಿ ಹುಟ್ಟಿರುವ ಎಲ್ಲಾ ಮಕ್ಕಳೂ ಮಹಾಭಾರತವನ್ನ ಕೇಳಿ, ಓದಿ
ಬೆಳೆದಿರುವವರೇ! ಮಕ್ಕಳಾಗಿದ್ದಾಗ ಈ ಕಥೆಯಲ್ಲಿ ಬರುವ ಸನ್ನಿವೇಶಗಲನ್ನ ನಂಬಿದ್ದೆವು.
ಆದರೆ ದೊಡ್ಡವರಾದಂತೆ, ಈ ಕಥೆಯ ಸತ್ಯಾಸತ್ಯತೆಯನ್ನು ವಿಶ್ಲೇಷಿಸುವ ಬುದ್ಧಿ ಬಂದಾಗ ಈ
ಸನ್ನಿವೇಶಗಳು ಹೇಗೆ ನಡೆದಿರಬಹುದೆಂಬ ಕುತೂಹಲ ಸಹಜ. ಇಂಥಾ ಜಿಜ್ಞಾಸೆಗಳಿಗೆಲ್ಲಾ
"ಪರ್ವ" ದಲ್ಲಿ ವೈಜ್ಞಾನಿಕವಾದ ಮತ್ತು ತರ್ಕಬದ್ಧವಾದ ಉತ್ತರವಿದೆ. ಯುದ್ಧದ
ಚಿತ್ರಣವಂತೂ ಅದ್ಭುತ!

"ಜಲಪಾತ" - ಹೊಟ್ಟೆಪಾಡಿಗಾಗಿ ತೌರೂರನ್ನು ಬಿಟ್ಟು ಹೋದ ದಂಪತಿಗಳು, ಹಲವಾರು ವರ್ಷಗಳ
ನಂತರ ತಾಯ್ನಾಡಿಗೆ ಮರಳಿದಾಗ, ಅಲ್ಲಿಯ ಸನ್ನಿವೇಶಗಳಿಗೆ ಹೊಂದಿಕೊಳ್ಳಲಾಗದೆ
ಭ್ರಮನಿರಸನಗೊಂಡು ಊರು ಬಿಡುವ ಸಂಧರ್ಭವನ್ನ ಭೈರಪ್ಪನವರು ಬಹಳ ಚೆನ್ನಾಗಿ
ಬರೆದಿದ್ದಾರೆ. ಹೊರದೇಶದಲ್ಲಿರುವ ನಮ್ಮಂಥಹವರನ್ನ ನೋಡೇ ಬರೆದಿದ್ದಾರೆನೋ
ಅನ್ನಿಸುತ್ತದೆ :)

"ಮತದಾನ" - ಈ ಕಾದಂಬರಿಯ ಕಥಾವಸ್ತು ನನಗೆ ಬಹಳ ಇಷ್ಟವಾಯಿತು. ೬೦ರ ದಶಕದಲ್ಲಿ
ಬರೆದಿರುವ ಈ ಕಾದಂಬರಿಯಲ್ಲಿ, ಆಗಿನ ಭಾರತದ ರಾಜಕೀಯ ವಿದ್ಯಮಾನಗಳನ್ನ ಬಹಳ
ಮನೋಜ್ನವಾಗಿ ಚಿತ್ರಿಸಿದಾರೆ. ನನ್ನ ಅನಿಸಿಕೆಯೆಂದರೆ, ಈ ಕಥೆ ಈಗಿನ ಭಾರತದ ರಾಜಕೀಯ
ಪರಿಸ್ಥಿತಿಗೂ ಅನ್ವಯಿಸುತ್ತದೆ! ಇದು ಶೋಚನೀಯವೋ, ವಿಷಾದಕರವೋ, ಆಶ್ಚರ್ಯವೋ ನಾ
ಕಾಣೆ!

ಅವರ ಇತ್ತೀಚಿನ ಚಾರಿತ್ರಿಕ ಹಿನ್ನೆಲೆಯ ಕಾದಂಬರಿ "ಅನಾವರಣ" ಇನ್ನೊಂದು ಮೇರು ಕೃತಿ.
ಹೊರದೇಶದವರ ಲಗ್ಗೆಯಿಂದ ಭಾರತಕ್ಕಾದ ಶೋಷಣೆ, ಹಾನಿಯನ್ನ ಬಹಳ ಕೂಲಂಕುಶವಾಗಿ
ಚಿತ್ರಿಸಿದ್ದಾರೆ. ಈ ಕಾದಂಬರಿ ಬಿಡುಗಡೆಯಾದಾಗ ಕರ್ನಾಟಕದಲ್ಲಿ ಬಹಳ
ಗಲಭೆಯಾಗಿತ್ತೆಂದು ಕೇಳಿದ್ದೇನೆ. ಆದರೆ ಇದು ನಮ್ಮ ಚರಿತ್ರೆ. ಸತ್ಯ ಘಟಣೆಗಳು.
ಇವಕ್ಕೆ ನಮ್ಮ ಹಂಪೆಯಂಥಾ ಸ್ಥಳಗಳೇ ಭಗ್ನ ಸಾಕ್ಷಿ! ಹೀಗಿರುವಾಗ ಗಲಭೆ ಯಾಕೆ? ಚರಿತ್ರೆ
ಯನ್ನ ಚರಿತ್ರೆಯಾಗಿ ನೋಡಿ, ಓದಿ, ಪುನಹ ಹೀಗಾಗದಿರುವಂತೆ ನೋಡಿಕೊಳ್ಳುವುದು
ಮಾನವೀಯತೆಯಲ್ಲವೆ?

ಆರನೇ ಅಥವಾ ಒಂಬತ್ತನೇ ಶತಮಾನದ (ಸರಿಯಾಗಿ ಜ್ಞಾಪಕ ಇಲ್ಲ!) ವ್ಯಾಪಾರ ಮತ್ತು ವಾಣಿಜ್ಯ
ಪರಿಸ್ಥಿತಿಯನ್ನ ಚಿತ್ರಿಸಿರುವ "ಸಾರ್ಥ", ಸಂಗೀತ ಮತ್ತು ನೃತ್ಯದ ಹಿನ್ನೆಲೆಯ
"ಮಂದ್ರ" ಮತ್ತು ಸ್ತ್ರೀವಿಮೋಚನೆ/ಶೋಷಣೆ (ಪುರುಷ ಶೋಷಣೆ/sadism ಎಂದೆನಬಹುದೆಂದು
ನನ್ನ ಅಭಿಪ್ರಾಯ!) ಯ ಬಗ್ಗೆ ಬರೆದಿರುವ "ಕವಲು" ನನ್ನ ಅಭಿರುಚಿಗೆ
ದೂರವಾಗಿತ್ತೆನ್ನಬಹುದು.

ಉಮ ಬರೆದಿರುವಂತೆ "ಗೃಹಭಂಗ" ಮತ್ತು "ಭಿತ್ತಿ" ಅವರ ಜೀವನಗಾಥೆ. ಎಂಥಾ ಕಷ್ಟಕರ
ಪರಿಸ್ಥಿತಿಯಲ್ಲೂ ಮನಸ್ಥೈರ್ಯದಿಂದ ಮತ್ತು ಮನೋಬಲದಿಂದ, ಓದಬೇಕು, ಜೀವನದಲ್ಲಿ
ಮುಂದೆಬರಬೇಕೆಂಬ ಗುರಿಯಿಂದ ಎಲ್ಲವನ್ನೂ, ಎಲ್ಲರನ್ನೂ ಎದುರಿಸಿ ತಮ್ಮ ಕಾಲಮೇಲೆ ತಾವು
ಹೆಮ್ಮೆಯಿಂದ ನಿಂತಿರುವ ಮಹಾನ್ ವ್ಯಕ್ತಿ ಎಸ್.ಎಲ್.ಭೈರಪ್ಪ! ಯಾವ ಪ್ರಶಂಸೆಗಗಲೀ,
ಪ್ರಶಸ್ತಿಗಾಗಲೀ ಹಂಬಲಿಸದೆ, ಸಾಹಿತ್ಯಕ್ಕಾಗಿ, ಕನ್ನಡಭಾಷೆಯ ಸೇವೆಗಾಗಿ ಅವಿರತವಾಗಿ
ದುಡಿಯುತ್ತಿರುವ ಮಿನುಗುತಾರೆ!


On Dec 9, 5:15 pm, Uma Venkatesh <venkatesh....@gmail.com> wrote:
> ಬಹಳ ಧನ್ಯವಾದಗಳು ಡಾ.ರಾಜಾರಾಮ್. ಈ ಮಹಾನ್ ಲೇಖಕರ ಸಂದರ್ಶನ ತುಂಬಾ ಚೆನ್ನಾಗಿ ಮೂಡಿ
> ಬಂದಿದೆ.
> ಉಮಾ.
>

> 2011/12/9 Rajaram <caval...@gmail.com>

> uma.v- Hide quoted text -
>
> - Show quoted text -

Uma Venkatesh

unread,
Dec 12, 2011, 8:36:39 AM12/12/11
to bava-sa...@googlegroups.com
ಧನ್ಯವಾದಗಳು ಅನು. ಮುಂದೆ ಭೈರಪ್ಪನವರ ಪ್ರತಿಯೊಂದು ಕಾದಂಬರಿಗಳಲ್ಲಿನ ಕಥಾವಸ್ತು ಮತ್ತು ಪತ್ರಗಳ ವಿಶ್ಲೇಷಣೆಯನ್ನು ನಾವು ಮುಂದುವರೆಸೋಣವೇ ? 
ಉಮಾ.

2011/12/12 Anu Anand <annapoo...@googlemail.com>



--
uma.v

Annapoorna Anand

unread,
Dec 12, 2011, 8:38:55 AM12/12/11
to bava-sa...@googlegroups.com
khanDita :)

Pavan Mysore

unread,
Dec 12, 2011, 10:52:10 AM12/12/11
to bava-sa...@googlegroups.com
Good one.. I would love to see what people write. could be good to have blogg.. because emails can get lost..
what you say?
 
and my fav book was Dharma Sree..
 
P
--- On Mon, 12/12/11, Annapoorna Anand <annap...@yahoo.com> wrote:

Uma Venkatesh

unread,
Dec 12, 2011, 11:51:14 AM12/12/11
to bava-sa...@googlegroups.com
ಪವನ್ ಅವರೇ ದಯವಿಟ್ಟು ಕನ್ನಡದಲ್ಲಿ ಬರಿತಿರ. ನಾವು ಕನ್ನಡ ಭಾಷೆಯನ್ನು ಬಳಕೆಯಲ್ಲಿಡಲೆಂದೇ ಪ್ರಾರಂಭಿಸಿರುವ ಚಟುವಟಿಕೆಯಿದು. ಖಂಡಿತವಾಗಿ ನೀವು ನಿಮ್ಮ ನೆಚ್ಚಿನ ಕಾದಂಬರಿ " ಧರ್ಮಶ್ರೀ " ಪುಸ್ತಕದ ಬಗ್ಗೆ ಮನ ಪೂರ್ವಕವಾಗಿ ಬರೆಯಿರಿ ಆದರೆ ಕನ್ನಡದಲ್ಲಿ. 
ಉಮಾ.


2011/12/12 Pavan Mysore <mnp...@yahoo.com>



--
uma.v

Rajaram Cavale

unread,
Dec 12, 2011, 4:18:04 PM12/12/11
to bava-sa...@googlegroups.com
ಮಾನ್ಯ ಪವನ್ ಅವರೇ,
ನಮ್ಮ 'ಭಾವ ಸಮ್ಮಿಳನ' ಯಾಹೂ ಗುಂಪಿಗೆ ಸೇರಿದ್ದು. ಅದು ಇರುವುದು ಇ-ಮೆಯಿಲಿನಲ್ಲಿ ಮಾತ್ರವಲ್ಲ. ಇದರ ತಾಣ ಅಂತರಜಾಲದಲ್ಲಿದೆ, ಬ್ಲಾಗಿನ ತರಹ. ಅದು ಕಳೆದು ಹೋಗುವ ಸಂಭವ ಇಲ್ಲ. ಈ ತಾಣಕ್ಕೆ ಹೋಗಲು ಇಲ್ಲಿ ಕ್ಲಿಕ್ಕಿಸಿ:
ನಮಸ್ಕಾರ
ರಾಜಾರಾಮ್.

2011/12/12 Pavan Mysore <mnp...@yahoo.com>
Good one.. I would love to see what people write. could be good to have blogg.. because emails can get lost..
Reply all
Reply to author
Forward
0 new messages