ಕರ್ಮ ಮತ್ತು ಜ್ನಾನದಿಂದ ಬ್ರಹ್ಮಜ್ನಾನವನ್ನು ತನ್ನದಾಗಿಸಿಕೊಳ್ಳುವ ಸತ್ಯಕಾಮನ ಕಥೆ
"where there is a will there is a way" ಎನ್ನುವ ಉಕ್ತಿಗೆ ಉದಾಹರಣೆ. ಎಷ್ಟೇ
ಕಷ್ಟಗಳು ಬಂದೊದಗಿದರೂ ಅದನ್ನೆಲ್ಲಾ ಒಬ್ಬನೇ ಎದುರಿಸಿ, ಜ್ನಾನಾರ್ಜನೆಯೊಂದನ್ನೇ
ಗುರಿಯಾಗಿಟ್ಟುಕೊಂಡು, ಗುರುಗಳ ಮಾತನ್ನು ಶಿರಸಾವಹಿಸಿ ಪಾಲಿಸುವ ಸತ್ಯಕಾಮನ ಚರಿತ್ರೆ
ಆದರ್ಶ ಬಾಳ್ವೆಗೆ ಒಂದು ದೃಷ್ಟಾಂತ.
ಕಾಡಿನಲ್ಲಿ ಪುಟ್ಟಬಾಲಕ ಸತ್ಯಕಾಮ ಒಬ್ಬನೇ ಜೀವನ ನಡೆಸುವಾಗ, ಕಾನನದ ಕರಾಳತೆ ಅವನನ್ನು
ಹೆದರಿಸಿದಾಗ ನಾವೂ ಹೆದರಿ, ಅರಣ್ಯದ ರುದ್ರ ರಮಣೀಯ ಸೌಂದರ್ಯ ಅವನನ್ನು
ಚಕಿತಗೊಳಿಸಿದಾಗ ನಾವೂ ಚಕಿತಗೊಂಡು, ಪ್ರಕೃತಿಯ ಮಡಿಲಲ್ಲಿ ಮಗುವಾಗಿ ಅಲ್ಲಿರುವ ನೀರು,
ಮರ, ಗಿಡಗಳನ್ನು ತನ್ನನ್ನು ಕಾಪಾಡುತ್ತಿರುವ ತಾಯಂದಿರೆಂದು ಧನ್ಯತೆಯನ್ನು ವ್ಯಕ್ತ
ಪಡಿಸಿದಾಗ ನಾವೂ ಅವನ ಭಾವನೆಗಳಲ್ಲೋಂದಾಗುವಂತೆ ಮಾಡುವ ತರಾಸು ರವರ ಮನೋಜ್ನ
ಕಥಾವಿವರಣೆಯನ್ನು ಪದಗಳಿಂದ ಬಣ್ಣಿಸಲಸಾಧ್ಯ! ಓದೇ ತಿಳಿಯಬೇಕು!!