8 views
Skip to first unread message

Uma Venkatesh

unread,
Jul 27, 2011, 5:57:56 AM7/27/11
to bhava-...@googlegroups.com
ಕನ್ನಡ abhimanigalerigu chira parichitarada ಕನ್ನಡ kadambarikaara Divaganta.Ta.Ra.Su.avara kadambarigalu ಕನ್ನಡ sahitydalli ondu visheshavaada sthanavannu galisive. Avara kadambarigalannu adharavagittikondu aneka ಕನ್ನಡ chalnachitragallannu bahala yashasviyagi chtrikarisiddare. Intaha ಮಹನ್ lekhakana bagge mattu avara kadambarigala bagge ಭವ-Sangamada sadasyaru tamma abhiprayagalannu antarajaala tanakke bareyiri mattu avara halavaaru pustakagalalli ಎಲ್ಲಾ mitraruu ondannadaru khandita odiralebekendu nanna abhipraya. Neevella bahushaah odiruva mattu nodiruva chalana ಚಿತ್ರಾ "Naagara Havu". ನಾನು pustaka amttu chalana chitarada bagge nimma abhiprayagalannu bareyiri.
Tamma vishwasi.
ಉಮಾ Venaktesh.


--
uma.v

Rajaram Cavale

unread,
Jul 27, 2011, 8:28:49 AM7/27/11
to bhava-...@googlegroups.com
ಡಾ. ಉಮಾ ಅವರಿಗೆ ಶುಭಾಷಯಗಳು,
ತಾ ರಾ ಸು ಅವರ ಬಗ್ಗೆ ಬರೆದ ವಿಷಯಗಳು ನಮ್ಮ ಗುಂಪಿನ ಸದಸ್ಯರಲ್ಲಿ ಕುತೂಹಲ ಬರಿಸುವುದೆಂದು ನಂಬಿದ್ದೇನೆ. ಆದರೆ ತಮ್ಮ ಬರೆವಣಿಗೆಯು 'ಕನ್ನಡ' ಎಂಬ ಪದವನ್ನು ಬಿಟ್ಟರೆ ಮಿಕ್ಕೆಲ್ಲವೂ ಇಂಗ್ಲಿಷಿನಲ್ಲಿ ಇದೆ. ತಾವು ಕನ್ನಡ ಲಿಪಿಯಲ್ಲಿ ಬರೆದರೋ ಅಥವಾ ಆಂಗ್ಲಲಿಪಿಯಲ್ಲಿ ಬರೆದರೋ ಗೊತ್ತಾಗಲಿಲ್ಲ.
ಇತಿ
ರಾಜಾರಾಮ್.


 
2011/7/27 Uma Venkatesh <venkat...@gmail.com>

Uma Venkatesh

unread,
Jul 27, 2011, 12:19:22 PM7/27/11
to bhava-...@googlegroups.com
ಮಾನ್ಯ ರಾಜಾರಾಮ್ ಅವರೇ,
ನಾನು ಉಪಯೋಗಿಸಿರುವುದು ಗೂಗಲ್ ನಲ್ಲಿನ ಅಂಗ್ಲ ಭಾಷೆಯಿಂದ ಕನ್ನಡ ಕ್ಕೆ ಇರುವ ಅನುವಾದವನ್ನು. ಅದರಲ್ಲಿರುವ ಸುಲಭ್ಯ ಕೇವಲ ಇಷ್ತ್ತೆ ಎಂದು ಕಾಣುತ್ತದೆ.
ಉಮಾ ವೆಂಕಟೇಶ್ .

2011/7/27 Rajaram Cavale <cava...@gmail.com>



--
uma.v

Rajaram

unread,
Jul 30, 2011, 2:33:37 PM7/30/11
to Bhava Sangama -ಭಾವ ಸಂಗಮ
ಉಮಾ ಅವರೇ,
ಕೆಳಗೆ ಕಂಡಹಾಗೆ, ನಿಮ್ಮ ಪತ್ರವನ್ನು ಸಂಪೂರ್ಣವಾಗಿ ಕನ್ನಡಕ್ಕೆ
ಲಿಪ್ಯಂತರಗೊಲಿಸಿದ್ದೇನೆ:-

ಕನ್ನಡ ಚಿರಪರಿಚಿತರಾದ ಕನ್ನಡ ಕಾದಂಬರಿಕಾರ ದಿವಂಗತ ತ.ರಾ.ಸು ಅವರ ಕಾದಂಬರಿಗಳು
ಕನ್ನಡ ಸಾಹಿತ್ಯದಲ್ಲಿ ಒಂದು ವಿಶೇಷವಾದ
ಸ್ಥಾನವನ್ನು ಗಳಿಸಿವೆ. ಅವರ ಕಾದಂಬರಿಗಳನ್ನು ಆಧಾರವಗಿತ್ತಿಕೊಂಡು ಅನೇಕ
ಕನ್ನಡ
ಚಲನಚಿತ್ರಗಳನ್ನು ಬಹಳ ಯಶಸ್ವಿಯಾಗಿ ಚಿತ್ರೀಕರಿಸಿದ್ದಾರೆ. ಇಂತಹ ಮಹನ್
ಲೇಖಕರ ಬಗ್ಗೆ ಮತ್ತು ಅವರ ಕಾದಂಬರಿಗಳ ಬಗ್ಗೆ ಭಾವ-ಸಂಗಮದ ಸದಸ್ಯರು ತಮ್ಮ
ಅಭಿಪ್ರಾಯಗಳನ್ನು ಈ ಅಂತರಜಾಲ ತಾಣಕ್ಕೆ ಬರೆಯಿರಿ ಮತ್ತು ಅವರ ಹಲವಾರು
ಪುಸ್ತಕಗಳಲ್ಲಿ ಎಲ್ಲಾ ಮಿತ್ರರೂ ಒಂದನ್ನಾದರೂ ಖಂಡಿತ ಓದಿರಲೇಬೇಕೆಂದು ನನ್ನ
ಅಭಿಪ್ರಾಯ. ನೀವೆಲ್ಲ ಬಹುಶಃ ಓದಿರುವ ಮತ್ತು ನೋಡಿರುವ ಚಲನ ಚಿತ್ರ "Naagara
ಹಾವು". I ಪುಸ್ತಕದ ಮತ್ತು ಚಲನಚಿತ್ರದ ಬಗ್ಗೆ ಬಹುಷಃ ತಿಳಿದಿದ್ದರೆ ,
ನಿಮ್ಮ ಅಭಿಪ್ರಾಯಗಳನ್ನು
ಬರೆಯಿರಿ
ತಮ್ಮ ವಿಶ್ವಾಸಿ


ಉಮಾ ವೆಂಕಟೇಶ್ .

Rajaram Cavale

unread,
Jul 30, 2011, 2:45:48 PM7/30/11
to Bhava Sangama -ಭಾವ ಸಂಗಮ
ಗೂಗಲ್ ಇಮೇಯಿಲಿನಲ್ಲಿ ಕನ್ನಡದಲ್ಲಿ ಬರೆಯಬೇಕಾದರೆ, "ಅ" ಎಂಬ ಗುಂಡಿಯನ್ನು ಒತ್ತಿ, ಇಂಗ್ಲಿಷಿನಲ್ಲಿ ಬರೆದ ಪ್ರತಿ ಪದಗಳನಂತರ space-bar ಒತ್ತಿದರೆ ಅ ಪದ ಕನ್ನಡಕ್ಕೆ ಲಿಪ್ಯಂತರಗೊಳ್ಳುತ್ತದೆ. ಅಂದರೆ, ಪ್ರತಿ ಪದಗಳನ್ನು ಬರೆದತಕ್ಷಣ space-bar ಒತ್ತಬೇಕು.
ರಾಜಾರಾಮ್
2011/7/31 Rajaram <cava...@gmail.com>

Uma Venkatesh

unread,
Jul 30, 2011, 6:39:53 PM7/30/11
to bhava-...@googlegroups.com
ಧನ್ಯವಾದಗಳು ರಾಜಾರಾಮ್ .

ಉಮಾ ವೆಂಕಟೇಶ್.

2011/7/30 Rajaram Cavale <cava...@gmail.com>



--
uma.v

Annapoorna Anand

unread,
Aug 1, 2011, 4:01:06 AM8/1/11
to bhava-...@googlegroups.com
ತರಾಸು. ಅವರ ನಾಗರಹಾವು ಅತ್ಯದ್ಭುತವಾದ ಕಾದಂಬರಿ. ನಾಗರಹಾವು, ಎರಡು ಹೆಣ್ಣು- ಒಂದು ಗಂಡು ಮತ್ತು ಸರ್ಪಮತ್ಸರ ಎಂಬ ಮೂರು ಭಾಗಗಳಲ್ಲಿ ತರಾಸು ಈ ಕಥೆಯನ್ನ ಬರೆದಿದ್ದಾರೆ. ನಾಗರಹಾವು ಎಂದ ತಕ್ಷಣ ನನಗೆ ಧುತ್ತೆಂದು ಕಣ್ಣ ಮುಂದೆ ಬಂದು ನಿಲ್ಲುವ ಎರಡು ಪಾತ್ರಗಳೆಂದರೆ ರಾಮಾಚಾರಿ ಮತ್ತು ಚಾಮಯ್ಯ ಮೇಷ್ತ್ರು. ನಾಗರಹಾವಿನಂಥಹ ರಾಮಾಚಾರಿಗೆ ಚಾಮ್ಮಯ್ಯ ಮೇಷ್ತ್ರಂಥಹ ಹಾವಾಡಿಗನೇ ಸರಿ! ಮೊಂಡತನ, ಭಂಡತನ ಮತ್ತು ತನ್ನ ಮೂಗಿನ ನೇರಕ್ಕೇ ನಡೆಯಬೇಕೆಂಬ ಛಲವಂತ ರಾಮಚಾರಿ, ಪುಂಗಿಯ ನಾದಕ್ಕೆ ಆಡುವ ಹಾವಿನಂತಾಗುತ್ತಿದ್ದುದು ಚಾಮಯ್ಯನವರಿಗೆ ಮಾತ್ರ! ಉಕ್ಕಿನ ಮನಸ್ಸಿನ ರಾಮಾಚಾರಿಗೆ ಮ್ರುದುವಾದ ಮಧುರವಾದ ಹೂ ಮನಸ್ಸಿರುವುದನ್ನು ಗುರುತಿಸಿದ್ದು ಅವರೊಬ್ಬರೆ! ಒಬ್ಬ ಮೇಷ್ತ್ರಿಗೆ ಒಬ್ಬ ಶಿಷ್ಯಕೊಡುವ ಅತ್ತ್ಯುನ್ನತ ಸ್ಥಾನವನ್ನ ಕೊಟ್ಟಿದ್ದ ರಾಮಾಚಾರಿ. ಆ ಗುರು ಶಿಷ್ಯರ ಸಂಭಂಧ, ಭಾಂಧವ್ಯ ವನ್ನ ಅದ್ಭುತವಾಗಿ ಚಿತ್ರಿಸಿದ್ದಾರೆ ತರಾಸು. ಇತರ ಪಾತ್ರಗಲಾದ ಅಲಮೇಲು. ಜಲೀಲ್, ಅಯ್ಯಂಗಾರಿ, ಮಾರ್ಗರೇಟ್, ತಂದೆ ತಾಯಂದಿರು, ಮಂಡಿಯ ಯಜಮಾನ ಇವರೆಲ್ಲ ಕಥೆಗೆ ಪೂರಕವಾದ ಪಾತ್ರಗಳೇ.
ಇದನ್ನ ಚಲನಚಿತ್ರವಾಗಿ ರೂಪಿಸಿ ಪುಟ್ಟಣ್ಣನವರು ಈ ಎರಡು ಪಾತ್ರಗಳನ್ನ ಚಿರಾಯುಗೊಳಿಸಿದರೆಂದರೆ ಅತಿಶಯೋಕ್ತಿಯಲ್ಲ. ವಿಷ್ಣುವರ್ಧನ್ ಮತ್ತು ಕೆ.ಎಸ್.ಅಶ್ವಥ್ ಈ ಪಾತ್ರಗಳಿಗೆ ಜೇವ ತುಂಬಿ ಕನ್ನಡಿಗರ ಹ್ರುದಯದಲ್ಲಿ ನಿರಂತರ ನಿಲ್ಲುವಂತೆ ಮಾಡಿದ್ದಾರೆ. ಹಾವಿನ ದ್ವೇಷ, ಕರ್ಪೂರದಾ ಗೊಂಬೆ, ಕನ್ನಡನಾಡಿನ ವೀರ ರಮಣಿ, ಬಾರೆ ಬಾರೆ - ಹಾಡುಗಳೆಲ್ಲ ಈಗಲೂ ಕಿವಿಯಲ್ಲಿ ಗುಂಜಿಸುವುದಕ್ಕೆ ಪುಟ್ಟಣ್ಣ ನವರ ಕುಶಲತೆಯೇ ಕಾರಣ.
hats off to
ತರಾಸು & ಪುಟ್ಟಣ್ಣ
Reply all
Reply to author
Forward
0 new messages