| | The constitutional role of the Governor is facing its most intense scrutiny in decades. The central question is whether the Governor remains a neutral constitutional bridge between the Union and the States -- or has become a roadblock to elected governments. Several States have approached the Supreme Court challenging the manner in which Governors are discharging their constitutional functions. For example, the Tamil Nadu and Kerala governments have approached the Court citing delays in assent to bills. The Karnataka government has raised concerns over the Governor's two-line speech in the joint session of the State Assembly. Recent Supreme Court verdicts in this regard have sharpened the debate on the role and accountability of the office. The Kurien Joseph Committee on Union–State relations, set up by the Tamil Nadu Government, has submitted the first part of its report. The recommendations of the report have reignited debates on the balance of power between the Centre and the States, the scope of the Governor’s discretion, and the need for stronger safeguards to protect State autonomy.
What does accountability look like for constitutional offices? Join us as we discuss the powers of the Governor’s office and recent court judgments on this matter. |
|
|
|  |
|  | ಇತ್ತೀಚಿನ ದಿನಗಳಲ್ಲಿ ರಾಜ್ಯಪಾಲರ ಸಂವಿಧಾನಾತ್ಮಕ ಪಾತ್ರವು ತೀವ್ರ ಪರಿಶೀಲನೆಗೆ ಒಳಗಾಗಿದೆ. ರಾಜ್ಯಪಾಲರು ಒಕ್ಕೂಟ ಮತ್ತು ರಾಜ್ಯಗಳ ಸರ್ಕಾರಗಳ ನಡುವೆ ತಟಸ್ಥ ಸೇತುವೆಯಾಗಿ ಕೆಲಸ ಮಾಡುತ್ತಿದ್ದಾರೋ , ಅಥವಾ ರಾಜ್ಯ ಸರ್ಕಾರಗಳಿಗೆ ಅಡ್ಡಿಯಾಗುತ್ತಿದ್ದಾರೋ ಎಂಬುದು ಮುಖ್ಯ ಪ್ರಶ್ನೆ. ಹಲವು ರಾಜ್ಯಗಳು, ರಾಜ್ಯಪಾಲರು ತಮ್ಮ ಸಂವಿಧಾನಾತ್ಮಕ ಕರ್ತವ್ಯಗಳನ್ನು ನಿರ್ವಹಿಸುತ್ತಿರುವ ರೀತಿಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟಿನ ಮೆಟ್ಟಲೇರಿವೆ. ಉದಾಹರಣೆಗೆ, ತಮಿಳುನಾಡು ಮತ್ತು ಕೇರಳ ಸರ್ಕಾರಗಳು ವಿಧೇಯಕಗಳಿಗೆ ಅನುಮೋದನೆ ನೀಡುವಲ್ಲಿ ಉಂಟಾದ ವಿಳಂಬವನ್ನು ಉಲ್ಲೇಖಿಸಿ ನ್ಯಾಯಾಲಯದಲ್ಲಿ ಅರ್ಜಿ ಹಾಕಿವೆ ಕರ್ನಾಟಕ ಸರ್ಕಾರವು ರಾಜ್ಯ ವಿಧಾನಸಭೆಯ ಸಂಯುಕ್ತ ಅಧಿವೇಶನದಲ್ಲಿ ರಾಜ್ಯಪಾಲರು ಹೊರನಡೆದ ನಿರ್ಧಾರ ಕುರಿತು ನಿರಾಶೆಯನ್ನು ವ್ಯಕ್ತಪಡಿಸಿದೆ. ಈ ವಿಷಯದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪುಗಳು ರಾಜ್ಯಪಾಲರ ಪಾತ್ರ ಮತ್ತು ಜವಾಬ್ದಾರಿಯ ಬಗ್ಗೆ ಚರ್ಚೆಯನ್ನು ಇನ್ನಷ್ಟು ಹೆಚ್ಚಿಸಿವೆ. ಅದೇ ಸಮಯದಲ್ಲಿ ತಮಿಳುನಾಡು ಸರ್ಕಾರ ರಚಿಸಿದ ಒಕ್ಕೂಟ-ರಾಜ್ಯ ಸಂಬಂಧಗಳ ಕುರಿತ ಕುರಿಯನ್ ಜೋಸೆಫ್ ಸಮಿತಿ ತನ್ನ ವರದಿಯ ಮೊದಲ ಭಾಗವನ್ನು ಸಲ್ಲಿಸಿದೆ. ಈ ವರದಿ ಒಕ್ಕೂಟ ಮತ್ತು ರಾಜ್ಯ ಸರ್ಕಾರಗಳ ನಡುವೆ ಅಧಿಕಾರ ಹಂಚಿಕೆ, ರಾಜ್ಯಪಾಲರ ವಿವೇಚನಾಧಿಕಾರದ ವ್ಯಾಪ್ತಿ ಹಾಗೂ ರಾಜ್ಯಗಳ ಸ್ವಾಯತ್ತತೆಯನ್ನು ರಕ್ಷಿಸಲು ಅಗತ್ಯವಾದ ಕ್ರಮಗಳ ಬಗ್ಗೆ ಚರ್ಚೆಯನ್ನು ಪ್ರಾರಂಭಿಸಿದೆ.
ಈ ಹಿನ್ನೆಲೆಯಲ್ಲಿ, ಸಂವಿಧಾನಾತ್ಮಕ ಹುದ್ದೆಗಳಿಗೆ ಹೊಣೆಗಾರಿಕೆ ಎಂದರೇನು? ರಾಜ್ಯಪಾಲರ ಪಾತ್ರವೇನು ಮತ್ತು ಇದರ ಬಗ್ಗೆ ನ್ಯಾಯಾಲಯದ ಇತ್ತೀಚಿನ ತೀರ್ಪುಗಳ ಬಗ್ಗೆ ಚರ್ಚಿಸುತ್ತೇವೆ. ಬನ್ನಿ, ನಮ್ಮೊಂದಿಗೆ ಸೇರಿಕೊಳ್ಳಿ! |
|
Speakers: Dr. Arun K Thiruvengadam, Professor of Law, NLSIU
Pranav Verma, Assistant Professor of Law, NLSIU ಭಾಷಣಕಾರರು: ಡಾ. ಅರುಣ್ ಕೆ. ತಿರುವೆಂಗಡಂ, ಕಾನೂನು ಪ್ರಾಧ್ಯಾಪಕರು, NLSIU
ಪ್ರಣವ್ ವರ್ಮಾ, ಸಹಾಯಕ ಕಾನೂನು ಪ್ರಾಧ್ಯಾಪಕರು, NLSIU |
|
|
Venue: Alternative Law Forum, 122/4, Infantry Road, Bangalore - 560001 (Near Shivajinagar Bus Station)
ಸ್ಥಳ: ಪರ್ಯಾಯ ಕಾನೂನು ವೇದಿಕೆ, #122/4, ಇನ್‌ಫೆಂಟ್ರಿ ರಸ್ತೆ, ಬೆಂಗಳೂರು 560001
For more information get in touch: Phone: 080-22865757 Email: con...@altlawforum.org
|
|
|
| |
|