|
'ಪೀಪಲ್ಸ್’ ಲಾ ಡೆಸ್ಕ್' ಎನ್ನುವುದು ALFನ ವ್ಯಾಪಕ ಕಾನೂನು ನೆರವು ಮತ್ತು ಸಮುದಾಯ ಸಲಹಾ ಕಾರ್ಯಕ್ರಮವಾಗಿದ್ದು, ಇದರ ಮೂಲಕ ನಾವು ವಿವಿಧ ಸಾಮಾಜಿಕ ಹಾಗೂ ಆರ್ಥಿಕವಾಗಿ ಅಂಚಿನಲ್ಲಿರುವ ಸಮುದಾಯಗಳಿಗೆ ಉಚಿತ ಕಾನೂನು ಸಲಹೆ ಒದಗಿಸುತ್ತೇವೆ.
ಇದರ ಭಾಗವಾಗಿ ಮತ್ತು ಟ್ರಾನ್ಸ್‌ಜೆಂಡರ್ ತಿದ್ದುಪಡಿ ಕಾಯ್ದೆ, 2026ರ ಹಿನ್ನೆಲೆಯಲ್ಲಿ, ALF, ಟ್ರಾನ್ಸ್‌ಜೆಂಡರ್ ಸಮುದಾಯಕ್ಕಾಗಿ ವಿಶೇಷ ಕಾನೂನು ನೆರವು ಶಿಬಿರವನ್ನು ಆಯೋಜಿಸುತ್ತಿದೆ.
ದಿನಾಂಕ: ಶನಿವಾರ - ಮೇ 30, 2026
ಸ್ಥಳ: ಪರ್ಯಾಯ ಕಾನೂನು ವೇದಿಕೆ (Alternative Law Forum), ಇನ್ಫ್ಯಾಂಟ್ರಿ ರಸ್ತೆ, ಬೆಂಗಳೂರು
ಈ ಶಿಬಿರದ ಉದ್ದೇಶ, ಹೊಸ ಕಾಯ್ದೆಯಿಂದ ಉದ್ಭವವಾಗುವ ಕಾನೂನು ಸಂಬಂಧಿತ ಪ್ರಶ್ನೆಗಳು ಮತ್ತು ಟ್ರಾನ್ಸ್‌ಜೆಂಡರ್ ವ್ಯಕ್ತಿಗಳ ಜೀವನ ಹಾಗೂ ಹಕ್ಕುಗಳಿಗೆ ಪರಿಣಾಮ ಬೀರುವ ಇತರೆ ವಿಷಯಗಳ ಬಗ್ಗೆ ಚರ್ಚಿಸಲು ಸುರಕ್ಷಿತ ಮತ್ತು ಬೆಂಬಲಾತ್ಮಕ ವಾತಾವರಣವನ್ನು ಸೃಷ್ಟಿಸುವುದಾಗಿದೆ.
ಸಲಹೆ ಪಡೆಯಬಹುದಾದ ವಿಷಯಗಳು ಇವುಗಳನ್ನು ಒಳಗೊಂಡಿರಬಹುದು:
- ಟ್ರಾನ್ಸ್‌ಜೆಂಡರ್ ತಿದ್ದುಪಡಿ ಕಾಯ್ದೆ, 2026 ಅನ್ನು ಅರ್ಥಮಾಡಿಕೊಳ್ಳುವುದು
- ಪರಿವರ್ತನೆ ಚಿಕಿತ್ಸೆಯ (Conversion Therapy) ಹಾಗೂ ಕುಟುಂಬ ಹಿಂಸಾಚಾರದ ಕುರಿತ ಆತಂಕಗಳು
- ಶಿಕ್ಷಣ ಮತ್ತು ಮೀಸಲಾತಿಯ ಮೇಲೆ ಈ ಕಾಯ್ದೆಯ ಪರಿಣಾಮಗಳು
- ಉದ್ಯೋಗ ಮತ್ತು ಕೆಲಸದ ಸ್ಥಳದಲ್ಲಿನ ಭೇದಭಾವ
- ಆರೋಗ್ಯ ಸೇವೆಗಳ ಲಭ್ಯತೆ, ಹಾರ್ಮೋನ್ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆಗಳು
- ವಸತಿ ಭೇದಭಾವ ಮತ್ತು ಟ್ರಾನ್ಸ್ ಸಮುದಾಯದ ವಾಸ ವ್ಯವಸ್ಥೆಗಳನ್ನು ಗುರಿಯಾಗಿಸುವುದು
- ಟಿಜಿ ಕಾರ್ಡ್‌ಗಳು, ಬಾಕಿ ಇರುವ ಅರ್ಜಿಗಳು ಮತ್ತು ದಾಖಲೆಗಳಿಗೆ ಸಂಬಂಧಿಸಿದ ಸಮಸ್ಯೆಗಳು
- ಹೆಸರು ಮತ್ತು ಲಿಂಗ ಬದಲಾವಣೆಯ ವಿಧಾನಗಳು
ಸಲಹಾ ಪ್ರಕ್ರಿಯೆಯನ್ನು ಸುಗಮಗೊಳಿಸಲು ದಯವಿಟ್ಟು ಈ ಫಾರ್ಮ್ ಅನ್ನು ಭರ್ತಿ ಮಾಡಿ. ನೀವು ಹಂಚಿಕೊಳ್ಳುವ ಎಲ್ಲಾ ಮಾಹಿತಿಯನ್ನು ಗೌಪ್ಯವಾಗಿರಿಸಲಾಗುತ್ತದೆ.
|