Dear all,
The Alternative Law Forum, Bangalore is inviting applications for the role of Project Coordinator based in Bangalore. Please find the details below:

Call for applications: Project Coordinator
Alternative Law Forum (ALF) invites applications for the role of Project Coordinator based in Bangalore. The role involves litigation, building legal capacity & working with grassroots communities to strengthen access to justice in two districts of Karnataka.
Location: Bangalore
Responsibilities:
- Litigation in matters pertaining to caste based discrimination and other human rights matters
- Supervision and guidance of litigation fellows
- Curriculum Development & preparation of materials for workshops and trainings
- Conduct workshops for different groups on laws pertaining to constitutional rights, caste discrimination and land rights.
- Work with district teams in Tumkur and Chikmagalur to address cases relating to caste-based discrimination and land issues (PoA Act, PTCL Act etc).
- Overall coordination with the district teams in Tumkur and Chikmagalur
Apply now!
ಅರ್ಜಿಗಳಿಗೆ ಆಹ್ವಾನಆಲ್ಟರ್ನೇಟಿವ್ ಲಾ ಫೋರಮ್ (ALF) ಸಂಸ್ಥೆಯ ಬೆಂಗಳೂರು ಕಚೇರಿಯನ್ನು ಕೇಂದ್ರವಾಗಿಸಿಕೊಂಡು ಕಾರ್ಯನಿರ್ವಹಿಸುವ ಯೋಜನಾ ಸಂಯೋಜಕ (Project Co-ordinator) ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಿದೆ. ಹುದ್ದೆಯ ಭಾಗವಾಗಿ ಕರ್ನಾಟಕದ ಎರಡು ಜಿಲ್ಲೆಗಳಲ್ಲಿ ಸಾಮಾಜಿಕ ನ್ಯಾಯ ಆಧರಿಸಿ ವಕೀಲಿಕೆ, ಕಾನೂನು ಅರಿವು ಕಾರ್ಯಕ್ರಮಗಳು ಮತ್ತು ತಳಮಟ್ಟದ ಸಮುದಾಯಗಳೊಂದಿಗೆ ಕೆಲಸ ಮಾಡಿ ಅವರಿಗೆ ಸುಲಭವಾಗಿ ನ್ಯಾಯ ದೊರಕುವಂತೆ ಕಾರ್ಯಗಳನ್ನು ನಿರ್ವಹಿಸ ಬೇಕಿದೆ.
ಸ್ಥಳ: ಬೆಂಗಳೂರು
ಅರ್ಜಿ ಸಲ್ಲಿಸಲು ಲಿಂಕ್: https://forms.gle/igsuQhmJmr28LWGK7
ಜವಾಬ್ದಾರಿಗಳು: - ಜಾತಿ ತಾರತಮ್ಯ ಮತ್ತು ಇನ್ನಿತರ ಮಾನವ ಹಕ್ಕುಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ನ್ಯಾಯಾಲಯದಲ್ಲಿ ನಡೆಸುವುದು.
- ಲಿಟಿಗೇಷನ್ ಫೆಲೋಗಳ ಜೊತೆ ಕೆಲಸ ಮಾಡಿ ಅವರಿಗೆ ಸೂಕ್ತ ಸಲಹೆ ಮತ್ತು ಮಾರ್ಗದರ್ಶನವನ್ನು ನೀಡುವುದು.
- ಕಾನೂನು ತರಬೇತಿಗಳಿಗಾಗಿ ಪಠ್ಯಕ್ರಮ (Curriculum) ತಯಾರಿಸುವುದು.
- ಸಂವಿಧಾನಿಕ ಹಕ್ಕುಗಳು, ಜಾತಿ ಆಧಾರಿತ ತಾರತಮ್ಯ ಮತ್ತು ಭೂ ಹಕ್ಕುಗಳಿಗೆ ಸಂಬಂಧಿಸಿದ ಕಾನೂನುಗಳ ಕುರಿತು ವಿವಿಧ ಗುಂಪುಗಳಿಗೆ ಕಾರ್ಯಾಗಾರಗಳನ್ನು ನಡೆಸುವುದು.
- ತುಮಕೂರು ಮತ್ತು ಚಿಕ್ಕಮಗಳೂರು ಜಿಲ್ಲೆಯ ತಂಡಗಳೊಂದಿಗೆ ಕಾರ್ಯನಿರ್ವಹಿಸಿ, ಜಾತಿ ಆಧಾರಿತ ತಾರತಮ್ಯ ಮತ್ತು ಭೂ ಸಂಬಂಧಿತ ಪ್ರಕರಣಗಳನ್ನು (PoA Act, PTCL Act ಇತ್ಯಾದಿ) ನ್ಯಾಯಾಲಯದಲ್ಲಿ ನಡೆಸುವುದು.
- ತುಮಕೂರು ಮತ್ತು ಚಿಕ್ಕಮಗಳೂರು ಜಿಲ್ಲೆಯ ತಂಡಗಳೊಂದಿಗೆ ಒಟ್ಟಾರೆ ಸಮನ್ವಯ (Coordination) ಸಾಧಿಸುವುದು.
ನಿಮ್ಮ ಅರ್ಜಿಗಳನ್ನು ಸಲ್ಲಿಸಿ!
Please do consider passing it on to those interested!
Warmly,
Poorna