(Scroll Down for English text)
ಕಾರ್ಯಗಾರದ ಅಪ್ಡೇಟ್
ಸಾಹಿತ್ಯ ಅಂದ್ರೆ ಅದು ಬರಿ ಅಕ್ಷರಗಳಲ್ಲ, ಒಂದು ಸಮಾಜ ತನ್ನ ಬಗ್ಗೆ ತಾನು ಗಟ್ಟಿಯಾಗಿ ಆಲೋಚನೆ ಮಾಡುವ ರೀತಿ. ಹಳೇಗನ್ನಡದಿಂದ ಹಿಡಿದು ಜನಪದ, ವಚನಗಳು ಮತ್ತು ಇವತ್ತಿನ ಬರಹಗಳವರೆಗೆ ಎಲ್ಲವೂ ಅಸಮಾನತೆಯನ್ನು ಪ್ರಶ್ನಿಸಿವೆ, ಶ್ರೇಣೀಕೃತ ವ್ಯವಸ್ಥೆಗೆ ಸವಾಲು ಹಾಕಿವೆ ಮತ್ತು ಪ್ರತಿಯೊಬ್ಬರ 'ಗೌರವ'ಕ್ಕಾಗಿ ಧ್ವನಿ ಎತ್ತಿವೆ.
ಕನ್ನಡ ಸಾಹಿತ್ಯ ಮತ್ತು ನಮ್ಮ ಸಂವಿಧಾನದ ಮೌಲ್ಯಗಳಿಗೂ ಇರುವ ನಂಟೇನು? ಇವು ಇವತ್ತಿನ ನಮ್ಮ ಬದುಕಿಗೆ ಹೇಗೆ ಮುಖ್ಯ?
ಈ ಬಗ್ಗೆ ಚರ್ಚಿಸಲು ದು. ಸರಸ್ವತಿ ಅವರ ಜೊತೆ ಮೇ 9 ಮತ್ತು 10, 2026 ರಂದು ನಡೆಯಲಿರುವ ಈ ಎರಡು ದಿನಗಳ ಕಾರ್ಯಾಗಾರಕ್ಕೆ ಬನ್ನಿ. ಸಮಾನತೆ, ನ್ಯಾಯ ಮತ್ತು ಘನತೆಯ ಬಗ್ಗೆ ಸಾಹಿತ್ಯದಲ್ಲಿರುವ ವಿಚಾರಗಳು ಸಂವಿಧಾನದ ಮೂಲಕ ನಮ್ಮ ಬದುಕಿಗೆ ಹೇಗೆ ಕೊಂಡಿ ಬೆಸೆಯುತ್ತವೆ ಅನ್ನೋದನ್ನ ನಾವಿಲ್ಲಿ ಹರಟೆ ಹೊಡೆಯುತ್ತಾ, ಚರ್ಚಿಸುತ್ತಾ ಅರಿಯೋಣ.
ಸೀಮಿತ ಸೀಟುಗಳು ಮಾತ್ರ ಇವೆ. ತಕ್ಷಣವೇ ರಿಜಿಸ್ಟರ್ ಮಾಡಿಕೊಳ್ಳಲು ಇಲ್ಲಿಗೆ ಕರೆ ಮಾಡಿ:
9482851745 /
9008627944
ಸ್ಥಳ: ಪರ್ಯಾಯ ಕಾನೂನು ವೇದಿಕೆ, ಬೆಂಗಳೂರು
WORKSHOP ALERTLiterature is where a society thinks out loud and where its core values take shape. From ancient Kannada literature to Janapadas, Vachanas, and modern writings, all of them represent a culture that has questioned inequality, challenged hierarchy, and argued for dignity.
Join us for a two day workshop with
Du. Saraswathi on 9th and 10th May 2026, as we explore the relationship between Kannada literature and constitutional values and what it means for our lives today. We will follow this thread of ideas around equality, dignity, and justice into the Constitution and back into our lives, tracing how these ideas move between text, society, and lived experience.
Limited spots. Call us on
9482851745 /
9008627944 to register now!
Venue: Alternative Law Forum, Bangalore
Please do pass this on in your circles!
Warmly,
Poorna