This is an extract from the article "Mahatma Gandhi - The last phase"
written by Gandhiji's secretary Pyarelal which appeared in Kasturi -
Feb2014. I was particularly drawn to Gandhiji's view on health source:
ವರ್ಷಗಳುರಿಳಿದಂತೆ ಗಾಂಧೀಜಿಯವರು ತಮ್ಮ ಮತ್ತು ಇತರರ ಎಲ್ಲ ರೋಗ ಪರಿಹಾರಕ್ಕೆ ರಾಮನಾಮವೇ ದಿವ್ಯೌಷದಿ ಎಂದು
ನಂಬತೊಡಗಿದ್ದರು. ಮೊನ್ನೆ ಮೊನ್ನೆ ಉಪವಾಸ ಕಾಲದಲ್ಲಿ ವಿಜ್ಞಾನದ ಪರಿಮಿತಿಯ ಬಗ್ಗೆ ನೆಡೆದ ವಾದ ವಿವಾದವನ್ನು
ಅವರು "ಹಾಗಾದರೆ ಗೀತೆಯಲ್ಲಿ ಹೇಳಿರುವಂತೆ ಇಡೀ ಸೃಷ್ಟಿಗೆ ಆಧಾರವಾಗಿರುವ ತತ್ವ 'ಏಕಾಂಶೇನ ಸ್ಥಿತೋ ಜಗತ್'
ಎಂಬುದರ ಅರ್ಥವೇನು?" ಎಂದು ಕೇಳಿ ಮುಗಿಸಿ ಬಿಟ್ಟಿದ್ದರು.
... ಮೂತ್ರಪಿಂಡದ ಹಾನಿ ಅಂತಶಃ ಕಲ್ಕತ್ತೆಯ ಉಪವಾಸದ ಪರಿಣಾಮವಾಗಿತ್ತು. ಆದರೆ ಗಾಂಧೀಜಿ ಇಂಥ
ಅನುಭವಗಳನ್ನು ದಕ್ಕಿಸಿಕೊಂಡು ವೈದ್ಯಶಾಸ್ತ್ರದ ಪುಸ್ತಕೀಯ ಸಿದ್ದಾಂತಗಳನ್ನು ಸಾಕಷ್ಟು ಸಲ ಬುಡಮೇಲು
ಮಾಡಿದವರಾಗಿದ್ದರು. ಅವರ ಆತ್ಮಸಂಯಮ ಮಿತಜೀವನ ನಿಯಮಿತತನ ಅನಾಸಕ್ತಿ ಮತ್ತು ಸಮಚಿತ್ತಗಳಿಂದ ಅವರ
ದೇಹದಲ್ಲಿ ತನಗೆತಾನೆ ಚೇತರಿಸಿಕೊಳುವ ಶಕ್ತಿ ಇನ್ನೂ ವಿಪುಲವಾಗಿತ್ತು. ದೇಹದ ಬೇರೆ ಬೇರೆ ಅವಯವಗಳು
ಪರಿಪೂರ್ಣ ರೀತಿಯಲ್ಲಿ ಕೆಲಸ ಮಾಡುತಿದ್ದವು...