ಸರ್ಕಾರಿ ಶಾಲೆಗಳ ಬಗ್ಗೆ

18 views
Skip to first unread message

Girish T P

unread,
Sep 2, 2016, 2:03:19 AM9/2/16
to engli...@googlegroups.com

ನಮಸ್ತೆ***

1. ಸರ್ಕಾರಿ ನೌಕರರು
( ವಿಶೇಷವಾಗಿ ಸರ್ಕಾರಿ ಶಾಲೆಗಳಲ್ಲಿನ ಶಿಕ್ಷಕರು & ಶಿಕ್ಷಣ ಇಲಾಖೆಯಲ್ಲಿನ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು) ತಮ್ಮ ಸ್ವಂತ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸದಿರಲು ಕಾರಣಗಳೇನು ??

2. ಇತರ ಯಾವುದೇ ವಿಧದ ಪೋಷಕರು ತಾವು ವಾಸಿಸುವ ಸಮೀಪದಲ್ಲೇ ಇರುವ ಸರ್ಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ದಾಖಲಿಸದೇ ಖಾಸಗಿ ಶಾಲೆಗಳಿಗೆ ಸೇರಿಸಲು ಕಾರಣಗಳೇನು ?

3. ಒಟ್ಟಾರೆಯಾಗಿ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಪ್ರಮಾಣ ಕುಸಿಯುತ್ತಿದ್ದು, ಬಹುತೇಕ ಪೋಷಕರು‌ ಒಲವು  ಖಾಸಗಿ ಶಾಲೆಗಳತ್ತ ಮೂಡುತ್ತಿದೆ. ಇದಕ್ಕೆ ನೈಜ ಕಾರಣಗಳೇನಿರಬಹುದು ?
   ~~~~~~~~~~~~~~~~~~
* ಖಾಸಗೀ ಶಾಲೆಗಳಲ್ಲಿ ಸರ್ಕಾರಿ ಶಾಲೆಗಳಿಗಿಂತ‌ ಗುಣಾತ್ಮಕತೆಯ ಮಟ್ಟ ಹೆಚ್ಚು ಅಂತಾ ಹೇಳುವುದು‌ ತೀರಾ ಸಮಾನ್ಯವಾದ ಹೇಳಿಕೆ.
(ಇದರ ಬಗ್ಗೆ ವಿಸ್ತೃತವಾಗಿ ಚರ್ಚಿಸಬೇಕು)
* ಖಾಸಗಿ ಶಾಲೆಗಳ‌ ಆಂಗ್ಲ ಮಾಧ್ಯಮದ ಶಿಕ್ಷಣವೇ ?

ಚರ್ಚೆಯಲ್ಲಿ ಪಾಲ್ಗೊಳ್ಳಿರಿ.
~~~~~~~~~~~~~~~~~~~~
** ಶಿಕ್ಷಕರು ಮತ್ತು ಉಪನ್ಯಾಸಕರಾಗ ಬಯಸುವವರು ಮೊದಲ ಆದ್ಯತೆ‌ಯಾಗಿ ಸರ್ಕಾರಿ ಶಾಲೆಗಳಿಗೆ ಮತ್ತು ಕಾಲೇಜುಗಳಿಗೆ‌ ಅರ್ಜಿ ಹಾಕುತ್ತಾರೆ.
(ಸರ್ಕಾರಿ ಶಾಲೆಗಳಲ್ಲಿ ಸಮಾಜ‌ದ ಅತ್ಯಂತ ಕೆಳ ಸ್ತರದಲ್ಲಿರುವವರ ಮಕ್ಕಳು ಕಲಿಯುತ್ತಿದ್ದಾರೆ)

*** ಸರ್ಕಾರಿ ಶಾಲೆ ಮತ್ತು ಕಾಲೇಜುಗಳಲ್ಲಿ‌ ಉದ್ಯೋಗ ದೊರೆಯದೇ ಇರುವವರು ಖಾಸಗೀ ಅನುದಾನಿತ ಸಂಸ್ಥೆಗಳಿಗೆ ಅರ್ಜಿ ಹಾಕುತ್ತಾರೆ.
(ಇಲ್ಲಿ ಸಮಾನ್ಯವಾಗಿ ಸಮಾಜದ ತೀರಾ ಬಡವರು ಅಲ್ಲದ ತೀರಾ ಶ್ರೀಮಂತರು ಅಲ್ಲದವರ ಮಕ್ಕಳು ಅಂದರೆ ಮಧ್ಯಮವರ್ಗದವರ ಮಕ್ಕಳು ಕಲಿಯುತ್ತಿದ್ದಾರೆ)

**** ಸರ್ಕಾರಿ ಶಿಕ್ಷಣ ಸಂಸ್ಥೆಗಳು ಮತ್ತು ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಉದ್ಯೋಗ ಪಡೆಯಲು ವಿಫಲರಾದವರು ಖಾಸಗೀ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳಿಗೆ ಅರ್ಜಿ ಹಾಕುತ್ತಾರೆ.(ಇದಕ್ಕೆ ಕೆಲ ಅಪವಾದಗಳು ಇರಬಹುದು)
{ಈ ರೀತಿಯ ಖಾಸಗಿ ಅನುದಾನರಹಿತ‌ ಶಿಕ್ಷಣ ಸಂಸ್ಥೆಗಳು ಸಮಾಜದ ಅತ್ಯಂತ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳೆಂದು ಗುರುತಿಸಿಕೊಂಡಿರುವ‌ ಶಾಲೆಗಳಲ್ಲಿ ಸಮಾಜದ ಮೇಲುಸ್ತರದಲ್ಲಿರುವ ಅತ್ಯಂತ ಸಿರಿವಂತರ, ಉನ್ನತ ಅಧಿಕಾರಿಗಳ, ಉದ್ಯಮಿಗಳ, ರಾಜಕಾರಣಿಗಳ, ಸೆಲೆಬ್ರಿಟಿಗಳ ಮಕ್ಕಳು ಕಲಿಯುತ್ತಿದ್ದಾರೆ.}

ಎಂಥಾ ವಿಪರ್ಯಾಸ ನೋಡಿ ಸರ್ಕಾರಿ ಮತ್ತು ಖಾಸಗೀ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿರುವ‌ ಉದ್ಯೋಗಸ್ಥರಿಗೆ ಉದ್ಯೋಗ ಭದ್ರತೆಯುಂಟು.

ಆದರೆ ಖಾಸಗಿ ಅನುದಾನರಹಿತ ಸಂಸ್ಥೆಯಲ್ಲಿರುವವರಿಗೆ ಉದ್ಯೋಗ ಭದ್ರತೆಯಿಲ್ಲ.
~~~~~~~~~~~~~~~~~~~~
ಕಾಲಹರಣಕ್ಕಾಗಿ ಇದನ್ನೇಲ್ಲಾ ಬರೆಯುತ್ತಿಲ್ಲಾ.
ಸರ್ಕಾರಿ ಶಾಲೆಯೊಂದರ ಮುಖ್ಯಸ್ಥನಾಗಿ ನನ್ನನ್ನು ನಾನು ಸಾಕಷ್ಟು ತಿದ್ದಿಕೊಳ್ಳಬೇಕಿದೆ ಅನ್ಸುತ್ತೆ.
75 ಮಕ್ಕಳಿರುವ ಸರ್ಕಾರಿ ಶಾಲೆಯೊಂದರಲ್ಲಿ ಪ್ರತಿ ಮಗುವಿಗೆ ಸರ್ಕಾರ ಮಾಡುವ ಖರ್ಚು(ಬಂಡವಾಳ) ಸರಾಸರಿ ಕನಿಷ್ಠವೆಂದರೂ 75,000.
(ಶಿಕ್ಷಕರ ಸಂಬಂಳ, ಬಿಸಿಯೂಟ ಮತ್ತೀತರ ಎಲ್ಲಾ ಅನುದಾನ ಸೇರಿದಂತೆ)

ಸರಕಾರಿ ಶಾಲೆಗಳ ಬಲವರ್ಧನೆಗಾಗಿ ರಚನಾತ್ಮಕ ಸಲಹೆಗಳನ್ನು ನೀಡುವುದರ ಮೂಲಕ ಸರ್ಕಾರಿ ಶಾಲೆಗಳ ಬಲವರ್ಧನೆಗಾಗಿ ಸಹಕರಿಸಿರಿ.

ತಪ್ಪಿದ್ದಲ್ಲಿ ಕ್ಷಮಿಸಿ.

-ಗಿರೀಶ ಟಿ.ಪಿ, ಶಿಕ್ಷಕರು
ಸರ್ಕಾರಿ ಪ್ರೌಢಶಾಲೆ, ಹಾದಿಕೆರೆ, ತರೀಕೆರೆ ತಾಲೂಕು.
ಚಿಕ್ಕಮಗಳೂರು ಜಿಲ್ಲೆ-577228

Pandurang Pujari

unread,
Sep 4, 2016, 3:04:56 AM9/4/16
to engli...@googlegroups.com
ಅರಗಿಸಿಕೊಳ್ಳಲಾಗದ ಸತ್ಯ ಸರ್...
--
EnglishSTF Link: https://groups.google.com/forum/#!forum/englishstf
 
--
 
*For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions
 
**Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
***If a teacher wants to join STF-read http://karnatakaeducation.org.in/KOER/en/index.php/Become_a_STF_groups_member
---
You received this message because you are subscribed to the Google Groups "EnglishSTF" group.
To unsubscribe from this group and stop receiving emails from it, send an email to englishstf+...@googlegroups.com.
To post to this group, send email to engli...@googlegroups.com.
Visit this group at https://groups.google.com/group/englishstf.
To view this discussion on the web, visit https://groups.google.com/d/msgid/englishstf/CAAcTnOXNr5QY6UL3uYJwoFetVaYMS7s0FOHO91TGTDTa51R_Og%40mail.gmail.com.
For more options, visit https://groups.google.com/d/optout.

shaheen banu

unread,
Sep 5, 2016, 6:37:15 AM9/5/16
to engli...@googlegroups.com
exactly its true.

To unsubscribe from this group and stop receiving emails from it, send an email to englishstf+unsubscribe@googlegroups.com.
--
EnglishSTF Link: https://groups.google.com/forum/#!forum/englishstf
 
--
 
*For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions
 
**Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
***If a teacher wants to join STF-read http://karnatakaeducation.org.in/KOER/en/index.php/Become_a_STF_groups_member
---
You received this message because you are subscribed to the Google Groups "EnglishSTF" group.
To unsubscribe from this group and stop receiving emails from it, send an email to englishstf+unsubscribe@googlegroups.com.

To post to this group, send email to engli...@googlegroups.com.
Visit this group at https://groups.google.com/group/englishstf.
Reply all
Reply to author
Forward
0 new messages