ಬ್ಯಾಂಕ್ ವ್ಯವಹಾರಗಳು - ಸ್ಪರ್ಧಾ ಉನ್ನತಿ - ಜುಲೈ ತಿಂಗಳ ಮೊದಲ ಸಂಚಿಕೆ -

63 views
Skip to first unread message

Ravi Aheri

unread,
Jul 1, 2014, 3:17:01 AM7/1/14
to socialsciencestf, englishstf
ಆತ್ಮೀಯರೇ,
ಜುಲೈ ತಿಂಗಳ ಸಂಚಿಕೆಯಲ್ಲಿ ಈ ಕೆಳಗಿನ ವಿಶೇಷತೆಗಳನ್ನು ಗಮನಿಸಲು ಈ ಕೆಳಗಿನ ಲಿಂಕ್ ಗಮನಿಸಿ.
* ಬ್ಯಾಂಕ್ ವ್ಯವಹಾರಗಳು.
* SMART TEACHING
* ರಸಪ್ರಶ್ನೆ
http://e-unnati.blogspot.in/?m=1

ಓದಿ ಅಭಿಪ್ರಾಯ ತಿಳಿಸಿ.
ನಿಮ್ಮ
--
RAVI AHERI
Arts Teacher
GOVT HIGH SCHOOL. KONANAKERI.
Tq SHIGGAON Dist HAVERI.
8147389347
http://raviaheri.blogspot.com
http://socialsciencecce.blogspot.com

Mahabaleshwar Bhagwat

unread,
Jul 1, 2014, 1:14:52 PM7/1/14
to engli...@googlegroups.com, socialsciencestf
Excellent Ravi sir, You are role model in stf. helps to us.
> --
> Please provide your full name, school name and address below your mail.
>
> Public Software for Public Institutions
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> Are you using pirated Khasagi Tantramsha? Adopt Sarvajanika Tantramsha. For
> Sarvajanika Tantramsha free download, visit
> http://public-software.in/FOSS-applications
> ---
> You received this message because you are subscribed to the Google Groups
> "englishstf" group.
> To unsubscribe from this group and stop receiving emails from it, send an
> email to englishstf+...@googlegroups.com.
> To post to this group, send email to engli...@googlegroups.com.
> Visit this group at http://groups.google.com/group/englishstf.
> For more options, visit https://groups.google.com/d/optout.
>


--

With regards

****MAHABALESHWAR C BHAGWAT *
ASSISTANT
MASTER
GHS KEDOOR
KUNDAPUR TALLUK bhag...@gmail.com
skype id:bhagwat18
Blog:bhagwatmc.blogspot.com,
School Blog:ghskedoor.blogspot.com
District Blog:socialscienceudupi.blogspot.com
Address,mahabaleshwarbhagwat.hpage.com<http://mahabaleshwarbhagwat.hpage.co
UDUPI DISTRICT.
9449912354


*"AN OUNCE OF PRACTICE IS WORTH MORE THAN TONS OF PREACHING". Mohandas
Karamchand Gandhi **

Mahabaleshwar Bhagwat

unread,
Jul 1, 2014, 1:17:48 PM7/1/14
to engli...@googlegroups.com, socialsciencestf
Excellent Ravi sir, you are role model in stf.
On 7/1/14, Ravi Aheri <ravi...@gmail.com> wrote:

Kumara Swamy

unread,
Jul 1, 2014, 1:55:50 PM7/1/14
to engli...@googlegroups.com
Dear Mr Aheri

I have been following your posts as well as other posts in this forum.  Congratulations for your involvement and the wonderful things you have put up in your blog.  It is helpful not only to your students but anyone who would like to learn something in that area.   Very nicely presented too.

I have one serious observation to make.  This is a general observation applicable to all.  It is just incidental that it starts here.

  Winning a competition or earning more marks is not the purpose of CCE.  Or,  to tell children that they will have to attend to classes regularly and complete all the tasks lest they end up losing marks  something that is really not the purpose of CCE.  In fact such a call defeats the very purpose of CCE.

CCE is to promote quality learning.  It aims at making the teacher as well as the taught reflect over their practices and bring changes.  Slowly the learner should move towards independent learning and the teacher should become a reflective practioner.  Pl ask yourself if our preoccupation with marks and ranks and the like would facilitate this.  They might learn one thousand things.   But they will never be able to arrive at the next thing.  

There is a state-wide or even nation wide misunderstanding of CCE.   In fact formative assessment is more meant for reflection than recording.  The focus here is to form learning.  Once we assess it(evidently passing judgment and not reflecting),  document it and consider it along with summative test marks,  it ceases to serve its basic purpose.  The formative assessment that we are doing now is just another form of summative test.  

Pl consider these ideas.  The mass media has already done lots of damage by publishing all sorts of news and comments on CCE, without even bothering to understand what it is.  Projecting scoring in FAs as ends in themselves really negates the very intent of CCE.   

I love to see all your postings and the kind of work you are doing. Meanwhile,  I am afraid you may not be able to get mileage as you expect from these activities,  not because your effort is less,  but because it is not based on a sound philosophy.

I am aware many will read this.  I would like to continue to dialogue on this issue because we are really not able to make the best of CCE for enhancing the quality of education that we provide.

Pl think.

Best regards

Dr Kumara Swamy H
Lecturer,  CTE, Mangalore



Ravi Aheri

unread,
Jul 2, 2014, 8:27:52 PM7/2/14
to englishstf, socialsciencestf, kumara...@gmail.com

ಮಾನ್ಯರೇ,

                            ತಮ್ಮ ಪ್ರತಿಕ್ರಿಯೆಗೆ ಮೊದಲು ನಾನು ಧನ್ಯವಾಗಳನ್ನು ತಿಳಿಸುವೆ, CCE ಕುರಿತಾದ ತಮ್ಮ ಸಲಹೆಗಳನ್ನು ಸ್ವೀಕರಿಸಿ ಅದರಂತೆ ತರಗತಿ ಕೋಣೆಯಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸುವೆ, ತರಬೇತಿಯಲ್ಲಿ CCE ಕುರಿತಾಗಿ ಸ್ಪಷ್ಟತೆ ಸಿಗದೇಯಿರುವದು ಈ ಗೊಂದಲಗಳಿಗೆ ಕಾರಣವಾಗಿದೆ, ನಾವು ತರಬೇತಿಯಲ್ಲಿ ತಿಳಿದಿರುವಹಾಗೆ ತರಗತಿ ಕೋಣೆಯಲ್ಲಿ ಅನುಕೂಲಕಾರನಾಗಿ..

·        ಚಟುವಟಿಕೆಯೊಂದಿಗೆ ಕಲಿಕೆಗೆ ವಾತಾರಣ ನಿರ್ಮಿಸುವದು ಪ್ರತಿ ಚಟುವಟಿಕೆಯ ದಾಖಲೀಕರಣ ಮಾಡಲೇಬೇಕು ಎಂಬುದು.

·        ವಿದ್ಯಾರ್ಥಿಗಳು ತಮ್ಮ ಜ್ಞಾನವನ್ನು ತಾವೇ ಕಟ್ಟಿಕೊಳ್ಳಲು ಜ್ಞಾನ ಸಾಮಾಗ್ರಿಗಳನ್ನು ಒದಗಿಸಿಕೊಡುವದು ಮತ್ತು ತಮ್ಮ ನಿತ್ಯ ಜೀವನದ ಜೋತೆಗೆ ಸಂಬಂಧೀಕರಿಸುವದು, ಅನುಕೂಲಕಾರ ಉಪನ್ಯಾಸ ಪದ್ದತಿಯಿಂದ ಸಂಪೂರ್ಣ ಹೊರತಾಗಿರಬೇಕು.

·       ವಿದ್ಯಾರ್ಥಿಗೆ ಅಂಕ ಗಳಿಕೆಗಾಗಿ ಈ ಚಟುವಟಿಕೆಗಳನ್ನು ಮಾಡಬೇಕು ಎಂಬ ಭಾವನೆ ಅವನಲ್ಲಿ ಇರಬಾರದು, ಅದರಿಂದ ಅವನ ಸಮಗ್ರ ವ್ಯಕ್ತಿತ್ವ ಮತ್ತು ಜೀವನ ಕಟ್ಟಿಕೊಳ್ಳುವಂತಿರಬೇಕು,

·        ಮಗು ಪರೀಕ್ಷೆಯ ಭಯದಿಂದ ಮತ್ತು ಕಂಠ ಪಾಠದಿಂದ ಮುಕ್ತವಾಗಿರಬೇಕು ತನ್ನ ಸಾಧನೆಯ ಬಗ್ಗೆ ಅಂಕಗಳ ರೂಪದಲ್ಲಿ ತಿಳಿಯದೇ ಶ್ರೇಣಿ ರೂಪದಲ್ಲಿ ತಿಳಿಯಬೇಕು.

·        ಪ್ರತಿ ಮಗುವಿನ ಸಾಧನೆ ಗಮನಿಸಿ ದಾಖಲಿಸಿ ಕೊರತೆ ಕಂಡುಬಂದ ಸಾಮರ್ಥ್ಯಗಳಿಗೆ ಹಿಮ್ಮಾಹಿತಿ ನೀಡಿ ಪೋಷಿಸುವದು.

·        ಒತ್ತಡ ಮುಕ್ತ ,ಭಯ ರಹಿತ, ಸ್ವತಂತ್ರ ಕಲಿಕೆ, ಇಲ್ಲಿ ಶಿಕ್ಷಕ ಕೇವಲ ಮಾರ್ಗದರ್ಶಕ ಎಂಬುವದು.

                                 ಈ ಅಂಶಗಳಿಂದ ಕೂಡಿದ ಕಲಿಕೆಯೇ CCE ಎಂದು ತಿಳಿದಿರುವೆ, ಆದರೆ ಗ್ರಾಮಾಂತರ ಪ್ರದೇಶದ ಮಕ್ಕಳಿಗೆ ನಾನು ಅನುಕೂಲಕಾರನಾಗಿ ಕೆಲವು ತೊಂದರೆಗಳನ್ನು ಅನುಭವಿಸಬೇಕಾಗಿದೆ. ಅವು-

·         ಕೆಲವು ವಿದ್ಯಾರ್ಥಿಗಳು ಅನಿಯಮಿತವಾಗಿ ಶಾಲೆಗೆ ಹಾಜರಾಗುತ್ತಿರುವದು,

·         ವಿದ್ಯಾರ್ಥಿಗಳ ಮನೆಯಲ್ಲಿ ಕಲಿಕಾ ವಾತಾವರಣ  ಇಲ್ಲದಿರುವುದು.

·        ಗ್ರಾಮಗಳಲ್ಲಿ ಮತ್ತು ಶಾಲೆಗಳಲ್ಲಿ  ಜ್ಞಾನ ರಚನಾ ಸಾಮಗ್ರಿಗಳ ಕೊರತೆ, ಗ್ರಂಥಾಲಯ, ಅಂತರ್ಜಾಲ, ಮತ್ತು ಇತರೆ ಪೂರಕ ಅಂಶಗಳು ಇಲ್ಲದಿರುವುದು.

·         ಪಾಲಕರ ಶಿಕ್ಷಣದ ಬಗೆಗಿನ ನಿರಾಸಕ್ತಿ.

·       ಪಾಲಕರ ದುಸ್ತರ ಆರ್ಥಿಕ ಪರಿಸ್ಥಿತಿ ಮತ್ತು ಮಕ್ಕಳಿಗೆ ಮೂಲಭೂತ   ಅವಶ್ಯಕ ವಸ್ತುಗಳ ಲಭ್ಯತೆ ಹಾಗೂ ಪ್ರೋತ್ಸಾಹದ ಕೊರತೆ.

·       ಆಯಾ ತರಗತಿಯ ವಿದ್ಯಾರ್ಥಿಗಳಿಗೆ ಕನಿಷ್ಠ ಸಾಮರ್ಥ್ಯಗಳ ಕೊರತೆ ಇರುವುದು, ಅನುಕೂಲಕಾರನಿಗೆ ಕಲಿಕಾ ಯೋಜನೆ ನಿರ್ಮಿಸುವಲ್ಲಿ ವಿಫಲನಾಗುತ್ತಿರುವುದು.

·       ತರಗತಿಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಆಧಿಕವಾಗಿರುವುದು, ಅವರ ವೈಯಕ್ತಿಕ ಸಾಧನೆಯ ದಾಖಲೆ ನಿರ್ವಹಣೆಗೆ ಸಮಯದ ಅಗತ್ಯತೆ ಇದೆ.

·       ಇವುಗಳ ಮಧ್ಯ ಶಾಲಾ ಆಡಳಿತದಲ್ಲಿನ ಲೋಪಗಳಿಂದಾಗಿ ಅನುಕೂಲಕಾರನಿಗೆ ಹಿನ್ನಡೆಯಾಗುತ್ತಿರುವದು.

              ಇವುಗಳಿಗೆ ಪರಿಹಾರ ಕಂಡುಕೊಳ್ಳಬೇಕಾಗಿದೆ. ಅಲ್ಲದೇ ಸದ್ಯದ ಎಸ್.ಎಸ್.ಎಲ್.ಸಿ. ಪರೀಕ್ಷೆಯ ರೂಪುರೇಷಗಳನ್ನು ಗಮನಿಸಿದರೆ, ಅಂಕ ಆಧಾರಿತ ಶ್ರೇಣಿಯುಕ್ತ ಫಲಿತಾಂಶ ಪ್ರಕಟಿಸುವ ಪದ್ಧತಿಯು, ಮಕ್ಕಳ ಬೌದ್ಧಿಕ ಸಾಮರ್ಥ್ಯ  ಹಾಗೂ ಅವರ ಮನೋಭಾವನೆ ಮೇಲೆ ಪರಿಣಾಮ ಬೀರುವಂತದ್ದು.  ಮತ್ತು ಪ್ರಸ್ತುತ ಶೈಕ್ಷಣಿಕ ಪದ್ಧತಿಯು ಪೋಷಕರಲ್ಲಿ ಗೊಂದಲವನ್ನು ಸೃಷ್ಠಿ ಮಾಡಿದೆ.

·         ಅಂಕಗಳು ಇಲ್ಲಿ ಪ್ರಧಾನವಾಗಿರುವದಿಲ್ಲ ಅನ್ನುವದಾದರೆ ವಿದ್ಯಾರ್ಥಿಗಳ ಪ್ರಗತಿ ಪತ್ರದಲ್ಲಿ ಅಂಕಗಳ ನಮೂದು ಬಿಟ್ಟು ಶ್ರೇಣಿಗಳನ್ನಷ್ಟೆ ನೀಡಬಹುದಾಗುತ್ತು.

·         ರೂಪನಾತ್ಮಾಕ ಮೌಲ್ಯಮಾಪನದಲ್ಲಿ  4 ಕಿರು ಪರೀಕ್ಷೆಗಳು ಒಳಗೊಂಡಿರುವದು ಅಂಕಗಳಿಗೆ ಹೆಚ್ಚು ಪ್ರಾಧಾನ್ಯತೆ ನೀಡಿರುವದು ಕಾಣುತ್ತದೆ.,

·         ಮತ್ತೂ ಒಂದು ವಿಚಾರ 8 ಮತ್ತು 9ನೇ ತರಗತಿಗಳಿಗೆ ಭಿನ್ನವಾದ ರೂಪಣಾತ್ಮಕ ಮೌಲ್ಯಮಾಪನ ವಿಧವಿದೆ ಇದು ವಿದ್ಯಾರ್ಥಿಗಳಲ್ಲಿ ,ಶಿಕ್ಷಕರಲ್ಲಿ ಹಾಗೂ ಪಾಲಕರಲ್ಲಿ ಗೊಂದಲ ಸೃಷ್ಟಿಯಾಗಿದೆ ಇದು ಮೊದಲು ನಿವಾರಿಸುವ, ಒಂದು ನಿರ್ಧಿಷ್ಟತೆಗೆ ಬರುವ ಅಗತ್ಯತೆ ಇದೆ.

         ಮಾನ್ಯರೇ, ನನ್ನ ಅಲ್ಪ ತಿಳುವಳಿಕೆ ಮತ್ತು ಅನುಭವದಲ್ಲಿ ಈ ವಿಚಾರಗಳನ್ನು ತಮ್ಮ ಮುಂದೆ ಇಟ್ಟಿರುವೆ ತಮ್ಮ ಸಲಹೆಯ ನಿರೀಕ್ಷೆಯಲಿ……

                                            ಧನ್ಯವಾದಗಳೊಂದಿಗೆ,

                                                                                                        ನಿಮ್ಮ

                                                                                                     ರವಿ ಆಹೇರಿ

Reply all
Reply to author
Forward
0 new messages